Gyanvapi Case: ಹಿಂದುಗಳಿಗೆ ಹಿನ್ನಡೆ, ಶಿವಲಿಂಗದ ಕಾರ್ಬನ್‌ ಡೇಟಿಂಗ್‌ಗೆ ಕೋರ್ಟ್‌ ನಕಾರ

By Santosh Naik  |  First Published Oct 14, 2022, 2:49 PM IST

ಜ್ಞಾನವಾಪಿಯಲ್ಲಿ ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ವಿಚಾರವಾಗಿ ವಾರಣಾಸಿ ಜಿಲ್ಲಾ ಕೋರ್ಟ್‌ ಶುಕ್ರವಾರ ತನ್ನ ಆದೇಶವನ್ನು ಪ್ರಕಟಿಸಿದೆ. ಹಿಂದು ಹಾಗೂ ಮುಸ್ಲಿಂ ಕಡೆಯ ವಕೀಲರನ್ನು ಮಾತ್ರವೇ ಹೊಂದಿದ್ದ ಕೋರ್ಟ್‌ ಹಾಲ್‌ನಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.


ವಾರಣಾಸಿ (ಅ.14): ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜ್ಞಾನವಾಪಿಯ ಮಸೀದಿಯ ಒಳಗಡೆ ಸಿಕ್ಕಿರುವ 'ಶಿವಲಿಂಗ'ದ ಕಾರ್ಬನ್‌ ಡೇಟಿಂಗ್‌ಗೆ ವಾರಣಾಸಿ ಜಿಲ್ಲಾ ಕೋರ್ಟ್‌ ಶುಕ್ರವಾರ ಅನುಮತಿ ನಿರಾಕರಿಸಿದೆ. ಬಿಗಿ ಬಂದೋಬಸ್ತ್‌ನಲ್ಲಿ ಜಿಲ್ಲಾ ನ್ಯಾಯಾಧೀಶ ಎಕೆ ವಿಶ್ವೇಶ್‌ ಕಾರ್ಬನ್‌ ಡೇಟಿಂಗ್‌ಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಇದರೊಂದಿಗೆ ಹಿಂದು ಪರ ಅರ್ಜಿದಾರರಿಗೆ ದೊಡ್ಡ ಹಿನ್ನಡೆಯಾಗಿದೆ. ಜ್ಞಾನವಾಪಿ ವಿಚಾರಕ್ಕೆ ಸಂಬಂಧಪಟ್ಟ ಕೇವಲ 58 ಮಂದಿಯನ್ನು ಮಾತ್ರವೇ ಕೋರ್ಟ್‌ ಹಾಲ್‌ನಲ್ಲಿ ಒಳಗಡೆ ಬಿಟ್ಟು ತೀರ್ಪು ಪ್ರಕಟಿಸಲಾಗಿದೆ. ಈ ವೇಳೆ ಯಾವುದೇ ಮಾಧ್ಯಮ ಸಿಬ್ಬಂದಿ ಕೂಡ ಕೋರ್ಟ್‌ ಹಾಲ್‌ನಲ್ಲಿ ಇದ್ದಿರಲಿಲ್ಲ.  ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ಮಾದರಿಯ ಕಾರ್ಬನ್‌ ಡೇಟಿಂಗ್‌ ನಡೆಸಲು ಹಿಂದುಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಮಸೀದಿಯ ಒಳಗೆ  ವಜುಖಾನಾದ ರೀತಿಯಲ್ಲಿ ಬಳಸುತ್ತಿದ್ದ ಇದನ್ನು ಮುಸ್ಲೀಮರು ಕಾರಂಜಿ ಎಂದಿದ್ದರು. ಹಾಗಾಗಿ ಇದರ ಕಾರ್ಬನ್‌ ಡೇಟಿಂಗ್‌ ಮಾಡಿದರೆ, ಅದು ಕಾರಂಜಿಯೋ, ಶಿವಲಿಂಗವೋ ಎನ್ನುವುದು ಪತ್ತೆಯಾಗಲಿದೆ ಎಂದು ಹಿಂದುಗಳು ವಾದಿಸಿದ್ದರು. ಆದರೆ, ವಾರಣಾಸಿ ಕೋರ್ಟ್‌ ಮಾತ್ರ ಇದಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ಶಿವಲಿಂಗ ಎಂದು ಹೇಳಲಾಗುವ ಅದರ ಕಾಲಮಾನವೇನು ಎನ್ನುವುದು ಅದರಿಂದ ನಿರ್ಧರಿಸಬಹುದು ಎಂದು ಹೇಳಲಾಗಿತ್ತು

ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಇಂದು ಹಿಂದೂ ಆರಾಧಕರ ಮನವಿಯನ್ನು ತಿರಸ್ಕರಿಸಿದ ನಂತರ ಅಂಜುಮನ್ ಇಂತೇಜಾಮಿಯಾ ಸಮಿತಿಯ (ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ) ಹಿಂದೂ ಆರಾಧಕರು ಸಲ್ಲಿಸಿದ ಮನವಿಗೆ ಆಕ್ಷೇಪಣೆಯನ್ನು ತಿರಸ್ಕರಿಸಿದರು. ಜ್ಞಾನವಾಪಿ ಮಸೀದಿಯ (kashi vishwanath) ಸಮೀಕ್ಷೆಯ ಸಮಯದಲ್ಲಿ "ಶಿವಲಿಂಗ" ಕಂಡುಬಂದಿದೆ ಎಂದು ಹೇಳಲಾದ ಸ್ಥಳವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಆ ಕಾರಣದಿಂದಾಗಿ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಏನಿದು ಕಾರ್ಬನ್‌ ಡೇಟಿಂಗ್‌: ಕಾರ್ಬನ್‌ ಡೇಟಿಂಗ್‌ ಎನ್ನುವುದು ವೈಜ್ಞಾನಿಕ ಪರೀಕ್ಷೆ. ಇದರ ಮೂಲಕ ಪುರಾತನ ವಸ್ತುಗಳ ಕಾಲಮಾನ, ಕಾಲಘಟ್ಟವನ್ನು ನಿಖರವಾಗಿ ನಿರ್ಣಯ ಮಾಡಬಹುದಾಗಿದೆ. ಆಯಾ ವಸ್ತುವಿನ ಮೇಲೆ ಇರುವ ಕಾರ್ಬನ್‌ ಆಧರಿಸಿ ನಡೆಯುವ ಪರೀಕ್ಷೆ ಇದಾಗಿದೆ. ಆ ಪರೀಕ್ಷೆಯ ಬಳಿಕವೇ ವಸ್ತುವಿನ ಕಾಲಮಾನವನ್ನು ನಿರ್ಧರಿಸಲಾಗುತ್ತದೆ. ಅಂದಾಜು 50 ಸಾವಿರ ವರ್ಷಗಳವರೆಗಿನ ವಸ್ತುಗಳ ಕಾಲಮಾನ ಈ ಪರೀಕ್ಷೆಯಿಂದ ತಿಳಿಯಬಹುದು.

Tap to resize

Latest Videos

Gyanvapi Mosque Case: ಎಎಸ್‌ಐ ಸಮೀಕ್ಷೆಗೆ ನೀಡಿದ್ದ ತಡೆಯಾಜ್ಞೆ ಅ.31ರವರೆಗೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್‌!

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಅರ್ಜಿ ವಜಾ: ಸುಪ್ರೀಂ ಕೋರ್ಟ್‌ (supreme Court) ಶಿವಲಿಂಗ (Shivling) ಪತ್ತೆಯಾದ ಸ್ಥಳವನ್ನು ಸೀಲ್ ಮಾಡುವಂತೆ ಹೇಳಿದೆ. ಅದರ ನಡುವೆ ಕಾರ್ಬನ್‌ ಡೇಟಿಂಗ್‌ (Carbon Dating) ಪರೀಕ್ಷೆಗೆ ಅನುಮತಿ ನೀಡುವುದು ಸಾಧ್ಯವಿಲ್ಲ. ವೈಜ್ಞಾನಿಕ ಪರೀಕ್ಷೆ ನಡೆಸಿದರೆ, ಅಲ್ಲಿರುವ ಸಾಕ್ಷಿಗೆ ಹಾನಿಯಾಗುವ ಆತಂಕವಿದೆ. ವಜುಕಾನಾ ಯತಾಸ್ಥಿತಿಯಲ್ಲಿ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.  ಈ ಆದೇಶವನ್ನು ಉಲ್ಲೇಖ ಮಾಡಿ ಕಾರ್ಬನ್‌ ಡೇಟಿಂಗ್‌ ಅನುಮತಿ ನಿರಾಕರಿಸಲಾಗಿದೆ.

Gyanvapi Case: ಶಿವಲಿಂಗದ ಕಾರ್ಬನ್‌ ಡೇಟಿಂಗ್ ತೀರ್ಪು, ಅ. 11ಕ್ಕೆ ಮುಂದೂಡಿದ ಕೋರ್ಟ್‌

ಆಪಾದಿತ ಶಿವಲಿಂಗದ ವೈಜ್ಞಾನಿಕ ತನಿಖೆಯ ಅಗತ್ಯವಿಲ್ಲ ಎಂದು ಮಸೀದಿ (Masjid) ಸಮಿತಿ ಹೇಳಿದೆ. ಈ ನಡುವೆ ಹಿಂದೂ ಕಡೆಯವರು ಜ್ಞಾನವಾಪಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇವರು ಮತ್ತು ದೇವತೆಗಳ ಆರಾಧನೆಯನ್ನು ಕೋರಿದ್ದಾರೆ. ಹಾಗಿರುವಾಗ ಅವರು ಹೇಳುತ್ತಿರುವ ಶಿವಲಿಂಗದ ತನಿಖೆಗೇಕೆ ಒತ್ತಾಯ ಮಾಡುತ್ತಿದ್ದಾರೆ. ಜ್ಞಾನವಾಪಿಯಲ್ಲಿ(Gyanvapi ) ಆಯೋಗದ ಪರವಾಗಿ ಸಾಕ್ಷ್ಯ ಸಂಗ್ರಹಿಸಲು ಹಿಂದೂ (Hindu) ಕಡೆಯವರು ಒತ್ತಾಯಿಸುತ್ತಿದ್ದಾರೆ. ಸಿವಿಲ್ ಪ್ರೊಸೀಜರ್ ಕೋಡ್‌ನಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲ ಎಂದ ಹೇಳಿದೆ.

ಏನಿದು ಪ್ರಕರಣದ ಹಿನ್ನಲೆ: ಮುಖ್ಯ ಮೊಕದ್ದಮೆಯಲ್ಲಿರುವ ಐದು ಹಿಂದೂ ಮಹಿಳೆಯರಲ್ಲಿ (ವಾದಿಗಳು) 4 ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ವೈಜ್ಞಾನಿಕ ತನಿಖೆಗೆ ತ್ವರಿತ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ವಾದಿಗಳ ಪೈಕಿ, ಒಬ್ಬರು (ರಾಖಿ ಸಿಂಗ್) ಕಾರ್ಬನ್ ಡೇಟಿಂಗ್ ಮನವಿಯನ್ನು ವಿರೋಧಿಸಿದ್ದರು. 4 ಅರ್ಜಿದಾರರು ಸಿಪಿಸಿಯ ಆದೇಶ 26 ನಿಯಮ 10ಎ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಇದು ವೈಜ್ಞಾನಿಕ ತನಿಖೆಗಾಗಿ ಆಯೋಗಕ್ಕೆ ಅಧಿಕಾರ ನೀಡುವ ಹಕ್ಕನ್ನು ನ್ಯಾಯಾಲಯಕ್ಕೆ ಒದಗಿಸುತ್ತದೆ. ವಾರಣಾಸಿ ನ್ಯಾಯಾಲಯವು ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯ ಮನವಿಯನ್ನು (ಆದೇಶ 7 ನಿಯಮ 11 CPC ಅಡಿಯಲ್ಲಿ ದಾಖಲಿಸಲಾಗಿದೆ) ವಜಾಗೊಳಿಸಿದ 10 ದಿನಗಳ ನಂತರ ಈ ಮನವಿಯನ್ನು ಸಲ್ಲಿಕೆ ಮಾಡಲಾಗಿತ್ತು. ಐದು ಹಿಂದೂ ಮಹಿಳೆಯರು (ವಾದಿಗಳು) ಜ್ಞಾನವಾಪಿ ಮಸೀದಿ ಆವರಣದಲ್ಲಿ ಆರಾಧನಾ ಹಕ್ಕುಗಳನ್ನು ಕೋರಿ ಸಲ್ಲಿಸಿದ ಮೊಕದ್ದಮೆಯ ನಿರ್ವಹಣೆಯನ್ನು ಕೋರ್ಟ್‌ ಮಾನ್ಯ ಮಾಡಿತ್ತು.

click me!