Assembly Elections 2022 ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಣೆ, ನ.12ಕ್ಕೆ ಎಲೆಕ್ಷನ್!

By Suvarna NewsFirst Published Oct 14, 2022, 3:44 PM IST
Highlights

ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟಗೊಂಡಿದೆ. ನವೆಂಬರ್ 12ಕ್ಕೆ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ(ಅ.14):  ಭಾರಿ ನಿರೀಕ್ಷೆ ಹಾಗೂ ಕುತೂಹಲದ ಆಗರವಾಗಿರುವ  ಹಿಮಾಚಲ ಪ್ರದೇಶ ಚುನಾವಣಾ ದಿನಾಂಕ ಪ್ರಕಟಗೊಂಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಹಿಮಾಚಲ ಪ್ರದೇಶದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 12ಕ್ಕೆ ಚುನಾವಣೆ ನಡೆಯಲಿದೆ. ಇನ್ನು ಡಿಸೆಂಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ. ಈ ಬಾರಿ 43,000 ಮಂದಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ ಎಂದು ಆಯೋಗ ಚೇರ್ಮೆನ್ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.  100 ವರ್ಷಕ್ಕಿಂತ ಮೇಲ್ಪಟ್ಟ 1,000 ಮತದಾರರು ಹಿಮಾಚಲ ಪ್ರದೇಶದಲ್ಲಿದ್ದಾರೆ. ಯಾವುದೇ ಅಡೆ ತಡೆ ಇಲ್ಲದೆ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಿಮಾಚಲ ಪ್ರದೇಶ ಗಡಿಗಳಲ್ಲಿ ಹದ್ದಿನ ಕಣ್ಣಿಡಲಾಗುತ್ತದೆ. ಈ ಮೂಲಕ ಹಣ ಸಾಗಾಣೆ, ಡ್ರಗ್ಸ್ ಸೇರಿದಂತೆ ಇತರ ಯಾವುದೇ ಕಾನೂನು ಬಾಹಿರ ಸಾಗಣೆಗೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದು ರಾಜೀಕ್ ಕುಮಾರ್ ಹೇಳಿದ್ದಾರೆ.

80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳಲಾಗುವುದು. ಸಿಬ್ಬಂಧಿಗಳು ಅವರ ಮನೆಗೆ ತೆರಳಿ ಮತದಾನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಸಂಪೂರ್ಣ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ನಮಗೆ ಕೋವಿಡ್ ಸವಾಲು ಇಲ್ಲ. ಆದರೆ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗಲಿದೆ ಎಂದಿದ್ದಾರೆ. ಹಿಮಾಚಲ ಪ್ರದೇಶದ ಹವಾಮಾನ ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ದಿನಾಂಕ ನಿಗದಿಪಡಿಸಲಾಗಿದೆ ಎಂದಿದ್ದಾರೆ.

Congress President Election: ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ವೇಳಾಪಟ್ಟಿ
ಗೆಜೆಟ್ ಅಧಿಸೂಚನೆ ದಿನಾಂಕ: ಅಕ್ಟೋಬರ್ 17
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 25
ನಾಮಪತ್ರ ಪರಿಶೀಲನೆ ದಿನಾಂಕ: ಅಕ್ಟೋಬರ್ 27
ನಾಮಪತ್ರ ಹಿಂಪಡೆಯಲು ಅಂತಿಮ ದಿನಾಂಕ: ಅಕ್ಟೋಬರ್ 29
ಮತದಾನ ದಿನಾಂಕ: ನವೆಂಬರ್ 12
ಮತ ಎಣಿಕೆ ದಿನಾಕ: ಡಿಸೆಂಬರ್ 8

ಮತದಾರರು ತಮ್ಮ ಮತದಾನದ ಗುರುತಿನ ಚೀಟಿ ತೋರಿಸಿ ಆಯಾ ಮತ ಕೇಂದ್ರಗಳಲ್ಲಿ ಮತದಾನ ಮಾಡಬಹುದು. ಮತದಾನದ ಗುರುತಿನ ಚೀಟಿ ಬದಲು ಚುನಾವಣಾ ಆಯೋಗ ಇತರ ಗುರುತಿನ ಚೀಟಿಗಳನ್ನು ತೋರಿಸು ಮತದಾನ ಮಾಡಲು ಅವಕಾಶವಿದೆ ಎಂದಿದೆ. ಯಾವ ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಸಾಧ್ಯ ಅನ್ನೋ ಮಾಹಿತಿಯನ್ನು ಈ ಕಳೆಗೆ ನೀಡಲಾಗಿದೆ.

ಚುನಾವಣೆಗೆ ಅನರ್ಹರಿಗೆ ಸ್ಪರ್ಧಿಸಲು ಅವಕಾಶ : ನ್ಯಾಯಾಲಯ ಆದೇಶ

ಪಾಸ್‌ಪೋರ್ಟ್
ಡ್ರೈವಿಂಗ್ ಲೈಸೆನ್ಸ್
ಮನ್ರೇಗಾ ಕಾರ್ಡ್
ಫೋಟೋ ಇರುವ ಪಾಸ್‌ಬುಕ್
ಯುಡಿಐಡಿ ಕಾರ್ಡ್
ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
ಪಾನ್ ಕಾರ್ಡ್
ಪಿಂಚಣಿ ದಾಖಲೆ
RGI ನೀಡಿದ ಸ್ಮಾರ್ಟ್ ಕಾರ್ಡ್
MP/MLA/MLC ಗಳಿಗೆ ಅಧಿಕೃತ ಗುರುತಿನ ಚೀಟಿ

ಗುಜರಾತ್ ಚುನಾವಣೆ ದಿನಾಂಕ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಆಯೋಗ ಹೇಳಿದೆ. 20 ದಿನದ ಬಳಿಕ ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕ ಘೋಷಿಸಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶಕ್ಕೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಚಾಲನೆಗೆ ಭೇಟಿ ನೀಡಿದ್ದಾರೆ. ಈ ತಿಂಗಳಲ್ಲಿ ಮತ್ತೆರೆಡು ಬಾರಿ ಭೇಟಿ ನೀಡಲಿದ್ದಾರೆ. ಇತ್ತ ಆಮ್ ಆದ್ಮಿ ಪಾರ್ಟಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲೇ ಠಿಕಾಣಿ ಹೂಡಿದೆ.

click me!