ಆಧಾರ್‌ಕಾರ್ಡ್‌ನಲ್ಲಿರೋ ಫೋಟೋ ಚೆನ್ನಾಗಿಲ್ವಾ ? ಚೇಂಜ್ ಮಾಡ್ಬೋದು

By Suvarna NewsFirst Published Apr 16, 2021, 1:29 PM IST
Highlights

ಆಧಾರ್ ಕಾರ್ಡ್‌ನಲ್ಲಿರೋ ಫೋಟೋ ಚೆನ್ನಾಗಿಲ್ವಾ ? ಸುಲಭವಾಗಿ ಬದಲಾಯಿಸಬಹುದು.

ದೆಹಲಿ(ಎ.16): ಆಧಾರ್‌ಕಾರ್ಡ್ ಹೊಂದಿರುವವರದ್ದು ಒಂದೇ ಗೋಳು, ನನ್ನ ಫೋಟೋ ಚೆನ್ನಾಗಿಲ್ಲ ಎಂಬುದು. ಲ್ಯಾಪ್‌ಟಾಪ್ ವೆಬ್ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಮುದ್ರಿಸಿಕೊಂಡು ಬರೋ ಆಧಾರ್‌ ಕಾರ್ಡನ್ನು ಹೊರಗೆ ತೋರೀಸೋಕೆ ಹಿಂಜರಿಕೆ. ಯಾಕಂದ್ರೆ ನಾವು ಹೇಗಿರುತ್ತೇವೆ, ಅದಕ್ಕಿಂತ ಕಂಪ್ಲೀಟ್ ಚೇಂಜ್ ಲುಕ್‌ನಲ್ಲಿದೆ ಆಧಾರ್ ಫೋಟೋ.

ಇದೀಗ ಆಧಾರ್ ಕಾರ್ಡ್‌ನಲ್ಲಿರೋ ನಿಮ್ಮ ಹಳೆಯ ಫೋಟೋ ಬದಲಾಯಿಸಿ ಲೇಟೆಸ್ಟ್ ಫೋಟೋ ಅಪ್ ಮಾಡುವ ಅವಕಾಶ ನೀಡಲಾಗಿದೆ. ಇದಕ್ಕೆ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋದರೆ ಸಾಕು.

ಜಮೀನಿಗೂ ಆಧಾರ್‌ ರೀತಿಯ ಐಡಿ!

ನೀವು ಮಾಡಬೇಕಾದಿಷ್ಟು. ನಿಮ್ಮ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ನಿಮ್ಮ ಹಳೆಯ ಫೋಟೋ ಬದಲಾಯಿಸಿ ಹೊಸ ಫೋಟೋ ಹಾಕಬೇಕು ಅನ್ನಿ. ಅಲ್ಲಿರುವ ಆಧಾರ್‌ಕಾರ್ಡ್‌ ಎಕ್ಸಿಕ್ಯೂಟಿವ್ 25 ರೂಪಾಯಿ ಫೋಟೋ ಚೇಂಜ್ ಫೀಸ್ ಮತ್ತು ಜಿಎಸ್‌ಟಿ ದರ ಸೇರಿಸಿ ಮೊತ್ತವನ್ನು ಹೇಳುತ್ತಾರೆ. ಫೋಟೋ ಚೇಂಜ್ ಮಾಡುವ ಹಣವನ್ನು ನೀಡಿದ ನಂತರ ಎಕ್ಸಿಕ್ಯೂಟಿವ್ ನಿಮ್ಮ ಫೋಟೋ ಬದಲಾಯಿಸುತ್ತಾರೆ. ಹಾಗೆಯೇ ಅವರು ನಿಮಗೊಂದು ಸ್ವೀಕೃತಿ ರಸೀದಿಯನ್ನೂ ನೀಡುತ್ತಾರೆ. ಇದರಲ್ಲಿ ಒಂದು ಅಪ್ಡೇಟ್ ರಿಕ್ವೆಸ್ಟ್ ನಂಬರ್ ಇರುತ್ತದೆ.

ಆಧಾರ್ ಕಾರ್ಡ್ ಫೋಟೋ ಬದಲಾಯಿಸುವ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಹೀಗಿದೆ :

1] UIDAI ವೆಬ್‌ಸೈಟ್ - uidai.gov.in ನಲ್ಲಿ ಲಾಗ್ ಇನ್ ಮಾಡಿ ಮತ್ತು ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

2] ಆಧಾರ್ ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಹತ್ತಿರದ ಸ್ಥಳೀಯ ಆಧಾರ್ ದಾಖಲಾತಿ ಕೇಂದ್ರದಲ್ಲಿ ಕೆಲಸ ಮಾಡುವ ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ;

3] ಆಧಾರ್ ಎಕ್ಸಿಕ್ಯೂಟಿವ್ ನಿಮ್ಮ ಬಯೋ ಮೆಟ್ರಿಕ್ ವಿವರವನ್ನು ಪಡೆಯುತ್ತಾನೆ.

4] ಆಧಾರ್ ದಾಖಲಾತಿ ಕೇಂದ್ರದ ಕಾರ್ಯನಿರ್ವಾಹಕ ನಿಮ್ಮ ಫೋಟೋ ತೆಗೆದುಕೊಳ್ಳುತ್ತಾನೆ

5] ಕಾರ್ಯನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಫೋಟೋ ಜೊತೆಗೆ ₹ 25 ಮತ್ತು ಜಿಎಸ್‌ಟಿ ಚಾರ್ಜ್ ಮಾಡಿ ನವೀಕರಿಸುತ್ತಾರೆ.

click me!