Assembly Elections 2022 Result: 8 ವರ್ಷದ ಆಪ್ ಸಾಧನೆ ತಂದಿದೆ ಆಶ್ಚರ್ಯ

ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಗೆದ್ದಿರುವ ಏಕೈಕ ಪಕ್ಷವಾಗಿ ಹೊರಹೊಮುತ್ತಿದೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪ್ರತಿಬಿಂಬಿಸಲ್ಟಟ್ಟ ಉತ್ತರ ಪ್ರದೇಶ ಚುನಾವಣೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದಿದೆ ಕೇಸರಿ ಪಡೆ. ಅದರಲ್ಲಿಯೂ ಹಾಲಿ ಶಾಸಕರೆಲ್ಲರೂ ವಿಜಯದ ನಗೆ ಬೀರಿದ್ದು, ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಕೆಲಸವೇ ಮಾಡಿಲ್ಲವಾ ಎಂಬೊಂದು ಅನುಮಾನವನ್ನು ಹುಟ್ಟಿ ಹಾಕಿದೆ. ಅಡಳಿತದರೂಢ ಪಕ್ಷ ಈ ರೀತಿ ಗೆಲವು ಸಾಧಿಸಿದ್ದು ದೇಶದ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಇದೇ ಮೊದಲು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಜಿನಲ್ಲಿ ಆಪ್ ಕ್ಲೀನ್ ಸ್ವೀಪ್ ಮಾಡಿದೆ. ಜನ್ಮ ತಾಳಿ ಇನ್ನೂ ಎಂಟು ವರ್ಷಗಳೂ ಆಗದ ಪಕ್ಷವೊಂದು ಪಂಬಾಜ್‌ನಂಥ ರಾಜ್ಯದಲ್ಲಿ ಇಂಥದ್ದೊಂದು ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಅರವಿಂದ್ ಕೇಜ್ರಿವಾಲ್ ನಾಯಕತ್ವಕ್ಕೆ ಸಿಕ್ಕ ಜಯ. ದಿಲ್ಲಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಪಂಜಾಬ್ ಚುನಾವಣೆ ಮೇಲೂ ಪ್ರಭಾವ ಬೀರಿದೆ. ಉತ್ತರಖಾಂಡ, ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಅಗತ್ಯವಿರುವಷ್ಟ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರಕಾರ ರಚಿಸುವುದರಲ್ಲಿ ಅನುಮಾನವೇ ಇಲ್ಲ. ಚುನಾವಣೆ ಇಂಚಿಂಚು ಮಾಹಿತಿಗೆ ಸುವರ್ಣ ನ್ಯೂಸ್.ಕಾಮ್‌ಗೆ ಟ್ಯೂನ್ ಆಗಿರಿ

9:28 PM

ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!

ಪಂಜಾಬ್ ಚುನಾವಣಾ ಫಲಿತಾಂಶ (Punjab Election Result) ಪ್ರಕಟವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷದ (Aam Admi Party) ಭಗವಂತ್ ಮಾನ್ (Bhagwant Mann) ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪಂಜಾಬ್ ಚುನಾವಣೆಗಳ ಆರಂಭಿಕ ಸೂಚನೆಯಲ್ಲಿಯೇ ಆಪ್ ಪರವಾದ ಒಲವು ತೋರಲು ಆರಂಭಿಸಿದಾಗ, ಪಂಜಾಬ್ ಚುನಾವಣೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ (Volodymyr Zelensky) ಕೂಡ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಎನಿಸಿದ್ದರು.

ಉಕ್ರೇನ್ ಅಧ್ಯಕ್ಷ, ಪಂಜಾಬ್ ಚುನಾವಣೆ, ಭಗವಂತ್ ಮಾನ್.. ಎಲ್ಲಿಂದೆಲ್ಲಿಯ ಸಂಬಂಧ!

9:27 PM

5 ವರ್ಷಗಳ ಆಡಳಿತ, ಯೋಗಿ ಆ ಒಂದು ಕಾರ್ಯಕ್ಕೆ ಯುಪಿ ಜನತೆ ಕೊಟ್ಟ ಗೆಲುವಿನ ಗಿಫ್ಟ್‌!

'ಹೋಮ್ ಮಿನಿಸ್ಟರ್ ಯೋಗಿ'..! ಸೋಜಗ ಅನ್ನಿಸಿದರು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದ ಹಿಂದಿರು ಗೆಲುವಿನ ಗುಟ್ಟು ಇದೆ.. ಯಶಸ್ವಿ ಮುಖ್ಯಮಂತ್ರಿ ಅನ್ನೋ ಪದಗಳಿಗೆ  ಇನ್ನಷ್ಟು ಮೆರುಗು ತಂದಿದ್ದು ಹೋಮ್ ಮಿನಿಸ್ಟರ್ ಯೋಗಿಯೇ..

ಗೆದ್ದವನೇ ಮಹಾಶೂರ ಎನ್ನುವಂತೆ ಗೆದ್ದವರು ಮತ್ತು ಗೆದ್ದಿತ್ತಿನ ಬಾಲ ಹಿಡಿದವರು ಉತ್ತರ ಪ್ರದೇಶದಲ್ಲಿ ಮೊದಲು ಕೈ ಹಾಕುತ್ತಿದ್ದದ್ದು ಪೊಲೀಸ್ ಠಾಣೆಗೆ. ಪೊಲೀಸರಿಗೆ ಒಂದು ಕಾನೂನು ಇರಬೇಕು ಆ ಕಾನೂನಿನ ಹೆಸರಿನಲ್ಲಿ ನಾವು ದುಡ್ಡು ಮಾಡಬೇಕು ಎನ್ನವ ರಾಜಕಾರಣಿಗಳೇ ಇಲ್ಲಿ ಅಧಿಕ. ಬೆಹನ್ ಜೀ ಕಾಲದಲ್ಲಿ ಗೂಂಡಾಗಿರಿ ಒಂದು ಹಂತಕ್ಕೆ ನಿಯಂತ್ರಣ ಕ್ಕೆ ಬಂದಿತ್ತು. ನಂತರ ಬಂದ ಅಖಿಲೇಶ್ ಯಾದವ್ ಅವರ ಕಾಲದಲ್ಲಿ ಕೈ ಮೀರಿತು.

'ಹೋಮ್ ಮಿನಿಸ್ಟರ್ ಯೋಗಿ'..! ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ರಹಸ್ಯ 

9:24 PM

'ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿಗರೇ', ಮುಲಾಯಂ ಸೊಸೆ ಅಪರ್ಣಾ ಘೋಷಣೆ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಸಂಪೂರ್ಣ ಸ್ಪಷ್ಟವಾಗಿದೆ. ಭಾರತೀಯ ಜನತಾ ಪಕ್ಷ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ನೇರ ಸ್ಪರ್ಧೆಯಲ್ಲಿ ಸೋಲಿಸಿತು. ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲಿದ್ದು, ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಅಪರ್ಣಾ ಯಾದವ್ ಬಿಜೆಪಿ ಗೆಲುವಿನ ಸಂಭ್ರಮದಲ್ಲಿದ್ದಾರೆ. ಬಿಜೆಪಿ ಕಚೇರಿಗೆ ಆಗಮಿಸಿದ ಅಪರ್ಣಾ ಯಾದವ್, ಇದಕ್ಕಿಂತ ಉತ್ತಮ ಸರ್ಕಾರ ಮತ್ತು ಉತ್ತಮ ವ್ಯವಸ್ಥೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಇದರೊಂದಿಗೆ ಘೋಷವಾಕ್ಯವನ್ನು ನೀಡುತ್ತಾ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ್ದಾರೆ.

ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿ ಕಾರ್ಯಕರ್ತರು

8:42 PM

ಯುಪಿಯಲ್ಲಿ ಬಿಜೆಪಿ ಗೆಲುವು ಜಾತಿ ರಾಜಕಾರಣ ನಡೆಸುವವರಿಗೆ ದೊಡ್ಡ ಪಾಠ: ಮೋದಿ ಗುದ್ದು!

ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಕೊಂಡರೆ, ಪಂಚರಾಜ್ಯ ವಿಧಾನಸಭಾ ಚುನಾವಣೆ ಸೆಮಿಫೈನಲ್ ಎನ್ನಲಾಗಿದೆ. ಹೀಗಿರುವಾಗ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಹೀಗಿ ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳು ಬಿಜೆಪಿ ತೆಕ್ಕೆಗೆ ಸೇರಿವೆ. ಗೋವಾ ಕೂಡಾ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ದು, ಇದೊಂದು ಐತಿಹಾಸಿಕ ಗೆಲುವೆಂದೇ ಪರಿಗಣಿಸಲಾಗಿದೆ. ಹೀಗಿರುವಾಗ ಇಡೀ ಕೆಸರಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಭಿನ್ನ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಇದು ಮೋದಿ-ಯೋಗಿ ಜೋಡಿಯ ಕಮಾಲ್ ಎನ್ನಲಾಗಿದೆ.

ಜಾತಿ ರಾಜಕಾರಣ ನಡೆಸುವವರಿಗೆ ಮೋದಿ ಗುದ್ದು

8:15 PM

ಚನಿ to ಧಮಿ, ಪಂಚ ರಾಜ್ಯ ಚುನಾವಣೆಯಲ್ಲಿ ಹಾಲಿ, ಮಾಜಿ ಸಿಎಂಗೆ ಸೋಲಿನ ಕಹಿ!

ಪಂಚ ರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಧಿಕೃತ ಪ್ರಕಟಣೆ ಬಾಕಿ ಇದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಿದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಸಂಭ್ರಮ ಆಚರಿಸಿದೆ. ಇನ್ನು ಉತ್ತರಖಂಡ, ಮಣಿಪುರ ಹಾಗೂ ಗೋವಾದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕೆಲ ಘಟಾನುಘಟಿ ನಾಯಕರಿಗೆ ಸೋಲಾಗಿದೆ. ಇದರಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ, ಉತ್ತರಖಂಡ ಸಿಎಂ ಫುಷ್ಕರ್ ಸಿಂಗ್ ಧಮಿ ಪ್ರಮುಖರು.

ದೊಡ್ಡವರೆಲ್ಲಾ ಸೋತರಲ್ಲ..ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ಕಂಡ ಬಲಿಷ್ಠ ನಾಯಕರು

8:12 PM

ಭಗವಂತನ ಇಚ್ಛೆ ತಿಳಿಸಿದ ಮಾನ್, ಪ್ರಮಾಣವಚನ ರಾಜಭವನದಲ್ಲಿ ಬೇಡ, ಹಾಗಿದ್ರೆ ಮತ್ತೆಲ್ಲಿ..!

ಪಂಜಾಬ್ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ (Punjab Chief Minister elect Bhagwant Mann), ತಮ್ಮ ಮೊಟ್ಟಮೊದಲ ವಿಜಯೋತ್ಸವ ಭಾಷಣದಲ್ಲಿಯೇ  (Victory Speech )ಅದ್ಭುತ ನಿರ್ಧಾರ ಮಾಡುವ ಮೂಲಕ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಗೂ ಮುನ್ನ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ (Arvind Kejiriwal) ಖಲೀಸ್ತಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರೊಬ್ಬ ಭಯೋತ್ಪಾದಕ ಸ್ನೇಹಿ ಎನ್ನುವ ಆರೋಪಗಳನ್ನು ಆಪ್ ಎದುರಿಸಿತ್ತು. ಆದರೆ, ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Admni Party) ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲಿಯೇ ಧುರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಭಗವಂತ್ ಮಾನ್, ಪ್ರಮಾಣವಚನ ಸಮಾರಂಭವು ಪಂಜಾಬ್ ನ ರಾಜಭವನದ ಬದಲಾಗಿ  ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ (Nawanshahr ) ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ (Khatkarkalan ) ನಡೆಯಲಿದೆ ಎಂದು ಘೋಷಣೆ ಮಾಡಿದರು.
ಪಂಜಾಬ್ ನಿಯೋಜಿತ ಮುಖ್ಯಮಂತ್ರಿಯ ಸ್ಪೆಷಲ್ ಘೋಷಣೆ, ಏನೆಲ್ಲಾ ಹೇಳಿದ್ರು..!

8:07 PM

ಮೈತ್ರಿ ಇಲ್ಲದೆ 20 ಕ್ಷೇತ್ರದಲ್ಲಿ ಗೆಲುವು, ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!

ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 21. ಈಗಾಗಲೇ ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಗೋವಾ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಗೆಲುವಿನ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!

7:20 PM

ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?

ಪಂಚ ರಾಜ್ಯಗಳ ಚುನಾವಣೆಯಲ್ಲಿ (Assembly Elections 2022) ಭಾರಿ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಪಂಜಾಬ್. ಆಡಳಿತರೂಢ ಕಾಂಗ್ರೆಸ್ ನೆಲಕ್ಕಪ್ಪಳಿಸಿದರೆ, ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರದ ಗದ್ದುಗೆ ಏರುತ್ತಿದೆ. ಈ ಬೆನ್ನಲ್ಲೇ ಮಾತನಾಡಿದ ಪಕ್ಷದ ವರಿಷ್ಠ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಕನಸು ಇಂದು ನನಸಾಗಿದೆ. ಪಂಜಾಬ್‌ನ ಜನರು ಈ ಬಾರಿ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ, ಆಮ್‌ ಆದ್ಮಿ ಪಾರ್ಟಿ ದೇಶದಲ್ಲಿ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಕೇಜ್ರಿವಾಲ್ ಹೇಳಿದ್ದೇನು?

6:51 PM

ಮೋದಿ ನಂಬಿ ಮತ ನೀಡಿದವರಿಗೆ ಧನ್ಯವಾದ ಎಂದ ಕೇಂದ್ರ ಸಚಿವ ನಾರಾಯಣಸ್ವಾಮಿ

 ಪಂಚರಾಜ್ಯ ಚುನಾವಣೆಯ 4 ರಾಜ್ಯಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಾರಾಯಣಸ್ವಾಮಿ (central minister narayanasamy) ಪ್ರಧಾನಿ ಮೋದಿಯವರನ್ನು ನಂಬಿ ಮತ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಪಂಜಾಬ್ ನಲ್ಲಿ ಆಮ್‌ಆದ್ಮಿ ಪಾರ್ಟಿ (aam aadmi party) ಪಂಜಾಬ್‌ನಲ್ಲಿ ಬಹಳ ದೊಡ್ಡ ಗೆಲುವು ಕಂಡಿದ್ದು , ಈ ಬಗ್ಗೆ ಮಾತನಾಡಿದ ನಾರಾಯಣಸ್ವಾಮಿ ಖಂಡಿತವಾಗಿಯೂ ಎಎಪಿ ತನ್ನ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಯನ್ನು ತಂದಿದೆ.

"

5:50 PM

'ಪಂಚರಾಜ್ಯಗಳಲ್ಲಿ 4 ರಾಜ್ಯಗಳ ಗೆಲುವಿಗೆ ಮೋದಿ ವರ್ಚಸ್ಕೇ ಕಾರಣ'

ರೇಣುಕಾಚಾರ್ಯ ಹೇಳಿಕೆ. ದೇಶದಲ್ಲಿ ನರೇಂದ್ರ ಮೋದಿ ವರ್ಚಸ್ಸು, ಜನತೆಯ ಅಭಿಮಾನ ಈ ಯಶಸ್ಸಿಗೆ ಚುನಾವಣೆ ಜಯಗಳಿಸೋಕೆ ಕಾರಣ. ಕಾಂಗ್ರೆಸ್ ಮುಖಂಡರನ್ನ ಬ್ಯಾಟರಿ ಹಾಕಿ ಹುಡುಕಬೇಕು. ಅವರು ಎಲ್ಲಿಯೂ ಕಾಣ್ತಾನೆ ಇಲ್ಲ. ಎಲೆಕ್ಷನ್ ರಿಸಲ್ಟ್ ಬಂದ ಕೂಡಲೇ ನಾಪತ್ತೆಯಾಗಿದ್ದಾರೆ. ಪಂಜಾಬಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ರು, ಆದ್ರೆ ಈ ಬಾರಿ ಪತ್ತೇನೆ ಇಲ್ಲ. ನಮ್ಮ ರಾಜ್ಯದ ನಾಯಕರು ಗೋವಾ ಹೋಗಿ ಕೂತ ಕೊಂಡಿದ್ದಾರೆ. ಇಲ್ಲಿ ಪಾದಯಾತ್ರೆ ಅಂತ ನಾಟಕ ಮಾಡಿ ಈಗ ಗೋವಾ ಹೋಗಿದಾರೆ. ಈ ಎಲೆಕ್ಷನ್ ರಿಸಲ್ಟ್ ನೋಡಿದ್ರೆ, ಕರ್ನಾಟಕದಲ್ಲೂ 2023 ರಲ್ಲಿ ಬಿಜೆಪಿ ಬರೋದು ಪಕ್ಕಾ ಅಂತ ಕನ್ಫರ್ಮ್ ಆಗಿದೆ. ಆಮ್ ಆದ್ಮಿ ಪಾರ್ಟಿ ಸುಳ್ಳು ಭರವಸೆ ನೀಡಿ ಪಂಜಾಬ್ ನಲ್ಲಿ ವಿನ್ ಆಗಿದ್ದಾರೆ ಅಷ್ಟೆ. ಕಾಂಗ್ರೆಸ್ ನವರ ಕತೆ ಏನು ಅಂತ ಕೇಳಿ, ಅವರ ಅಡ್ರೆಸ್ ಇಲ್ಲವೇ ಇಲ್ಲ. ಉತ್ತರ ಪ್ರದೇಶದಲ್ಲಿ ಅವರು ಧೂಳಿಪಟ ಆಗಿದ್ದಾರೆ. ನಿರಾಣಿ ಯಾವ ಕಾರಣಕ್ಕೆ ಡೆಲ್ಲಿಗೆ ಹೋಗಿದ್ದಾರೆ ಗೊತ್ತಿಲ್ಲ. ಆದ್ರೆ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಧ್ಯಕ್ಕಿಲ್ಲ.

 

 

5:24 PM

'ಒಂದು ಕಾಲದಲ್ಲಿ ಕಾಂಗ್ರೆಸ್ ಪಾರ್ಟಿ ವಿದ್ಯುತ್ ಕಂಬ ನಿಲ್ಲಿಸಿದ್ರೂ ಗೆಲ್ತಾರೆ ಅಂತಿತ್ತು, ಇಂದು ಸೋನಿಯಾ,ರಾಹುಲ್ ನಿಂತ್ರು ಗೆಲ್ಲೋದಿಲ್ಲ'

ಒಂದು ಕಾಲದಲ್ಲಿ ಕಾಂಗ್ರೆಸ್ ಪಾರ್ಟಿ ವಿದ್ಯುತ್ ಕಂಬ ನಿಲ್ಲಿಸಿದ್ರು, ಗೆಲ್ತಾರೆ ಅಂತಿತ್ತು. ಇಂದು ಸೋನಿಯಾ,ರಾಹುಲ್ ನಿಂತ್ರು ಗೆಲ್ಲೋದಿಲ್ಲ.ನೀರಿಗಾಗಿ ಪಾದಯಾತ್ರೆ ಮಾಡಿದ್ರು.ಈಗ ಅವರೇ ನೀರು ಕುಡಿಯುವ ಸಮಯ ಬಂದಿದೆ. ಗೋವಾಕ್ಕೆ ಸರ್ಕಾರ ಮಾಡಲು ರಾಜ್ಯದಿಂದ ಬ್ಯಾಗ್ ತುಂಬಿ ಹೋದ್ರು.ಈಗ ಖಾಲಿ ಬ್ಯಾಗ್ ತರ್ತಾ ಇದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದಲ್ಲಿ ಬಿಜೆಪಿ ಗೆದ್ದಿದೆ.ಮೊದಲು ಕ್ರಿಸ್ತ ಪೂರ್ವ, ಕ್ರಿ.ಶ ಅಂತಿದ್ರು. ಇನ್ನು ಮೋದಿ ಪೂರ್ವ, ಮೋದಿ ಬಳಿಕ ಎನ್ನುವ ಕಾಲ ಬರ್ತದೆ ಈಗ ಮೋದಿ ಯುಗ ಆರಂಭವಾಗಿದೆ.

"

5:20 PM

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಳುಗುತ್ತೆ: ಬೊಮ್ಮಾಯಿ

ಉಜ್ವಲ್ ಯೋಜನೆ ಸೇರಿ ಎಲ್ಲಾ ಯೋಜನೆಗಳು ಮೋದಿಯವರನ್ನು ಯಾವತ್ತು ಕೈಬಿಡೋಕೆ ಸಾಧ್ಯವಿಲ್ಲ. 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ‌. ಈಗ ಆಪ್ ಗೆದ್ದಿರಬಹುದು. ಕರ್ನಾಟಕದ ಜನರಿಗೆ ಸಮ್ಮಿಶ್ರ ಸರ್ಕಾರದ ಆಡಳಿತ ವೈಫಲ್ಯ ಗೊತ್ತಿದೆ. ಕಳೆದ ಎರಡು ವರ್ಷ ಕೋವಿಡ್ ಪ್ರಭಾವ ಇದ್ರು ಕೂಡ ಕೆಲಸ ಮಾಡಿದ್ದು ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತು ಕಾರ್ಯಕರ್ತರ ಶ್ರಮ. ಅತ್ಯಂತ ಹೆಚ್ಚು ಕಿಟ್ ಹಂಚಿರುವ ಪಕ್ಷ ಇದ್ರೆ ಅದು ಬಿಜೆಪಿ. ರಾಜ್ಯದಲ್ಲಿ ಪಕ್ಷದ ಸಂಘಟನೆ ಆನೆ ಬಲದಂತೆ ಮುನ್ನುಗ್ಗುತ್ತಿದೆ. ಕಾಂಗ್ರೆಸ್ ನೋಂದಣಿ ಮಾಡಬೇಕು ಎಂದರೆ ಟಿವಿ ಫ್ರಿಡ್ಜ್ ಹಂಚುತ್ತಿದ್ದಾರೆ. ಅದು ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕೊಡೊದು ತಗೊಳ್ಳೋದು,ಅವರಿಗೆ ಹಿಂದಿನಿಂದ ಗೊತ್ತಿದೆ.  ಅಧಿಕಾರಕ್ಕೆ ಬಂದ್ರೆ ಕೊಟ್ಟಿದ್ದರ ಡಬಲ್ ತಗೊಳ್ಳತ್ತೆ. ಕಾಂಗ್ರೆಸ್ ಮುಳುಗಿ ಹೋಗಿದೆ. ಮುಂದೆ ರಾಜ್ಯದಲ್ಲಿ ಮುಳುಗಿ ಹೋಗತ್ತೆ. ರಾಜ್ಯದ ಕಾಂಗ್ರೆಸ್ ನಾಯಕರು ಸರ್ಕಾರ ಮಾಡೋಕೆ ಗೋವಾ ಹೋಗಿದ್ದಾರೆ. ಆದ್ರೆ ಅವರ ಕಾಲಗುಣ ಸರಿಯಿಲ್ಲ ಎಂದು ಪರೋಕ್ಷವಾಗಿ ಡಿಕೆಶಿಗೆ ವ್ಯಂಗ್ಯ ಮಾಡಿದ ಸಿಎಂ.

 

 

5:02 PM

ಕಾಂಗ್ರೆಸ್ ಸೋಲಿನಲ್ಲಿಯೂ ಗೆಲುವಿನ ಲೆಕ್ಕಚಾರ ಹಾಕುಕ್ತಿದೆ ಕಾಂಗ್ರೆಸ್

"

5:00 PM

ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರೋ ಹಡಗು: ಶ್ರೀರಾಮುಲು

ಇಷ್ಟು ದಿನಗಳ ಕಾಲ‌ ಕಾಂಗ್ರೆಸ್ ಪಕ್ಷ ಅಂದ್ರೆ ದೊಡ್ಡ ಪಕ್ಷ ಅಂತಿದ್ವಿ. ಆದ್ರೆ ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರೋ ಹಡಗು. ಪಂಚರಾಜ್ಯ ಚುನಾವಣಾ ಫಲಿತಾಂಶ ನೋಡಿದ್ರೆ ಮುಳುಗುತ್ತಿತ್ತು ಅಂತ ಹೇಳ್ತಿದ್ವೋ, ಆದ್ರೆ ಈಗಾಗಲೇ ಮುಳುಗಿ ಹೋಗಿರೋ‌ ಪಕ್ಷ. ಬಿಜೆಪಿಗೆ ನಾಡಿನ, ದೇಶದ ಜನರು ಮ್ಯಾನ್ಡೇಟರಿ ನೀಡಿದ್ದಾರೆ. ಸಂಬಂಧಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ. ದೇಶದಲ್ಲಿ ಕಾಂಗ್ರೆಸ್ ಧೂಳೀಪಟ ಆಗ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೂಡ ಧೂಳಿ ಪಟ ಆಗಬೇಕು.ಹಾಗಾಗಿ ಸಿಎಂ ಬೊಮ್ಮಾಯಿ, ಅಧ್ಯಕ್ಷ ಕಟೀಲ್ ನೇತೃತ್ವದಲ್ಲಿ ಚುನಾವಣೆ ಹೋಗ್ತೀವಿ. ನಮ್ಮ ನಾಯಕ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸ್ತೇವೆ.ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ.

 

 

4:50 PM

ಪಂಜಾಬ್‌ ಪೂರ್ತಿ ಗುಡಿಸಿದ ಪೊರಕೆ... ಭಗವಂತ್ ಮಾನ್ ರೂಪದಲ್ಲಿ ಬಂದ ಪುಟ್ಟ ಬಾಲಕ

ಪಂಜಾಬ್ ಅಸೆಂಬ್ಲಿ ಚುನಾವಣೆ 2022 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಗೆಲುವಿನತ್ತ ಮುನ್ನಡೆಯುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಂಜಾಬ್‌ನಾದ್ಯಂತ ಸಂಭ್ರಮಾಚರಣೆ ನಡೆಸಿದರು. ದೆಹಲಿಯ ಎಎಪಿ ಕಾರ್ಯಕರ್ತರು ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್.
 

ಹೇಗಿದ್ದಾನೆ ಈ ಬಾಲಕ?

 

 

4:47 PM

ಉತ್ತರಾಖಂಡ ಗೆಲುವಿನ ಕ್ರೆಡಿಟ್ ಪ್ರಧಾನಿ ಮೋದಿಗೆ : ಪ್ರಹ್ಲಾದ್ ಜೋಶಿ

 ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 273 ಸ್ಥಾನ ಗೆದ್ದು ಬಹುಮತ ಪಡೆದಿದೆ. ಗೋವಾದಲ್ಲಿ 18, ಉತ್ತರಾಖಂಡದಲ್ಲಿ 44 ಸ್ಥಾನ ಪಡೆದಿದೆ. 

ಉತ್ರರಖಾಂಡವನ್ನು ಜೋಶಿಯವರು ಗೆಲ್ಲಿಸಿದ್ದು ಹೇಗೆ?

"

4:45 PM

ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

ಪಂಜಾಬ್‌ನಲ್ಲಿ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ. ಎಷ್ಟು ಹದಗೆಟ್ಟಿದೆ ಎಂದರೆ ಕಾಂಗ್ರೆಸ್‌ನ ಸಿಎಂ, ಪಕ್ಷದ ಅಧ್ಯಕ್ಷ ಸೇರಿ ಅದೆಂತಾ ಘಟಾನುಘಟಿ ನಾಯಕನಾದರೂ ಸರಿ, ಸಾಮಾನ್ಯರ ಮುಂದೆ ಸೋಲಿಗೆ ಎದೆಯೊಡ್ಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಂಗ್ರೆಸ್ ನಾಯಕ, ಹಾಲಿ ಸಿಎಂ ಚರಣಜಿತ್ ಸಿಂಗ್ ಪರಿಸ್ಥಿತಿ ಇದೆ ಆಗಿದೆ. ಬದೌರ್ ಹಾಗೂ ಚಮ್ಕೌರ್ ಸಾಹೀಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚರಣ್‌ಜಿತ್ ಸಿಂಗ್ ಚನಿ ಎರಡೂ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಅದರಲ್ಲೂ ಬದೌರ್ ಕ್ಷೇತ್ರದಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿರುವ ಆಪ್ ಆಭ್ಯರ್ಥಿ ಲಭಾ ಸಿಂಗ್ ವಿರುದ್ಧದ ಸೋಲು ಇದೀಗ ಭಾರಿ ಚರ್ಚೆಯಾಗುತ್ತಿದೆ.

ಯಾರು ಈ ಲಭಾ ಸಿಂಗ್

4:42 PM

ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ!

 ಬಹು ನಿರೀಕ್ಷಿತ ಪಂಚರಾಜ್ಯ ಚುನಾವಣಾ ಫಲಿತಾಂಶ ಬಹುತೇಕ ಅನಾವರಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಇತ್ತ ಉತ್ತರಾಖಂಡ್‌ನಲ್ಲೂ ಬಿಜೆಪಿ ಗೆಲುವಿನ ನಗು ಬೀರಿದೆ. ಆರಂಭಿಕ ಟ್ರೆಂಡ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿತ್ತಾದರೂ ಬಳಿಕ ಬಿಜೆಪಿ ಗೆಲುವಿನತ್ತ ದಾಪುಗಾಲು ಇಟ್ಟಿತ್ತು. ಆದರೀಗ ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಧಾಮಿ ಸೋಲನುಭವಿಸಿದ್ದಾರೆ.

ಸಿಎಂ ಪುಷ್ಕರ್ ಧಾಮಿಗೆ ಸೋಲು

4:40 PM

ಮತ್ತೆ ಕೇಸರಿಯಾದ ಉತ್ತರ... ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ

ಉತ್ತರಪ್ರದೇಶದಲ್ಲಿ ಕಮಲ ಮತ್ತೆ ಅರಳಿದೆ. ಸಿಎಂ ಯೋಗಿ ಆದಿತ್ಯನಾಥ್ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರಿಕ್ಕೆ ಬಂದಿದ್ದಾರೆ. ದೇಶಾದ್ಯಂತ ಬಿಜೆಪಿ ಬೆಂಬಲಿಗರು ಗೆಲುವಿನ ಸಂಭ್ರಮ ಆಚರಿಸುತ್ತಿದ್ದು, ಪುಟ್ಟ ಮಗುವೊಂದು ಸಿಎಂ ಯೋಗಿ ಆದಿತ್ಯನಾಥ್‌ ರೂಪದಲ್ಲಿ ಕಂಗೊಳಿಸುತ್ತಿದೆ. ಯೋಗಿಯಂತೆ ಈ ಪಟ್ಟ ಮಗುವಿನ ತಲೆ ಕೂದಲನ್ನು ಪೂರ್ತಿಯಾಗಿ ತೆಗೆಯಲಾಗಿದ್ದು, ಸನ್ಯಾಸಿಯಂತೆ ಕೇಸರಿ ವಸ್ತ್ರದಲ್ಲಿ ಮಗು ಮಿಂಚುತ್ತಿದೆ. ಒಂದೂವರೆ ವರ್ಷದ ಈ ಮಗುವಿನ ಹೆಸರು ನವ್ಯ. ಬಿಜೆಪಿ ಅಭಿಮಾನಿಗಳಾಗಿರುವ ಈ ಮಗುವಿನ ಪೋಷಕರು ಯೋಗಿಯಂತೆ ಈ ಮಗುವಿಗೆ ವೇಷ ಹಾಕಿಸಿದ್ದಾರೆ.ತನ್ನ ತಂದೆಯೊಂದಿಗ ಲಖ್ನೋದ ಬಿಜೆಪಿ ಕಚೇರಿಗೆ ಆಗಮಿಸಿದ ಈ ಮಗು ಕೈಯಲ್ಲಿ ಬುಲ್ಡೋಜರ್‌ನ ಆಟದ ಸಾಮಾನು ಹಿಡಿದುಕೊಂಡಿತ್ತು.

4:36 PM

ಕಾಂಗ್ರೆಸ್‌ಗೆ ಜ್ಞಾನೋದಯ ಆಗುವ ಫಲಿತಾಂಶ: ಎಚ್‌ಡಿಕೆ

ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್‌ಗೆ ಜ್ಞಾನೋದಯ ಆಗುವ ಫಲಿತಾಂಶ ಇದು. ಬಿಜೆಪಿಗೆ ಫೈಟ್‌ ಕೊಡಲು ಪ್ರಾದೇಶಿಕ ಪಕ್ಷಗಳು ಸಮರ್ಥ ಎನ್ನುವನ್ನು ಈ ಫಲಿತಾಂಶ ಹೇಳಿದೆ: ಎಚ್‌ಡಿಕೆ 

"

4:10 PM

ಕಾಂಗ್ರೆಸ್‌ನವ್ರು ಕೃಷ್ಣೆ ಕಡೆ ನಡಿಗೆ ಹೋಗೋದು ಬೇಡ, ಇಟಲಿ ಕಡೆ ನಡಿಗೆ ಹೋಗಲಿ.: ಯತ್ನಾಳ್

ಪಂಚ ರಾಜ್ಯಗಳ ಚುನಾವಣೆ ಯಲ್ಲಿ ಕಾಂಗ್ರೆಸ್ ಸೋಲು ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಲೇವಡಿ. ಕಾಂಗ್ರೆಸ್‌ನವ್ರು ಕೃಷ್ಣೆ ಕಡೆ ನಡಿಗೆ ಹೋಗೋದು ಬೇಡ, ಅವ್ರು ಇನ್ನೂ ಇಟಲಿ ಕಡೆ ನಡಿಗೆ ಹೋಗಲಿ. ಮೇಕೆದಾಟು, ವಿಧಾನಸೌಧಕ್ಕೂ‌ ಹೋಗೋದು ಬೇಡ. ಸಿದ್ದರಾಮಯ್ಯನವರು ನಮ್ಮ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅವ್ರು ಒಳ ಒಪ್ಪಂದ ಮಾಡಿಕೊಂಡಿಲ್ಲ ಅಂದರೆ ಬಾದಾಮಿ ಹೇಗೆ ಅಭಿವೃದ್ಧಿ ಆಗ್ತಿತ್ತು? ರಾಜ್ಯದಲ್ಲಿ ಶಿಕಾರಿಪುರ ಬಿಟ್ರೆ ಬಾದಾಮಿ ಕ್ಷೇತ್ರಕ್ಕೆ ಹೆಚ್ಚು ಹಣ ಹೋಗಿರೋದು. ಸದನದಲ್ಲಿ ಸಿದ್ದರಾಮಯ್ಯ ಗ್ಯಾಂಗ್ ಮಾತ್ರ ಇದೆ‌. ಆದರೆ ಕಚ್ಚಾ ಬಾದಾಮ್ ಗ್ಯಾಂಗ್ ಇರಲಿಲ್ಲ. 

ಕಚ್ಚಾ ಬಾದಾಮ್ ಗ್ಯಾಂಗ್ ಯಾರು ಎಂಬ ಪ್ರಶ್ನೆಗೆ, ಅದೇ ಮುಖ್ಯಮಂತ್ರಿ ಆಗೋಕೆ ಪಾದಯಾತ್ರೆ ಮಾಡ್ತಿದ್ದೀರಲ್ಲ ಅವ್ರೇ, ಎಂದು ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಟಾಂಗ್ ಕೊಟ್ಟ ಯತ್ನಾಳ್. ಉತ್ತರ ಪ್ರದೇಶ ಗೂಂಡಾಗಳ ರಾಜ್ಯವಾಗಿತ್ತು , ಭ್ರಷ್ಟಾಚಾರ ಹೆಚ್ಚಾಗಿತ್ತು. ವಂಶವಾಹಿ ಅಡಳಿತವಾಗಿದೆ.  ಈಗ ಎಲ್ಲ ಬದಲಾವಣೆ ಆಗಿದೆ. ಯೋಗಿ ಎರಡನೇ ಬಾರಿಗೆ ಗೆಲ್ಲುವು ಸಾಧಿಸಿದ್ದಾರೆ. ಪ್ರಧಾನಿ ಮೋದಿ ನಾಯಕತ್ವವನ್ನು ಯುಪಿ ಜನರು ಒಪ್ಪಿದ್ದಾರೆಂದ ಯತ್ನಾಳ್.

3:48 PM

ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ: ರಾಹುಲ್ ಗಾಂಧಿ

ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶದಲ್ಲಿ ಗೆದ್ದವರಿಗೆ ಶುಭಾಶಯಗಳು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು. ನಾವು ಇದರಿಂದ ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ: ವಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್

Humbly accept the people’s verdict. Best wishes to those who have won the mandate.

My gratitude to all Congress workers and volunteers for their hard work and dedication.

We will learn from this and keep working for the interests of the people of India.

— Rahul Gandhi (@RahulGandhi)

3:16 PM

ಗೆಲುವಿನ ಬೆನ್ನಲ್ಲೇ ಕಾರ್ಯಕರ್ತರನ್ನುದ್ದೆಶಿಸಿ ಕೇಜ್ರಿವಾಲ್ ಮಾತು

ಪಂಜಾಬ್‌ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರೀವಾಲ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೇ ವೇಳೆ ಎಲ್ಲಾ ಜನ ಸಾಮಾನ್ಯರಿಗೆ ತಮ್ಮ ಪಕ್ಷ ಸೇರುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ವಿಪಕ್ಷಗಳಿಗೆ ಗುದ್ದು ನೀಡಿರುವ ಕೇಜ್ರಿವಾಲ್, ಅವರು ಕೆಟ್ಟ ಪದಗಳಿಂದ ಬೈಯ್ಯುತ್ತಿರಲಿ. ಇದು ಅವರೇನೆಂದು ತೋರಿಸುತ್ತದೆ. ಇದನ್ನೆಲ್ಲಾ ಕಡೆಗಣಿಸಿ, ನಾವು ನಮ್ಮ ಕೆಲಸ ಮಾಡುತ್ತಿರಬೇಕು. ಆಗಷ್ಟೇ ನಮ್ಮ ಪರಿಶ್ರಮಕ್ಕೆ ಫಲ ದೊರಕುತ್ತದೆ ಎಂದಿದ್ದಾರೆ. ಅಲ್ಲದೇ ಅಭಿವೃದ್ಧಿ ಬಗ್ಗೆ ಮಾತನಾಡಿದ ಕೇಜ್ರೀವಾಲ್ ಇಂದು ದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದೇಶಗಳಿಗೆ ಹೋಗುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನಾವು ವಿದೇಶೀ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಬಂದು ವ್ಯಾಸಂಗ ನಡೆಸುವಂತೆ ಮಾಡುತ್ತೇವೆ ಎಂದಿದ್ದಾರೆ, 

2:49 PM

ಗಾಂಧಿ ಫ್ಯಾಮಿಲಿ ಬಿಡದೇ ಕಾಂಗ್ರೆಸ್ ಉದ್ಧಾರವಾಗೋಲ್ಲ: ಪ್ರತಾಪ್ ಸಿಂಹ

ಸೆಮಿಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದೇವೆ. ಫೈನಲ್ 2024ರ ಲೋಕಸಭಾ ಚುನಾವಣೆಯನ್ನು ಗೆಲ್ಲುತ್ತೇವೆ. ಮಧ್ಯದಲ್ಲಿ ಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕೂಡಾ ಜಯಭೇರಿ ಬಾರಿಸುತ್ತೇವೆ‌. ಜನ ಮತ್ತೊಮ್ಮೆ ಬಿಜೆಪಿ ಬಯಸಿದ್ದಾರೆ. ಮುಂದೆ ಬಿಜೆಪಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುತ್ತೆ. ಕಾಂಗ್ರೆಸ್ ಅವನತಿ ಆರಂಭವಾಗಿದೆ.ಪ್ರಿಯಾಂಕಾ ಗಾಂಧಿಯನ್ನ ಇಂದಿರಾಗಾಂಧಿಗೆ ಹೋಲಿಕೆ ಮಾಡಿ ಮೂರು ಬಾರಿ ಪ್ರಚಾರ ಮಾಡ್ಸಿದ್ರಿ.ಆದರೂ ಏನೂ ವರ್ಕೌಟ್ ಆಗಿಲ್ಲ. ರಾಹುಲ್ ಗಾಂಧಿಯನ್ನ ಪದೇ ಪದೇ ಲಾಂಚ್ ಮಾಡಿ ಲಾಂಚ್ ಪ್ಯಾಡ್ ಮುರಿದುಹೋಗಿದೆ. ಹೀಗಾಗಿ ಕಾಂಗ್ರೆಸ್ ಲೀಡ್ ಮಾಡುವವರು ಯಾರೂ ಇಲ್ಲ. ಕರ್ನಾಟಕದ ಮೇಲೂ ಕಾಂಗ್ರೆಸ್ ಆಸೆ ಇಟ್ಟುಕೊಂಡಿದೆ. ಆದರೆ ಪರಿಸ್ಥಿತಿ ಅವರಿಗೆ ವಿರುದ್ಧವಾಗಿದೆ. ಕಾಂಗ್ರೆಸ್ ನವರನ್ನು ಕೇಳುವವರು ದಿಕ್ಕಿಲ್ಲ. ಗಾಂಧಿ ಫ್ಯಾಮಿಲಿ ಬಿಟ್ಟು ಹೊರಬರುವವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ. ಕಾಂಗ್ರೆಸ್ ಹೊಸ ನಾಯಕತ್ವದ ಹುಡುಕಾಟದಲ್ಲಿದೆ. ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ.

 

 

2:29 PM

ಯೋಗಿ ಸರ್ಕಾರ ಬಂದ್ರೆ ಅಲ್ಲಾಹು ಬಳಿ ಹೋಗ್ತೇನೆ ಎಂದಿದ್ದ ಮುನವ್ವರ್ ಆರೋಗ್ಯ ಏರುಪೇರು!

 ಯುಪಿ ಅಸೆಂಬ್ಲಿ ಚುನಾವಣೆ 2022 ರಲ್ಲಿ ಬಿಜೆಪಿಯ ಗೆಲುವಿನ ನಂತರ ಉತ್ತರ ಪ್ರದೇಶ ತೊರೆಯುವುದಾಗಿ ಘೋಷಿಸಿದ ಖ್ಯಾತ ಕವಿ ಮುನವ್ವರ್ ರಾಣಾ ಅವರ ಆರೋಗ್ಯ ಹದಗೆಟ್ಟಿದೆ. ಹೌದು ಯುಪಿ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಮುನವ್ವರ್ ರಾಣಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇನ್ನು ಟ್ರೆಂಡ್‌ಗಳ ಅನ್ವಯ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಘಾಉವುದು ಸ್ಪಚಷ್ಟವಾಗುತ್ತಿರುವ ಸಂದರ್ಭದಲ್ಲಿ, ಈ ವಿಚಾರವಾಗಿ ಯಾವುದೇ ಬಗೆಯ ಹೇಳಿಕೆ ನೀಡಲು ಮುನವ್ವರ್ ನಿರಾಕರಿಸಿದ್ದಾರೆ.

ಏನಾಯಿತು ಮುನವ್ರರ್ ಆರೋಗ್ಯಕ್ಕೆ?

 

 

2:27 PM

ಕೈತಪ್ಪಿದ್ದು ಪಂಜಾಬ್ ಮಾತ್ರ, ಪಂಚ ರಾಜ್ಯ ಸೋಲು ಸಮರ್ಥಿಸಿಕೊಂಡ ಸಿದ್ದು!

ಬಹುನಿರೀಕ್ಷಿತ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಲು ತಯಾರಿ ಆರಂಭಿಸಿದ್ದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸುತ್ತಿದೆ. ಆದರೆ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಅಧಿಕಾರದಲ್ಲಿದ್ದ ಪಂಜಾಬ್ ಕೂಡ ಕೈ ತಪ್ಪಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.

ಸೋತಿದ್ದು ಪಂಜಾಬ್ ಮಾತ್ರ ಎಂದಿದ್ದೇಕೆ ಸಿದ್ದರಾಮಯ್ಯ?

2:24 PM

ಪಂಜಾಬ್: ನಿರೀಕ್ಷೆಗೂ ಮೀರಿ ಆಪ್ ಕೈ ಹಿಡಿದ ಮತದಾರರು, ಹನುಮಾನ್ ಮಂದಿರದಲ್ಲಿ ಕೇಜ್ರಿ ಪೂಜೆ

ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸನ್ನೇ ಆಪ್ ಧೂಳೀಪಟ ಮಾಡಿದ್ದು. ಬದಲಾವಣೆ ಬಯಿಸಿರುವ ಜನರು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಈ ಖುಷಿಯಲ್ಲಿ ಹನುಮಾನ ಮಂದಿರಕ್ಕೆ ಭೇಟಿ ನೀಡಿದ ಅಪ್ ಮುಖ್ಯಸ್ಥ ಅರಿವಿಂದ ಕೇಜ್ರಿವಾಲ್

 

Aam Aadmi Party leader Arvind Kejriwal offers prayers at Hanuman Temple in Delhi as party sweeps Punjab pic.twitter.com/537kLgKkgr

— ANI (@ANI)

2:18 PM

ಗೋವಾದಲ್ಲಿ ಬಿಜೆಪಿ ಸಂಭ್ರಮ ಜೋರು

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಗೋವಾದ ಪಣಜಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ. ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ. ಡೊಳ್ಳು ಬಾರಿಸಿ ಗುಲಾಲ ಎರಚಿ ಕಾರ್ಯಕರ್ತರ ಸಂಭ್ರಮಾಚರಣೆ. ಗೋವಾದ ಪಣಜಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಗೋವಾ ಪಣಜಿ ಬಿಜೆಪಿ ವಿಜೇತ ಅಭ್ಯರ್ಥಿ ಬಾಬುಶಾ ನೇತೃತ್ವದಲ್ಲಿ ಮೆರವಣಿಗೆ.

 

 

2:05 PM

ಗೋವಾ ಬಿಜೆಪಿ ಸರಕಾರ ರಚಿಸಲು ಪಕ್ಷೇತರ ಅಭ್ಯರ್ಥಿಗಳ ಸಾಥ್

ಗೋವಾದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ತಯಾರಿ. ಗೋವಾದಲ್ಲಿ ಬಿಜೆಪಿಗೆ ಮೂವರು ಪಕ್ಷೇತರ ಶಾಸಕರ ಬೆಂಬಲ. ಗೋವಾ ಸಿಎಂ ಪ್ರಮೋದ್ ಸಾವಂತ್, ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನಾವಡೆ ಜೊತೆ ಮೂವರು ಪಕ್ಷೇತರ ಅಭ್ಯರ್ಥಿಗಳ ಮಾತುಕತೆ. ಬಿಚೋಲಿಯಂ ವಿಧಾನಸಭಾ ಕ್ಷೇತ್ರ ಚಂದ್ರಕಾಂತ ಶೆಟ್ಟಿ. ಕುಡ್ಕರಿ ವಿಧಾನಸಭಾ ಕ್ಷೇತ್ರದ ಲೆಜಿನಾರ್ಡ್ ಲಾರೆನ್ಸ್. ಕೊರ್ತಾಲಿ ವಿಧಾನಸಭಾ ಕ್ಷೇತ್ರದ ಶಾಸಕ ಅಂಥೋನಿ ವಾಸ್.

2:03 PM

'ಕರ್ನಾಟಕದಲ್ಲೇ ಶಾಸಕರನ್ನು ಹಿಡಿದಿಡಲಾಗದ ಡಿಕೆಶಿ ಗೋವಾದಲ್ಲೇನು ಮಾಡುತ್ತಾರೆ?'

ಗೋವಾದಲ್ಲಿ ಸ್ಪಷ್ಟವಾಗಿ ಬಿಜೆಪಿ ಬಹುಮತ ಸರ್ಕಾರ ಬರುತ್ತೆ. ಮೂವರು ಪಕ್ಷೇತರ ಅಭ್ಯರ್ಥಿಗಳು ನಮಗೆ ಬೆಂಬಲ ಸೂಚಿಸಿದ್ದಾರೆ. ಗೋವಾದ ಪಣಜಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿಕೆ. ಗೋವಾದಲ್ಲಿ ಉತ್ತಮ ಸರ್ಕಾರ ಕೊಡ್ತೇವೆ. ಡಿಕೆಶಿ ಕರ್ನಾಟಕದಲ್ಲಿ ತಮ್ಮ ಎಂಎಲ್‌ಎಗಳನ್ನೇ ಹಿಡಿದಿಟ್ಟುಕೊಳ್ಳಲು ಆಗದ ವ್ಯಕ್ತಿ, ಗೋವಾಗೆ ಬಂದು ಏನ್ ಮಾಡ್ತಾರೆ? ಗೋವಾಗೆ ಬಂದ ಫ್ಲೈಟ್‌ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಪಸ್ ಹೋಗ್ತಾರೆ. ಗೋವಾದಲ್ಲಿ ಸ್ಥಿರ ಸರ್ಕಾರ, ಅಭಿವೃದ್ಧಿ ಕೆಲಸ ನೋಡಿ ಬಿಜೆಪಿಗೆ ಆಶೀರ್ವಾದ ಮಾಡಿದೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ. ಗೋವಾ ಮುಂದಿನ ಸಿಎಂ ಯಾರೆಂದು ಕೇಂದ್ರದ ನಾಯಕರಿಂದ ತೀರ್ಮಾ‌ನಿಸುತ್ತಾರೆ. ಗೋವಾದ ಪಣಜಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿಕೆ.

2:01 PM

ಯೋಗಿ ದಕ್ಷ ಆಡಳಿತ, ಮೋದಿ ಜನಪ್ರಿಯತೆ ಯಶಸ್ವಿಯಾಗಿದೆ: ಸುನಿಲ್ ಕುಮಾರ್

ಉಡುಪಿ: ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿಕೆ. ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲೂ ಧೂಳಿಪಟವಾಗಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಕೇವಲ ಎರಡು ಅಂಕೆಯನ್ನು ದಾಟಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಇನ್ನು ಮುಂದೆ ಭೂತಕಾಲದ ಪಾರ್ಟಿ. ವರ್ತಮಾನದಲ್ಲಿ ಇಲ್ಲ, ಭವಿಷ್ಯದಲ್ಲೂ ಕಾಂಗ್ರೆಸ್ ಇರಲ್ಲ. ನಮ್ಮೆಲ್ಲಾ ಕಾರ್ಯಕರ್ತರಿಗೆ ಫಲಿತಾಂಶ ಉತ್ಸಾಹ ಕೊಟ್ಟಿದೆ. ಇದೇ ಉತ್ಸಾಹದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ತಂತ್ರಗಾರಿಕೆ ಮಾಡುತ್ತೇವೆ. ಅಭಿವೃದ್ಧಿ ,ಹಿಂದುತ್ವ ,ದಕ್ಷ ಆಡಳಿತಕ್ಕೆ ಯುಪಿಯಲ್ಲಿ  ಜಯ ಸಿಕ್ಕಿದೆ. ಯೋಗಿ ದಕ್ಷ ಆಡಳಿತ, ಮೋದಿ ಜನಪ್ರಿಯತೆ ಮತ್ತೆ ಯಶಸ್ವಿಯಾಗಿದೆ. ಉತ್ತರಖಾಂಡ ಗೋವಾ ಮಣಿಪುರದಲ್ಲಿ ಮರು ಆಯ್ಕೆಗೊಂಡಿದ್ದೇವೆ. ಉತ್ತರಖಾಂಡದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ ಎನ್ನಲಾಗುತ್ತಿತ್ತು. ಮೂವರು ಸಿಎಂ ಬದಲಾವಣೆ ಯಿಂದ ವಿರೋಧಿ ಅಲೆ ಉಂಟಾಗಿದೆ ಎನ್ನುತ್ತಿದ್ದರು. ಎಲ್ಲವನ್ನು ಮೀರಿ ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಪಂಜಾಬಿನಲ್ಲಿ ನಮಗೆ ಸುಧಾರಣೆಗೆ ಅವಕಾಶವಿದೆ. ಪಂಜಾಬ್ ನಲ್ಲಿ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಜನರ ವಿಶ್ವಾಸ ಗಳಿಸಲಿದೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಫಲಿತಾಂಶ ದಿಕ್ಸೂಚಿಯಾಗಿದೆ.

ರಾಹುಲ್ ಗಾಂಧಿ ನಾಯಕತ್ವ ಒಪ್ಪಲು ಸಾಧ್ಯವಿಲ್ಲ ಎಂದು ಜನತೆ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ನಾವಿಕರಿಲ್ಲದ ದೋಣಿಯಾಗಿದೆ. 

 

 

1:55 PM

2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಯಡಿಯೂರಪ್ಪ

ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ. ನಿರೀಕ್ಷೆ ಮಾಡಿದಂತೆ ನಾಲ್ಕು ರಾಜ್ಯಗಳಲ್ಲಿ ಗೆದ್ದಿದ್ದೇವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಮೋದಿ ನೇತೃತ್ವದ ಸರ್ಕಾರವನ್ನು ನಂಬಿರೋದ್ದಕ್ಕೆ ಇದು ಸಾಕ್ಷಿ. ಉತ್ತರ ಪ್ರದೇಶದಲ್ಲಿ ಗೂಂಡಾಗಿರಿ ತಡಯೋದಕ್ಕೆ ಬಿಜಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ಗೆ ದೇಶದಲ್ಲಿ ನೆಲೆ ಇಲ್ಲ. ಡಿಕೆ ಶಿವಕುಮಾರ್ ಗೋವಾಕ್ಕೆ ಹೋಗಿದ್ದಾರೆ. ಗೋವಾದಲ್ಲಿ ಸರ್ಕಾರ ರಚನೆ ಮಾಡ್ತೀವಿ ಎಂಬ ಭ್ರಮೆಯಲ್ಲಿ ಹೋಗಿದ್ದಾರೆ.ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡ್ತೀನಿ, 2023ಕ್ಕೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ.

 

1:54 PM

ಅಧಿಕಾರದಲ್ಲಿರೋ ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ, ಪಂಜಾಬ್‌ನಲ್ಲಿ ಅಲ್ಲ: ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ. ಇನ್ನೂ ಪೂರ್ಣಾವಾಗಿ ಫಲಿತಾಂಶ ಬಂದಿಲ್ಲ, ಇನ್ನೂ ಬರುತ್ತಿದೆ. ಪಂಜಾಬ್‌ನಲ್ಲಿ ಮಾತ್ರ ನಾವು  ಅಧಿಕಾರದಲ್ಲಿದ್ದೆವು. ಬೇರೆ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿರಲಿಲ್ಲ. ಉತ್ತರಖಾಂಡ, ಗೋವಾದಲ್ಲಿ ನಿರೀಕ್ಷೆ ಇತ್ತು. ನಮ್ಮ ತಪ್ಪಿನಿಂದ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಪಂಜಾಬ್‌ನಲ್ಲೇನು ಬಿಜೆಪಿ ಬಂದಿಲ್ಲ, ಆಪ್ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆಗಳಿಂದ ನಾನೇನು ಬಹಳ ಏನ್ ನಿರೀಕ್ಷೆ ಇರಲಿಲ್ಲ. ಆದ್ರೆ ಗೋವಾ, ಉತ್ತರಖಾಂಡದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಅಂದಾಜು ಇತ್ತು . ಈ ಚುನಾವಣೆಯಿಂದ ಧೈರ್ಯ ಕಳೆದುವಂಥದ್ದೇನಿಲ್ಲ. ಪಂಜಾಬ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದಾರಾ? ಅಧಿಕಾರ ಇರೋ ರಾಜ್ಯಗಳಲ್ಲಿ ಗೆದ್ದಿದ್ದಾರೆ ಅಷ್ಟೆ..ಇದರಿಂದ ಬಹಳ ಜಂಬ ಪಡೋ ಆಗಿಲ್ಲ. ಪಲಿತಾಂಶದ ಬಗ್ಗೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ.

 

 

1:50 PM

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲವು, ಮಂಡ್ಯದಲ್ಲಿ ಬಿಜೆಪಿ ಸಂಭ್ರಮ

ರೀಕ್ಷೆಗೂ ಮೀರಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲವು ಸಾಧಿಸಿದ್ದು, ರಾಜ್ಯದ ವಿವಿಧೆಡೆ ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. 

 

1:45 PM

ಕರ್ನಾಟಕ ಸಂಪುಟದಲ್ಲಿ ಬದಲಾವಣೆ ಖಚಿತ, ಕಟೀಲ್ ಸ್ಪಷ್ಟನೆ!

ಪಂಚ ರಾಜ್ಯ ಚುನಾವಣೆ ಫಲಿತಾಂಶ ಅಧಿಕೃತ ಘೋಷಣೆ ಬೆನ್ನಲ್ಲೇ ಬಿಜೆಪಿ ಸಂಭ್ರಮಾಚರಣೆ ಜೋರಾಗಿದೆ. ಪಂಜಾಬ್ ಹೊರತು ಪಡಿಸಿ ಇನ್ನುಳಿದ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ಮಣಿಪುರ, ಉತ್ತರಖಂಡ ಹಾಗೂ ಗೋವಾದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಪಡೆದುಕೊಂಡಿದ್ದು, ಸರ್ಕಾರ ರಚಿಸುತ್ತ ದಾಪುಗಾಲಿಟ್ಟಿದೆ. ಈ ಫಲಿತಾಂಶ ಕರ್ನಾಟಕ ಬಿಜೆಪಿ ಸಂಪುಟದಲ್ಲೂ ಪರಿಣಾಮ ಬೀರಲಿದೆ ಅನ್ನೋ ಮಾತನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ

ಕಟೀಲ್ ಹೇಳಿದ್ದಿಷ್ಟು

1:37 PM

ಜನಾದೇಶಕ್ಕೆ ತಲೆ ಬಾಗುವೆ: ಕ್ಯಾ.ಅಮರೀಂದರ್ ಸಿಂಗ್

ಅಮೃತಸರದಲ್ಲಿ ಸೋಲುಂಡ ಮಾಜಿ ಪಂಜಾಬ್ ಮುಖ್ಯಮಂತ್ರಿ ಅಂಮರಿಂದರ್ ಸಿಂಗ್ ಹೇಳಿದ್ದಿಷ್ಟು
 

Capt Amarinder Singh says "I accept the verdict of the people with all humility. Punjabis have shown true spirit of Punjabiyat by rising and voting above sectarian and caste lines." pic.twitter.com/wo79r4EsAZ

— ANI (@ANI)

1:31 PM

ಗೋವಾ ಎಲೆಕ್ಷನ್ ಬ್ರೇಕಿಂಗ್: ಗೋವಾ ಬಿಜೆಪಿ ಕಚೇರಿಗೆ ಆಗಮಿಸಿದ ಸಿಎಂ ಪ್ರಮೋದ್ ಸಾವಂತ್

ಗೋವಾದ ಪಣಜಿಯ ಆತ್ಮಾರಾಮ ಬೋಲ್ಕರ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿ. ಬಿಜೆಪಿ ಪರ ಘೋಷಣೆ ಕೂಗುತ್ತಾ ಗೋವಾ ಸಿಎಂಗೆ ಕಾರ್ಯಕರ್ತರ ಭರ್ಜರಿ ಸ್ವಾಗತ. ಬಿಜೆಪಿ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ್ತೆ ಗೋವಾದಲ್ಲಿ ಡಬಲ್ ಎಂಜಿನ್ ಸರ್ಕಾರ ಬಂದಿದೆ. ಇದು ಬಿಜೆಪಿ ಕಾರ್ಯಕರ್ತರ ಹಾಗೂ ಗೋವಾ ಜನರ ಗೆಲುವು ಎಂದ ಪ್ರಮೋದ್ ಸಾವಂತ್.
 

Offered prayers at Shree Datta Mandir in Sankhali. pic.twitter.com/1zL5xEEejD

— Dr. Pramod Sawant (@DrPramodPSawant)

1:23 PM

ವಿಜಯೋತ್ಸವ ರ‍್ಯಾಲಿಗಳ ಮೇಲಿದ್ದ ನಿರ್ಬಂಧ ಹಿಂಪಡೆದ ಚುನಾವಣಾ ಆಯೋಗ

ಪಂಚರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬಿದ್ದಿವೆ. ವಿಜಯೋತ್ಸವ ರ‍್ಯಾಲಿಗಳ ಮೇಲಿದ್ದ ನಿರ್ಬಂಧವನ್ನು ತೆರವುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

Assembly poll results: EC withdraws blanket ban on victory processions

Read Story | https://t.co/DbVTxWJqHG pic.twitter.com/7o7oR043zP

— ANI Digital (@ani_digital)

1:08 PM

ಕಾಂಗ್ರೆಸ್‌ ನಾಯಕರಿಗೆ ಎಚ್‌ಡಿಕೆ ಟಾಂಗ್

ನೂರಾರು ವರ್ಷ ಇತಿಹಾಸ ಇದೆ ಅಂತ ಏನ್ ಕಾಂಗ್ರೆಸ್ ಹೇಳುತ್ತೆ... ಪ್ರಾದೇಶಿಕ ಪಕ್ಷ ಮುಗಿಸ್ತೀವಿ ಅಂತ ಹೇಳ್ತಾ ಇದ್ರು... ಕರ್ನಾಟಕದಲ್ಲಿ ಮೇಲಿದ್ದಾರೆ ಅಲ್ವಾ ಅವರಿಗೆ ಜ್ಞಾನೋದಯ ಆಗಬೇಕು! ಎಂದು ಪರೋಕ್ಷವಾಗಿ ಸಿದ್ದು, ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ ದಳಪತಿ ಎಚ್‌ಡಿ ಕುಮಾರಸ್ವಾಮಿ.

ಐದು ರಾಜ್ಯಗಳ ಫಲಿತಾಂಶವೇ ಬೇರೆ,  ಅಲ್ಲಿನ ಪರಿಸ್ಥಿತಿಗಳೇ ಬೇರೆ, ನಮ್ಮ ರಾಜ್ಯದ ಪರಿಸ್ಥಿತಿನೇ ಬೇರೆ  ಒಂದು ವರ್ಷ ಇದೆ, ನೋಡೋಣ ಏನೆಲ್ಲಾ ಆಗುತ್ತೆ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ ಎಂದು ಎಚ್‌ಡಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.

 

12:59 PM

'ಬುಲ್ಡೋಜರ್' ಎದುರು ಪಂಕ್ಚರ್ ಆದ 'ಸೈಕಲ್': ಅಖಿಲೇಶ್‌ಗೆ ಮುಳುವಾಗಿದ್ದು ಇದೇ ವಿಚಾರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಇತ್ತೀಚಿನ ಫಲಿತಾಂಶಗಳು ಮತ್ತು ಟ್ರೆಂಡ್‌ಗಳಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ (ಮಧ್ಯಾಹ್ನ 12.10 ರವರೆಗೆ), 403 ಸದಸ್ಯ ಬಲದ ಯುಪಿ ಅಸೆಂಬ್ಲಿಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೈತ್ರಿಕೂಟ ಒಟ್ಟು 266 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಪ್ರತಿಪಕ್ಷ ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟ 125 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ . ಆದಾಗ್ಯೂ, ಇದು 2017 ಕ್ಕಿಂತ 73 ಸ್ಥಾನಗಳು ಹೆಚ್ಚು ಎಂಬುವುದು ಉಲ್ಲೇಖನೀಯ.

ಉತ್ತರ ಪ್ರದೇಶದಲ್ಲಿ ನಿರೀಕ್ಷಿಸಿದಷ್ಟು ಎಸ್ಪಿಗೇಕೆ ಗೆಲವು ಸಾಧಿಸಲು ಆಗಲಿಲ್ಲ?

12:55 PM

ಈ ತಿಂಗಳಾಂತ್ಯದಲ್ಲಿ ಕರ್ನಾಟಕದಲ್ಲಿ ಮೇಜರ್ ಸಂಪುಟ ಸರ್ಜರಿ

ಉತ್ತರ ಪ್ರದೇಶದಲ್ಲಿ ಬಿಜೆಪಿ 250ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದರೆ, ಕರ್ನಾಟಕದಲ್ಲಿ ಮೇಜರ್ ಸಂಪುಟ ಸರ್ಜರಿ ಆಗೋದು ಗ್ಯಾರಂಟಿ ಎಂದು ವಿಶ್ಲೇಷಿಸಲಾಗಿತ್ತು. ಇದೀಗ ಸಂಪುಟ ಸರ್ಜರಿಯ ಸುಳಿವು ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಈ ತಿಂಗಳ ಅಂತ್ಯದಲ್ಲಿ ಸಂಪುಟಕ್ಕೆ ಸರ್ಜರಿ ಮಾಡುವ ಸುಳಿವು ನೀಡಿದ್ದಾರೆ. 

 


 

12:48 PM

ಕರ್ನಾಟಕ ಕಾಂಗ್ರೆಸ್‌ಗೆ ಶೀಘ್ರವೇ ಪಂಜಾಬ್ ಸ್ಥಿತಿ, ರಾಜ್ಯ ಕೈ ಶಾಸಕರ ಆತಂಕ!

ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶ ಅಚ್ಚರಿಯಲ್ಲ. ಇದು ಚುನಾವಣೆಗೂ ಮೊದಲೇ ರಾಜಕೀಯ ಪಂಡಿತರಿಗೆ ತಿಳಿದಿರುವ ವಿಚಾರವಾಗಿತ್ತು. ಇನ್ನು ಸಮೀಕ್ಷೆಗಳು ಕೂಡ ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸಲಿದೆ ಎಂದಿದೆ. ಇದೆಲ್ಲವೂ ನಿಜವಾಗಿದೆ. ಪಂಜಾಬ್‌ನಲ್ಲಿ ಆಪ್ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 18 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಪಂಜಾಬ್ ಚುನಾವಣಾ ಫಲಿತಾಂಶ ಗಮನಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇದೇ ಪರಿಸ್ಥಿತಿ ಎದುರಿಸುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.

ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕೈಗೆ ಹೀನಾಯ ಸೋಲು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಆತಂಕ

 

 

12:41 PM

ಪಂಚ ರಾಜ್ಯ ಚುನಾವಣೆ ಫಲಿತಾಂಶ: ಕರ್ನಾಟಕ ಸಂಪುಟದಲ್ಲಿ ಭರ್ಜರಿ ಸರ್ಜರಿ

ಪಂಚರಾಜ್ಯ ಚುನಾವಣೆ ಬಿಜೆಪಿ ಜಯಭೇರಿ ಹಿನ್ನಲೆ. ರಾಜ್ಯದಲ್ಲಿ ಸಂಪುಟ ಬದಲಾಗತ್ತಾ ಎನ್ನುವ ಪ್ರಶ್ನೆಗೆ, ಖಂಡಿತಾ ಬದಲಾಗತ್ತೆ. ಅಭಿವೃದ್ಧಿ ಕಾರ್ಯ ಇನ್ನಷ್ಟು ಚುರುಕು ಪಡೆಯತ್ತೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್. ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ.

 

12:34 PM

ನಿರೀಕ್ಷೆಯಂತೆ ಚುನಾವಣಾ ಫಲಿತಾಂಶ ಬಂದಿದೆ: ಡಿವಿ ಸದಾನಂದ ಗೌಡ

ಮಂಗಳೂರು:  ಪಂಚರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿಕೆ. ಮಂಗಳೂರಿನಲ್ಲಿ ಮಾತನಾಡಿದ ಡಿವಿ ಸದಾನಂದ ಗೌಡರು. ನಿರೀಕ್ಷೆಯಂತೆ ಚುನಾವಣಾ ಫಲಿತಾಂಶ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೆಲಸ ಕಾರ್ಯಗಳು,  ಅದನ್ನ ಆಧಾರಿಸಿ ಮತದಾರರ ಭಾವನೆಗಳು ಈ ಚುನಾವಣೆಯಲ್ಲಿ ಬಿಂಬಿತವಾಗಿದೆ. ಪಂಜಾಬ್‌ನಲ್ಲಿ ಭಾರೀ ಅಪಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದೆ, ಇನ್ನುಳಿದ 4 ರಾಜ್ಯಗಳಲ್ಲಿ ನಿರೀಕ್ಷೆಯಂತೆ ಬಿಜೆಪಿ ಫಲಿತಾಂಶ ಬಂದಿದೆ. ಈ ಹಿಂದೆ ಗೂಂಡಾರಾಜ್ ಆಗಿದ್ದ ಉತ್ತರಪ್ರದೇಶವನ್ನು ಯೋಗಿ ಅದಿತ್ಯನಾಥ್ ಸಾಮಾನ್ಯ ಜನರ ರಾಜ್ಯವನ್ನಾಗಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶೃದ್ಧಾ ಕೇಂದ್ರಗಳ ಅಭಿವೃದ್ಧಿ ಕಾರ್ಯ ಚುನಾವಣೆಯ ಫಲಿತಾಂಶ ದಲ್ಲಿ ಬಿಂಬಿತವಾಗುತ್ತಿದೆ. ಈ ಪಂಚರಾಜ್ಯ ಚುನಾವಣೆ ಫಲಿತಾಂಶ ಮುಂದಿನ  ಕರ್ನಾಟಕ ಚುನಾವಣೆ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರಲಿದೆ. ಈ ಬಾರಿ ಅಪಪ್ರಚಾರದ ನಡುವೆ ನಮಗೆ ಜನರ ಆಶೀರ್ವಾದ ದೊರೆಕಿದೆ. ಈ ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದ ಸಚಿವ ಸಂಪುಟದಲ್ಲಿ ಒಂದಿಷ್ಟು ಬದಲಾವಣೆ ಆಗುವ ಸಂಭವವಿದೆ. ಈ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ 

ಕಾಂಗ್ರೆಸ್ ಈ ಹಿಂದೆಯೇ ಧೂಳಿ ಪಟವಾಗಿದೆ. ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿ ಇದ್ದಷ್ಟು ದಿನ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ . ಕಾಂಗ್ರೆಸ್‌ನ ಭ್ರಷ್ಟಾಚಾರ, ಕುಟುಂಬ ರಾಜಕಾರಣದಿಂದ ಜನರು ರೋಸಿ ಹೋಗಿದ್ದಾರೆ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದು ಕೊಂಡಿದೆ. 

 

 

12:32 PM

ಆಪ್ ಅಭ್ಯರ್ಥಿ ಮುಂದೆ ಕ್ಯಾಪ್ಟನ್ ಅಮರಿಂದರ್ ಸಿಂಗ್‌ಗೆ ಸೋಲು

ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ 13,000 ಮತಗಳಿಂದ ಸೋಲು ಕಂಡಿದ್ದಾರೆ. ಆಪ್ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಅಮರಿಂದರ್ ಮುಗ್ಗರಿಸಿದ್ದಾರೆ.

 

 

12:31 PM

ಪಂಜಾಬ್: ಹಾಲಿ ಮತ್ತು ಮಾಜಿ ಸಿಎಂಗೆ ಹಿನ್ನಡೆ

ಸೋಲಿತ ಭೀತಿಯಿಂದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಮುಖ್ಯಮಂತ್ರಿ ಚನಿಗೆ ಹಿನ್ನಡೆ. ಮಾಜಿ ಮುಖ್ಯಮಂತ್ರಿ ಅಮರೀಂದ್ರ ಸಿಂಗ್‌ಗೂ ಸೋಲು. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಕಾಂಗ್ರೆಸ್ ನಾಯಕರ ಜಗಳದಲ್ಲಿ ಗೆದ್ದಿದ್ದು ಅಪ್. 

12:26 AM

ಗೋವಾದಲ್ಲಿ ಸರಕಾರ ರಚಿಸಲು ಬಿಜೆಪಿಯಿಂದ ಗೌರ್ನರ್ ಭೇಟಿ

ಬಿಜೆಪಿ ಗೋವಾದಲ್ಲಿ ಮತ್ತೆ ಸರಕಾರ ರಚಿಸುವುದು ಖಚಿತವಾಗಿದೆ. ರಾಜ್ಯಪಾಲರಾದ ಪಿ.ಎಸ್.ಶ್ರೀಧರಮ್ ಪಕ್ಷ ಭೇಟಿಯಾಗಿ, ಸರಕಾರ ರಚಿಸಲು ಅನುಮತಿ ಕೋರುತ್ತಿದ್ದಾರೆ.

 

| Bharatiya Janata Party leaders to meet Goa Governor P.S.Sreedharan Pillai today to stake claim for government formation in the state

— ANI (@ANI)

12:23 PM

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ: ಇದೊಂದು ಎಚ್ಚರಿಕೆಯ ಗಂಟೆ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ವಿಚಾರ. ಇದೊಂದು ಎಚ್ಚರಿಕೆಯ ಗಂಟೆ. ಈ ಫಲಿತಾಂಶವನ್ನ ರಾಜ್ಯ ನಾಯಕರು ಗಂಭೀರವಾಗಿ ಪರಿಗಣಿಸಬೇಕು‌. ಚುನಾವಣೆ ಸೋಲಿನ ಬಗ್ಗೆ ಪರಾಮರ್ಶೆ ಅಗತ್ಯ. ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿಕೆ.ಬಿಜೆಪಿಯ ತಂತ್ರಗಾರಿಕೆಗೆ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಬೇಕು. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಕೂಡ ಬಾಕಿ‌ ಇದೆ. ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಎಚ್ಚೆತ್ತು ಕೊಳ್ಳಬೇಕಿದೆ. ಬಿಜೆಪಿ ಕೇವಲ ಚುನಾವಣೆ ಸಂದರ್ಭದಲ್ಲಿ ತಂತ್ರಗಾರಿಕೆ ಮಾಡುತ್ತದೆ.ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಆಸಕ್ತಿ ಇಲ್ಲ. ಸೋಲಿನ ಜವಾಬ್ದಾರಿಯನ್ನ ಆಯಾ ರಾಜ್ಯದ ನಾಯಕರೇ ಹೊರಬೇಕಿದೆ. ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿಕೆ.

12:13 PM

ಯೋಗಿಗಾಗೀ 320ಕಿಲೋ‌ ಮೀಟರ್ ಪಾದಾಯಾತ್ರೆ ನಡೆಸಿದ ಕಾರ್ಯಕರ್ತರಿಂದ ವಿಜಯೋತ್ಸವ

ಮಹದೇವಪುರ: ಯೋಗಿಗಾಗೀ 320ಕಿಲೋ‌ ಮೀಟರ್ ಪಾದಾಯಾತ್ರೆ ನಡೆಸಿದ ಕಾರ್ಯಕರ್ತರಿಂದ ವಿಜಯೋತ್ಸವ. ಬೆಂಗಳೂರು ಪೂರ್ವ ತಾಲೂಕಿನ‌ ಮಹದೇವಪುರದಲ್ಲಿ ಸಂಭ್ರಮಾಚರಣೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಬೇರಿ‌ ಹಿನ್ನೆಲೆ ಹೂಡಿಯಲ್ಲಿ ಸಂಭ್ರಮಾಚರಣೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಂಭ್ರಮಾಚರಣೆ. ರಾಮಭಕ್ತ ಮಂಜುನಾಥ್ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ. ಯೋಗಿ ಆಧಿತ್ಯನಾಥ್ ಮತ್ತೊಮ್ಮೆ ಸಿಎಂ ಆಗಬೇಕೆಂದು ಧರ್ಮಸ್ಥಳ ಪಾದಯಾತ್ರೆ ನಡೆಸಿದ್ದ ಮಂಜುನಾಥ್. ಪೆಬ್ರವರಿಯಲ್ಲಿ  1 ದಿನಗಳ ಕಾಲ 320 ಕಿ.ಮೀ ಪಾದಯಾತ್ರೆ. ಪಾದಯಾತ್ರೆಯ ಫಲ ಪಲಿಸಿತೆಂದು ರಾಮಭಕ್ತ ಮಂಜುನಾಥ್ ನೇತೃತ್ವದಲ್ಲಿ ವಿಜಯೋತ್ಸವ. 

12:11 PM

ಪಂಜಾಬ್‌ನಲ್ಲಿAPP ಗೆಲವು, ಬೆಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ

ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ. ಪಂಜಾಬ್‌ನಲ್ಲಿ ಭಾರೀ ಜಯಭೇರಿ ಗಳಿಸಿದ ಆಮ್ ಆದ್ಮಿ ಪಕ್ಷ ಹಿನ್ನಲೆ.  ಬ್ರಿಗೇಡ್ ರೋಡ್ ನಲ್ಲಿ ಆಮ್ ಆದ್ಮಿ ಪಕ್ಷದ ಕಾಯಕರ್ತರಿಂದ ವಿಜಯೋತ್ಸವ. ಕಾರ್ಯಕರ್ತರು ಪೊರಕೆ ಹಿಡಿದು ಫುಲ್ ಡ್ಯಾನ್ಸ್‌. ಸಖತ್ ಸ್ಟೆಪ್ಬಹಾಕಿ ಗೆಲುವನ್ನು ಸಂಭ್ರಮಿಸಿದ ಮಹಿಳಾ ಕಾರ್ಯಕರ್ತೆಯರು.

 

12:08 PM

ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಎಸ್ಪಿಯ ಅಜಂ ಖಾನ್ ಮುನ್ನಡೆ

ಸಮಾಜವಾದಿ ಪ್ರಮುಖ ಮುಖಂಡ ಅಜಂ ಖಾನ್ ಉತ್ತರದ ಪ್ರದೇಶ ರಾಮ್‌ಪುರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 

 

| Samajwadi Party's Azam Khan leading from Rampur constituency; Swami Prasad Maurya trailing from Fazilnagar

(file photos) pic.twitter.com/rS9D4PChNo

— ANI UP/Uttarakhand (@ANINewsUP)

12:05 PM

ಕಲ್ಯಾಣ, ಪ್ರಗತಿ ಉತ್ತರಾಖಂಡಕ್ಕೆ ಮಣೆ ಹಾಕಿದ್ದಾರೆ ಮತದಾರರು: ಜೋಶಿ

ಉತ್ತರಖಾಂಡದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ಧವಾಗುತ್ತಿದೆ. ರಾಜ್ಯದ ಉಸ್ತುವಾರಿ ಹೊತ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಗತಿಪರ ರಾಜ್ಯದ ಯೋಜನೆಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ ಎಂದಿದ್ದಾರೆ. 

 

| Under the leadership of PM Modi and CM Pushkar Singh Dhami, we gave welfare policies to the people of Uttarakhand and have got expected results: Union minister & state in-charge Pralhad Joshi in Dehradun pic.twitter.com/C3gbmzExat

— ANI UP/Uttarakhand (@ANINewsUP)

11:55 AM

ಸೂಕ್ತ ನಾಯಕತ್ವದ ಕೊರತೆ, ಪಂಚ ರಾಜ್ಯ ಚುನಾವಣೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್!

ಪಂಚ ರಾಜ್ಯಗಳ ಚುನಾವಣೆ ಮತ ಎಣಿಕೆ ಅಂತಿಮ ಹಂತದಲ್ಲಿದೆ. ಸದ್ಯದ ಫಲಿತಾಂಶದಲ್ಲಿ ಕಾಂಗ್ರೆಸ್ ಶೋಚನೀಯ ಸ್ಥಿತಿಗೆ ತಲುಪಿದೆ. ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಆಮ್ ಆದ್ಮಿ ಪಕ್ಷ ಅಧಿಕಾರಗ ಗದ್ದುಗೆ ಏರಲು ಸಜ್ಜಾಗಿದೆ. ಇತ್ತ ಉತ್ತರಖಂಡ, ಮಣಿಪುರ, ಉತ್ತರಪ್ರದೇಶ, ಹಾಗೂ ಗೋವಾದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ದೇಶದ ಅತೀ ದೊಡ್ಡ ಹಾಗೂ ಅತೀ ಹಳೆಯ ಪಕ್ಷ ಕಾಂಗ್ರೆಸ್ ಈ ರೀತಿ ನೆಲಸಮವಾಗಲು ಸೂಕ್ತ ನಾಯಕತ್ವದ ಕೊರತೆ ಕಾರಣ ಅನ್ನೋ ಮಾತುಗಳ ಬಲವಾಗುತ್ತಿದೆ.

ಇನ್ನಾದರೂ ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಹಾಕುತ್ತಾ ಬ್ರೇಕ್?

 

 

11:53 AM

ಉತ್ತರ ಪ್ರದೇಶ ಘೋರಖ್‌ಪುರದಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಸಂಭ್ರಮಾಚರಣೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಗೆಲವು ಸಾಧಿಸುತ್ತಿದ್ದು, ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸ್ವಕ್ಷೇತ್ರವಾದ ಗೋರಖ್‌ಪುರದಲ್ಲಿ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. 
 

 

11:52 AM

ಯೋಗಿ ಸರ್ಕಾರ ರಚನೆಯಾದ್ರೆ ಅಲ್ಲಾಹು ಬಳಿ ಹೋಗುತ್ತೇನೆ, ಈಗೇನು ಮಾಡ್ತಾರೆ ಕವಿ ಮುನವ್ವರ್ ರಾಣಾ?

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (UP Vidhansabha Chunav 2022) ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫಲಿತಾಂಶವೂ ಹೊರ ಬೀಳಲಾರಂಭಿಸಿದೆ. ಹೀಗಿರುವಾಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದ್ದು, ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಖ್ಯಾತ ಕವಿ ಮುನವ್ವರ್ ರಾಣಾರ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದ್ದು, ಅವರು ಉತ್ತರ ಪ್ರದೇಶ ತೊರೆಯುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. 

ರಾಣಾ ಹೇಳಿದ್ದೇನು, ಈಗ ಆಗುತ್ತಿರುವುದೇನು?

11:45 AM

ಪಂಚರಾಜ್ಯಗಳ ಚುನಾವಣಾ ಫಲಿತಾಂಶ - ರಾಜ್ಯ ಕಾಂಗ್ರೆಸ್ ಗೆ ಆಘಾತ!

ಜಾಬ್, ಗೋವಾ, ಉತ್ತರಖಂಡ್ ಸೋಲಿಗೆ ಕೈ ನಾಯಕರು ಕಂಗಾಲು. ನಾಯಕತ್ವದ ಸಮಸ್ಯೆಯಿಂದಾಗಿ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಂಡ ಬಗ್ಗೆ ಸಂಕಷ್ಟ. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಬೇಸರಕ್ಕೆ ಕಾರಣವಾದ ಪಂಜಾಬ್ ಫಲಿತಾಂಶ. ಕರ್ನಾಟಕದಲ್ಲೂ ಇದೇ ಪರಿಸ್ಥಿತಿಯಾಗುವ ಆತಂಕ ವ್ಯಕ್ತಪಡಿಸಿದ ಶಾಸಕರು.ವಿಧಾನಸಭೆಯ ಮೊಗಸಾಲೆಯಲ್ಲಿ ಆತಂಕದ ಅಭಿಪ್ರಾಯ ಹೊರ ಹಾಕಿದ ಕೈ ಶಾಸಕರು. ನಾಯಕರು ಕಚ್ಚಾಡಿಕೊಂಡರೆ - ಗುಂಪುಗಾರಿಕೆ ಮಾಡಿದರೆ ನಷ್ಟ ಗ್ಯಾರಂಟಿ ಎಂದ ಕೈ ಶಾಸಕರು. ಕರ್ನಾಟಕದ ಪರಿಸ್ಥಿತಿಗೂ  - ಪಂಜಾಬ್‌ಗೂ ವ್ಯತ್ಯಾಸವಿಲ್ಲ ಬಿಡಿ ಅಂತಿರೋ ನಾಯಕರು. ಒಗ್ಗಟ್ಟಿನ ಅನಿವಾರ್ಯತೆ ಮತ್ತು ಅಗತ್ಯತೆಯ ಬಗ್ಗೆ ಪರಸ್ಪರ ಅಭಿಪ್ರಾಯ ಹಂಚಿಕೊಂಡ ಶಾಸಕರು.

 

11:43 AM

ಉತ್ತರ ಪ್ರದೇಶದ ಗೋರಖ್‌ಪುರ್ದಲ್ಲಿ ಯೋಗಿ ಅಭಿಮಾನಿಗಳ ಸಂಭ್ರಮಾಚಾರಣೆ

ಉತ್ತರ ಪ್ರದೇಶದಲ್ಲಿ ಯೋಗಿ ಅದಿತ್ಯನಾಥ್ ನೇತೃತ್ವದ ಸರಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ನಿರೀಕ್ಷೆಗೂ ಮೀರು ಜನರು ಬೆಂಬಲ ಸೂಚಿಸಿದ್ದಾರೆ. ಆಡಳಿತ ವಿರೋದ ಅಲೆ ಪ್ರಭಾವ ಬೀರಬಹುದು ಎಂದು ಲೆಕ್ಕಿಸಲಾಗಿತ್ತು. ಅದನ್ನೂ ಉಲ್ಲಾ ಮಾಡಿದ್ದಾರೆ ಯುಪಿ ಮತದಾರ ಪ್ರಭುಗಳು. 

 

ಗೋರಖ್ ಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಯ ವಿಡಿಯೋ pic.twitter.com/h8MKKBnKfJ

— Asianet Suvarna News (@AsianetNewsSN)

11:41 AM

ಗೋವಾ ಜನತೆ ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿದ್ದಾರೆ: ವಿಶ್ವಜಿತ್ ರಾಣೆ

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದತ್ತ ದಾಪುಗಾಲು ವಿಚಾರ. ಗೋವಾದ ಪಣಜಿಯಲ್ಲಿ ಬಿಜೆಪಿ ವಿಜೇತ ಅಭ್ಯರ್ಥಿ ವಿಶ್ವಜಿತ್ ಠಾಣೆ ಹೇಳಿಕೆ. ವಾಲ್ಪೊಯಿ ಕ್ಷೇತ್ರದಲ್ಲಿ ಜಯಸಾಧಿಸಿದ ಬಿಜೆಪಿ ಅಭ್ಯರ್ಥಿ ವಿಶ್ವಜಿತ್ ರಾಣೆ. ಗೋವಾದಲ್ಲಿ ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ರಾಣೆ. ಹೊರಗಿಂದ ಜನ ಬಂದು ಗೋವಾ ಜನರಿಗೆ ಆಸೆ ಆಮಿಷ ತೋರಿಸಿದ್ದರು. ಗೋವಾ ಜನತೆ ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿದ್ದಾರೆ. ಗೋವಾ ಜನತೆಗೆ, ಪ್ರಧಾನಿ ಮೋದಿ, ದೇವೇಂದ್ರ ಫಡ್ನವಿಸ್, ಸಿ.ಟಿ.ರವಿಗೆ ಧನ್ಯವಾದ. ಪಣಜಿಯಲ್ಲಿ ವಿಶ್ವಜಿತ್ ರಾಣೆ ಹೇಳಿಕೆ. ಗೋವಾ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವಿಶ್ವಜಿತ್ ರಾಣೆ, ಸಿಎಂ ರೇಸ್‌ನಲ್ಲಿದ್ದಾರೆ.