ಕೊರೋನಾ ನಿರ್ಬಂಧ: ಏಪ್ರಿಲ್ ಮೊದಲೆರಡು ವಾರದಲ್ಲಿ ನಿರುದ್ಯೋಗ ಸಮಸ್ಯೆ ಶೇ.8ರಷ್ಟು ಹೆಚ್ಚಳ!

By Suvarna News  |  First Published Apr 16, 2021, 2:29 PM IST

ಕೊರೋನಾ ವೈರಸ್ ಕಾರಣ ಒಂದೊಂದೆ ರಾಜ್ಯಗಳು ಕಠಿಣ ನಿರ್ಬಂಧ ಹೇರಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಕರ್ಫ್ಯೂ ಜಾರಿಯಾಗಿದೆ. ಕಠಿಣ ರೂಲ್ಸ್ ಹೇರಿದ ಎರಡೇ ವಾರಕ್ಕೆ ಭಾರತದ ನಿರುದ್ಯೋಗ ಸಮಸ್ಯೆಯಲ್ಲೂ ಹೆಚ್ಚಳವಾಗಿದೆ. ಈ ಕುರಿತು ಆತಂಕಕಾರಿ ವರದಿ ಇಲ್ಲಿದೆ.


ನವದೆಹಲಿ(ಏ.16): ಭಾರತದಲ್ಲಿ ಕೊರೋನಾ ದಾಖಲೆ ಬರೆದಿದೆ. ಒಂದೇ ದಿನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗೋ ಮೂಲಕ ದಾಖಲೆ ಬರೆದಿದೆ. ಏಪ್ರಿಲ್ ಆರಂಭದಿಂದ ಕೊರೋನಾ ನಿಯಂತ್ರಣಕ್ಕೆ 144 ಸೆಕ್ಷನ್ ಜಾರಿ, ನೈಟ್ ಕರ್ಫ್ಯೂ,  ಶಾಲಾ-ಕಾಲೇಜು ಬಂದ್, ಸಿನಿಮಾ, ಸಭೆ ಸಮಾರಂಭಕ್ಕೆ ನಿರ್ಬಂಧ ಸೇರಿದಂತೆ ಹಲವು ಕಠಿಣ ನಿಯಮ ಜಾರಿಯಾಗಿದೆ. ಪರಿಣಾಮ ಕೇವಲ ಎರಡು ವಾರದಲ್ಲಿ ನಿರುದ್ಯೋಗದ ಸಮಸ್ಯೆ ಕೂಡ ದುಪ್ಪಟ್ಟಾಗಿದೆ.

ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು?

Tap to resize

Latest Videos

undefined

ಕೊರೋನಾ ಹಾಗೂ ಕಳೆದ ವರ್ಷ ಹೇರಿದ್ದ ಲಾಕ್‌ಡೌನ್ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಿಸಿತ್ತು. ಇದೀಗ ಏಪ್ರಿಲ್ 2 ವಾರದಲ್ಲಿ ಹೊಸ ನಿಯಮಗಳು ಜಾರಿಯಾಗಿರುವ ಹಿನ್ನಲೆ ಭಾರತದ ನಿರುದ್ಯೋಗ ಸಮಸ್ಯೆ ಶೇಕಡಾ 8 ರಷ್ಟು ಹೆಚ್ಚಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ಅಧ್ಯಯನ ವರದಿ ಹೇಳಿದೆ.

ನಿರುದ್ಯೋಗ ಸಮಸ್ಯೆ ಶೇಕಡಾ 8ರಷ್ಟು ಇಳಿಕೆಯಾಗಿದೆ. ಇನ್ನು ಮುಂಬೈ, ಬೆಂಗಳೂರು, ದೆಹಲಿ ಸೇರಿದಂತೆ ಮಹಾನಗರಗಳಿಂದ ವಲಸೆ ಕಾರ್ಮಿಕರು ಮತ್ತೆ ತಮ್ಮ ತವರಿನತ್ತ ಮರಳುತ್ತಿದ್ದಾರೆ. ಇದರಿಂದ ಕಾರ್ಮಿಕರು ಕೆಲಕ್ಕೆ ಹಾಜರಾಗುವ ಸಂಖ್ಯೆ ಶೇಕಡಾ 40 ಕ್ಕೆ ಇಳಿದಿದೆ.

ಕರ್ನಾಟದ ನಿರುದ್ಯೋಗಿ ಯುವಕರಿಗೆ ಯಡಿಯೂರಪ್ಪ ಬಂಪರ್ ಆಫರ್

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ಪ್ರಕಾರಣ  ಭಾರತದಲ್ಲಿ ನಿರುದ್ಯೋಗ ದರವು 7.2% ರಷ್ಟಿದ್ದು, ನಗರ ನಿರುದ್ಯೋಗವು 8.4% ಮತ್ತು ಗ್ರಾಮೀಣ ನಿರುದ್ಯೋಗ ಏಪ್ರಿಲ್ 14 ರ ವೇಳೆಗೆ 6.6% ರಷ್ಟಾಗಿದೆ. ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ನಿರುದ್ಯೋಗವು 6.52% ರಷ್ಟಿದ್ದು, ನಗರ ನಿರುದ್ಯೋಗ 7.24% ಮತ್ತು ಗ್ರಾಮೀಣ ನಿರುದ್ಯೋಗ 6.17%. ಕ್ಕೆ ಏರಿಕೆಯಾಗಿದೆ.

ದಿಢೀರ್ ನಿರುದ್ಯೋಗ ಸಮಸ್ಯೆ ಏರಿಕೆಗೆ ಹೊಸ ಕೊರೋನಾ ನಿರ್ಬಂಧಗಳು ಕಾರಣ ಎಂದು CMIE ಹೇಳಿದೆ. ಆದರೆ ಕಳೆದ ವರ್ಷ ಹೇರಲಾಗಿದ್ದ ಸಂಪೂರ್ಣ ಲಾಕ್‌ಡೌನ್ ಬೀರಿದ ಪರಿಣಾಣ ಇದಕ್ಕಿಂತ ಭೀಕರವಾಗಿದೆ. ಈ ಬಾರಿ ಹೇರುವ ಕೊರೋನಾ ನಿರ್ಬಂಧಗಳು ನಿರುದ್ಯೋಗದ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ನಿಶ್ಚಿತ. ಆದರೆ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇರಲಿದೆ ಎಂದು CMIE ಹೇಳಿದೆ.

click me!