ಯೋಗಿ ಆದಿತ್ಯನಾಥ್-ರಾಹುಲ್ ಗಾಂಧಿ ಕುಂಡಲಿ ಹೇಳುತ್ತಿದೆ ಭವಿಷ್ಯ, 2029ರಲ್ಲಿ ಯಾರಾಗ್ತಾರೆ ಪ್ರಧಾನಿ?

Published : Sep 12, 2024, 04:45 PM IST
ಯೋಗಿ ಆದಿತ್ಯನಾಥ್-ರಾಹುಲ್ ಗಾಂಧಿ ಕುಂಡಲಿ ಹೇಳುತ್ತಿದೆ ಭವಿಷ್ಯ, 2029ರಲ್ಲಿ ಯಾರಾಗ್ತಾರೆ ಪ್ರಧಾನಿ?

ಸಾರಾಂಶ

ಯೋಗಿ ಆದಿತ್ಯನಾಥ್ ಹಾಗೂ ರಾಹುಲ್ ಗಾಂಧಿ ಕುಂಡಲಿ ರಹಸ್ಯ ಬಯಲಾಗಿದೆ. ಖ್ಯಾತ ಜ್ಯೋತಿಷಿ ಇಬ್ಬರ ರಾಶಿ ಭವಿಷ್ಯ ತೆರೆದಿಟ್ಟಿದ್ದಾರೆ. 2029ರಲ್ಲಿ ಪ್ರಧಾನಿಯಾಗುವ ಅವಕಾಶ ಹಾಗೂ ರಾಜಯೋಗ ಯಾರಿಗಿದೆ ಅನ್ನೋದು ಬಹಿರಂಗವಾಗಿದೆ. 

ನವದೆಹಲಿ(ಸೆ.12) ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇದೀಗ ಮುಂದಿನ ಚುನಾವಣೆ ಬಳಿಕ ಪ್ರಧಾನಿ ಯಾರಾಗುತ್ತಾರೆ ಅನ್ನೋ ಲೆಕ್ಕಾಚಾರ ಚರ್ಚೆ ಶುರುವಾಗಿದೆ. ಮೂರನೇ ಅವಧಿಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯಲು ವಿಫಲವಾಗಿದೆ. ಏಕಾಂಗಿಯಾಗಿ ಸ್ಪಷ್ಟಬಹುಮತ ದಾಟಿಲ್ಲ. ಇದರ ನಡುವೆ 2029ರ ಚರ್ಚೆ ಶುರುವಾಗಿದೆ. ಈ ಕುರಿತು ಯಾವ ನಾಯಕನಿಗೆ ಪ್ರಧಾನಿಯಾಗುವ ರಾಜಯೋಗವಿದೆ ಎಂದು ಖ್ಯಾತ ಜ್ಯೋತಷಿ ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ. 

ವಿಕಾಸ್ ದಿವ್ಯಕೀರ್ತಿ ಪ್ರಕಾರ ಪ್ರಧಾನಿ ಮೋದಿ ಬಳಿಕ ಅಂದರೆ 2029ರಲ್ಲಿ ಪ್ರಧಾನಿಯಾಗುವ ರಾಜಯೋಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗಿದೆ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಕುಂಡಲಿ ಹಾಗೂ ರಾಶಿ ಭವಿಷ್ಯಗಳು ರಾಜಯೋಗ ದೃಢಪಡಿಸುತ್ತಿದೆ. 2017ರಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಯೋಗಿ ಆದಿತ್ಯನಾಥ್‌ಗೆ 2019ರಲ್ಲೂ ರಾಜಯೋಗ ಮುಂದುವರಿಯಲಿದೆ. ಜೊತೆಗೆ ಉನ್ನತ ಸ್ಥಾನ ಅಲಂಕರಿಸುವ ಅವಕಾಶಗಳು ಒದಗಿಬರಲಿದೆ. ಹೀಗಾಗಿ ಜ್ಯೋತಿಷ್ಯದ ಪ್ರಕಾರ ಮೋದಿ ಬಳಿಕ ಪ್ರಧಾನಿಯಾಗಬಲ್ಲ ಎಲ್ಲಾ ಸಾಧ್ಯೆತೆಗಳು ಯೋಗಿ ಆದಿತ್ಯನಾಥ್‌ಗಿದೆ ಎಂದು ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾದ ಬಾಲಕಿ ತಾಯಿಗೆ ಯೋಗಿ ಭರವಸೆ, ಆರೋಪಿ ಶಾಪ್ ಮೇಲೆ ನುಗ್ಗಿದ ಬುಲ್ಡೋಜರ್!

ರಾಹುಲ್ ಗಾಂಧಿ ವಿಚಾರದಲ್ಲಿ ಕೆಲ ಅಡೆತಡೆಗಳು ಇವೆ ಎಂದು ಜ್ಯೋತಿಷಿ ಹೇಳಿದ್ದಾರೆ. ಪ್ರಮುಖವಾಗಿ ಮುಂದಿನ 10 ರಿಂ 15 ವರ್ಷ ರಾಹುಲ್ ಕುಂಡಲಿಯಲ್ಲಿ ರಾಜಯೋಗ ಕಾಣುತ್ತಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಸಾಧ್ಯತೆಗಳು ಮುಂದಿನ 10 ರಿಂದ 15 ವರ್ಷದಲ್ಲಿ ಕಡಿಮೆ. ಆದರೆ ರಾಹುಲ್ ಗಾಂಧಿಗೆ ಉನ್ನತ ಸ್ಥಾನ ಅಲಂಕರಿಸುವ ಸಾಧ್ಯತೆಗಳು ಸುದೀರ್ಘ ವರ್ಷಗಳ ಬಳಿಕ ಬರುವ ಸಾಧ್ಯತೆ ಇದೆ. ಆದರೆ ಸದ್ಯಕ್ಕಿಲ್ಲ ಎಂದು ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಗಳು ರಾಹುಲ್ ಗಾಂಧಿಗೆ ಪ್ರತಿಕೂಲವಾಗಿಲ್ಲ. ಹಲವು ಸವಾಲುಗಳಿದ್ದರೂ ರಾಹುಲ್ ಗಾಂಧಿಗೆ ರಾಜಯೋಗದ ಅದೃಷ್ಠ ಬಾಗಿಲು ತೆರೆದಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ. 

ಜ್ಯೋತಿಷ್ಯ ಪ್ರಕಾರ ಯೋಗಿ ಆದಿತ್ಯನಾಥ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸುವ ಸಾಧ್ಯತೆಯನ್ನು ಕುಂಡಲಿ ಹೇಳುತ್ತಿದೆ ಎಂದಿದ್ದಾರೆ. ಇತ್ತ ರಾಜಕೀಯ ವಿಶ್ಲೇಷಣೆಕಾರರು ಮುಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಗಳ ಸಾಲಿನಲ್ಲಿ ಯೋಗಿ ಆದಿತ್ಯನಾಥ್ ಮುಂಚೂಣಿಯಲ್ಲಿದ್ದಾರೆ ಎಂದು ಹಲವು ಬಾರಿ ಹೇಳಿದ್ದಾರೆ. ಹೀಗಾಗಿ 2029ರ ಲೋಕಸಭಾ ಚುನಾವಣೆ ಚರ್ಚೆಗಳು ಈಗಾಗಲೇ ಶುರುವಾಗತೊಡಗಿದೆ. ಪ್ರಮುಖವಾಗಿ ಪ್ರಧಾನಿ ಅಭ್ಯರ್ಥಿಯೇ ಚರ್ಚಾ ವಿಷಯವಾಗಿದೆ.  

ಉತ್ತರ ಪ್ರದೇಶದಲ್ಲಿ ಒಳಗೊಳಗೇ ಏನಾಗುತ್ತಿದೆ?: ಮೋದಿ, ಅಮಿತ್‌ ಶಾ, ಯೋಗಿ, ಯುಪಿ ಆಟ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌