* ಉ.ಪ್ರ., ಉತ್ತರಾಖಂಡ, ಮಣಿಪುರ ಬಿಜೆಪಿ ಪಾಲು: ಸಮೀಕ್ಷೆ
* 3 ರಾಜ್ಯ ಬಿಜೆಪಿಗೆ, 2 ಅತಂತ್ರ
* ಪಂಜಾಬ್, ಗೋವಾದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತವಿಲ್ಲ
ನವದೆಹಲಿ(ಜ.18): ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಬಿಜೆಪಿ ಜಯಿಸಲಿದೆ ಎಂದು ರಿಪಬ್ಲಿಕ್ ಟೀವಿ, ಇಂಡಿಯಾ ಟೀವಿ ಸಮೀಕ್ಷೆಗಳು ಹೇಳಿವೆ.
ಗೋವಾದಲ್ಲಿ ಬಿಜೆಪಿ ಬಹುಮತದ ಹತ್ತಿರವಾದ 20 ಸ್ಥಾನಕ್ಕೆ ಬಂದು ನಿಲ್ಲಲಿದೆ. ಆದರೆ ಪಂಜಾಬ್‌ನಲ್ಲಿ ಆಪ್ 50-56 ಸ್ಥಾನ ಜಯಿಸಿದರೂ ಬಹುಮತಕ್ಕೆ 3 ಸ್ಥಾನದ ಕೊರತೆ ಎದುರಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಝೀ ವಾಹಿನಿ ಸಮೀಕ್ಷೆ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ಏರ್ಪಡಲಿದ್ದು, ಕಾಂಗ್ರೆಸ್ 35 ಹಾಗೂ ಬಿಜೆಪಿ 33 ಕ್ಷೇತ್ರಗಳನ್ನು ಜಯಿಸಲಿದೆ. ಅತಂತ್ರ ಸ್ಥಿತಿ ಉಂಟಾಗಲಿದೆ.
ಇಂಡಿಯಾ ಟೀವಿ ಉತ್ತರಪ್ರದೇಶದಲ್ಲಿ ಬಿಜೆಪಿ 235 ಸ್ಥಾನ ಗೆದ್ದು ಸರಳ ಬಹುಮತ ಸಂಪಾದಿಸಲಿದೆ ಎಂದಿದೆ.
ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆ
ಒಟ್ಟು ಸ್ಥಾನ: 403
ಬಹುಮತಕ್ಕೆ 202
* ಪಕ್ಷ- ರಿಪಬ್ಲಿಕ್| ಇಂಡಿಯಾ ಟೀವಿ| ಜನ್ ಕೀ ಬಾತ್
ಬಿಜೆಪಿ- 252-272| 230-235| 226-246
ಕಾಂಗ್ರೆಸ್- 3-9| 3-7| 0-01
ಎಸ್‌ಪಿ- 111-131| 160-165| 144-166
ಬಿಎಸ್‌ಪಿ- 8-16| 2-5| 8-12
ಪಕ್ಷೇತರರು- 00| 1-3| 0-4
ಉತ್ತರಾಖಂಡ ಚುನಾವಣಾ ಪೂರ್ವ ಸಮೀಕ್ಷೆ
ಒಟ್ಟು ಕ್ಷೇತ್ರ 70
ಬಹುಮತಕ್ಕೆ 36
* ಪಕ್ಷ- ರಿಪಬ್ಲಿಕ್| ಜಿ ನ್ಯೂಸ್| ಜನ್ ಕೀ ಬಾತ್
ಬಿಜೆಪಿ- 35-42| 33| 34-38
ಕಾಂಗ್ರೆಸ್ 25-31| 35| 24-33
ಆಪ್ 00-02| 1| 2-6
ಪಕ್ಷೇತರರು 01-03| 1| 1-2
ಪಂಜಾಬ್ ಚುನಾವಣಾ ಪೂರ್ವ ಸಮೀಕ್ಷೆ
ಒಟ್ಟು ಕ್ಷೇತ್ರಗಳು 117
ಬಹುಮತಕ್ಕೆ
* ಪಕ್ಷ- ರಿಪಬ್ಲಿಕ್| ಜನ್ ಕೀ ಬಾತ್
ಬಿಜೆಪಿ 1-3| 1-2
ಕಾಂಗ್ರೆಸ್ 42-48| 32-42
ಆಪ್ 50-56| 58-65
ಎಸ್‌ಎಡಿ 13-17| 15-18
ಪಕ್ಷೇತರರು 1-3| 01
ಮಣಿಪುರ ಚುನಾವಣಾ ಪೂರ್ವ ಸಮೀಕ್ಷೆ
ಒಟ್ಟು ಕ್ಷೇತ್ರ 60
ಬಹುಮತಕ್ಕೆ 31
* ಪಕ್ಷ- ರಿಪಬ್ಲಿಕ್
ಬಿಜೆಪಿ 31-37
ಕಾಂಗ್ರೆಸ್ 13-19
ಎನ್‌ಪಿಪಿ 3-9
ಪಕ್ಷೇತರರು 0-2
ಗೋವಾ ಚುನಾವಣಾ ಪೂರ್ವ ಸಮೀಕ್ಷೆ
ಒಟ್ಟು ಕ್ಷೇತ್ರ 40
ಬಹುಮತಕ್ಕೆ 21
* ಪಕ್ಷ- ರಿಪಬ್ಲಿಕ್
ಬಿಜೆಪಿ 16-20
ಕಾಂಗ್ರೆಸ್ 9-13
ಟಿಎಂಸಿ 1-5
ಆಪ್ 4-8
ಇತರರು 1-3