ಜ.1 ಕ್ಕೆ ಭಾರತದಲ್ಲಿ 67385 ಮಕ್ಕಳ ಜನನ: ವಿಶ್ವದಲ್ಲೇ ನಂ.1

By Kannadaprabha NewsFirst Published Jan 3, 2020, 10:42 AM IST
Highlights

ಜ.1ಕ್ಕೆ ಭಾರತದಲ್ಲಿ 67385 ಮಕ್ಕಳ ಜನನ: ವಿಶ್ವದಲ್ಲೇ ನಂ.1 |  ಭಾರತ, ಚೀನಾ, ನೈಜೀರಿಯಾ ಟಾಪ್‌ 3 | ಫಿಜಿಯಲ್ಲಿ ಮೊದಲ ಮಗು, ಅಮೆರಿಕದಲ್ಲಿ ಕಡೆಯ ಮಗು

ವಿಶ್ವಸಂಸ್ಥೆ (ಜ. 03): ಜನಸಂಖ್ಯೆ ಆಧಾರದಲ್ಲಿ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ, ಹೊಸ ವರ್ಷದ ದಿನದಂದು ಬರೋಬ್ಬರಿ 67,385 ಮಕ್ಕಳು ಜನಿಸಿದ್ದಾರೆ. ಆ ಮೂಲಕ ಜ.1ರಂದು ಅತೀ ಹೆಚ್ಚು ಮಕ್ಕಳು ಜನಿಸಿದ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ.

ಚಿತ್ರ ಸಂಪುಟ: ಹತ್ತು ಮುಳುಗಿದ ಹೊತ್ತು; 10 ರಿಂದ 19 ಹೀಗಿತ್ತು!

46,299 ಮಕ್ಕಳು ಜನಿಸುವ ಮೂಲಕ ಚೀನಾ ಎರಡನೇ ಸ್ಥಾನ ಹಾಗೂ 26,039 ಮಕ್ಕಳ ಜನನವಾಗುವ ಮೂಲಕ ನೈಜೀರಿಯಾ ಮೂರನೇ ಸ್ಥಾನ ಪಡೆದಿದೆ. ಈ ದಿನ ವಿಶ್ವಾದ್ಯಂತ 3,92,078 ಮಕ್ಕಳು ಜನಿಸಿದ್ದಾರೆ ಎಂದು ಯುನಿಸೆಫ್‌ ಹೇಳಿದೆ. ಹೊಸ ವರ್ಷದ ಮೊದಲ ದಿನದ ಪ್ರಥಮ ಮಗು ಫಿಜಿಯಲ್ಲಿ ಜನಿಸಿದರೆ ಕೊನೆಯ ಮಗು ಅಮೆರಿಕದಲ್ಲಿ ಜನಿಸಿದೆ.

ದಶಕದ ನೆನಪು- ಕಾಯಿನ್ ಬೂತ್ ಸಂಪೂರ್ಣ ಮಾಯ: ನೋಟುಗಳ ಗಾತ್ರ ಚಿಕ್ಕ!

2019ರ ಅಂತ್ಯಕ್ಕೆ ಚೀನಾದಲ್ಲಿ 143 ಕೋಟಿ ಹಾಗೂ ಭಾರತದಲ್ಲಿ 137 ಕೋಟಿ ಜನಸಂಖ್ಯೆ ಇದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಇದು ಕ್ರಮವಾಗಿ ವಿಶ್ವ ಜನಸಂಖ್ಯೆಯ ಶೇ.19 ಹಾಗೂ ಶೇ.18ಕ್ಕೆ ಸಮ. ಸದ್ಯ ವಿಶ್ವದ ಜನಸಂಖ್ಯೆ 780 ಕೋಟಿಗೆ ಏರಿದ್ದು, 2100ರ ವೇಳೆಗೆ 1100 ಕೋಟಿಗೆ ಏರಲಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ.

"

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!