ರಾಜಸ್ಥಾನ ಆಸ್ಪತ್ರೆಯಲ್ಲಿ 100 ಮಕ್ಕಳ ಸಾವು: ಭಾರೀ ಆಕ್ರೋಶ

By Kannadaprabha NewsFirst Published Jan 3, 2020, 10:23 AM IST
Highlights

ರಾಜಸ್ಥಾನ ಆಸ್ಪತ್ರೇಲಿ 100 ಮಕ್ಕಳ ಸಾವು: ಪ್ರಕರಣಕ್ಕೆ | ಸೋನಿಯಾಗಾಂಧಿ ಪ್ರವೇಶ | ಘಟನೆ ಕುರಿತು ಸಿಎಂ ಗೆಹ್ಲೋಟ್‌ರಿಂದ ವರದಿ ಕೇಳಿದ ಸೋನಿಯಾ |  ಕೋಟಾ ಆಸ್ಪತ್ರೆಗೆ ಇಂದು ಕೇಂದ್ರದ ಉನ್ನತ ತಂಡ ರವಾನೆ

ಕೋಟಾ (ಜ. 03): ಇಲ್ಲಿನ ಜೆಕೆ ಲೋನ್‌ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಪಳಿ ಮುಂದುವರಿದಿದ್ದು, ಕಳೆದ 72 ಗಂಟೆ ಅವಧಿಯಲ್ಲಿ 11 ಮಕ್ಕಳು ಅಸುನೀಗಿವೆ. ಇದರೊಂದಿಗೆ ಕಳೆದೊಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಶಿಶುಗಳ ಮರಣ ಸಂಖ್ಯೆ 102 ಕ್ಕೇರಿದೆ.

ಹುವಾ ತೋ ಹುವಾ: ಮಕ್ಕಳು ಪ್ರತಿ ವರ್ಷ ಸಾಯುತ್ತಾರೆ ಎಂದ ರಾಜಸ್ಥಾನ ಸಿಎಂ!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಇಡೀ ಘಟನೆಯ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಸೂಚಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿರುವ ಹಿನ್ನೆಲೆಯಲ್ಲಿ ಮತ್ತು ಪ್ರಕರಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೋನಿಯಾ ಮಧ್ಯಪ್ರವೇಶ ಮಾಡಿದ್ದಾರೆ.

ಬೆಂಗಳೂರಿನಿಂದ 2000 ಕಿ.ಮೀ ಅತೀ ದೂರದ ಬಸ್‌ ಸೇವೆ

ಮತ್ತೊಂದೆಡೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ರಾಜಸ್ಥಾನ ಸಿಎಂ ಅಶೋಕ್‌ ಗೇಹ್ಲೋಟ್‌ಗೆ ಪತ್ರ ಬರೆದಿದ್ದಾರೆ. ಅಲ್ಲದೇ ಶುಕ್ರವಾರ ತಜ್ಞ ವೈದ್ಯರ ತಂಡವೊಂದನ್ನು ರವಾನಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ನಡುವೆ ಕಡಿಮೆ ತೂಕದಿಂದಾಗಿ ಮಕ್ಕಳು ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ಶೋಕಾಸ್‌ ನೋಟಿಸ್‌ ಕೂಡ ಜಾರಿ ಮಾಡಿದೆ.

 

click me!