
ಚೆನ್ನೈ: ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ.85ರಷ್ಟು ಮತ ಚಲಾವಣೆಯಾಗಿದೆ. 2011ರಲ್ಲಿ ಎಐಎಡಿಎಂಕೆ ಭರ್ಜರಿ ಜಯ ಸಾಧಿಸಿದ್ದ ಚುನಾವಣೆಯಲ್ಲಿ ಶೇ.78.29 ರಷ್ಟು ಮತ ಚಲಾವಣೆಯಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು.
ಗುರುವಾರದ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವುದರೊಂದಿಗೆ ಆಡಳಿತಾ ರೂಢ ಡಿಎಂಕೆ, ಆಣ್ಣಾಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್ ನೇತೃತ್ವದ ಟಿವಿಕೆ ನಡುವೆ ತ್ರಿಕೋನ ಸಮರಕ್ಕೆ ವೇದಿಕೆಯಾಗಿದ್ದ ಚುನಾವಣಾ ಕಣ ಕ್ರೈಮ್ಯಾಕ್ಸ್ ಹಂತ ತಲುಪಿದಂತಾಗಿದೆ.
234 ಕ್ಷೇತ್ರಗಳಿಗೆ ಒಟ್ಟು 4023 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 75064 ಮತಗಟ್ಟೆಗಳ ಮೂಲಕ ರಾಜ್ಯದ ಜನತೆ ಅಭ್ಯರ್ಥಿಗಳ ಹಣೆ ಬರಹವನ್ನು ಇವಿಎಂ ಯಂತ್ರದ ಮೂಲಕ ನಿರ್ಧರಿಸಿದ್ದಾರೆ. ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಮತದಾರರು ಇಳಿದರೂ ಮತ ಏರಿಕೆ: ಚುನಾವಣೆಗೂ ಮುನ್ನ ರಾಜ್ಯದಲ್ಲಿ ವಿಶೇಷ ಮತ ದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಮತದಾರರ ಸಂಖ್ಯೆ 6.41 ಕೋಟಿಯಿಂದ 5.73 ಕೋಟಿಗೆ ಇಳಿದಿತ್ತು. ಆದರೂ ದಾಖಲೆ ಪ್ರಮಾಣದಲ್ಲಿ ಮತದಾನ ದಾಖಲಾಗಿದ್ದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಹಾಲಿವುಡ್ ಸ್ಟೈಲಲ್ಲಿ ಭಾರತದ ನೌಕೆ ವಶಕ್ಕೆ ಪಡೆದ ಇರಾನ್: ವೀಡಿಯೋ ಬಿಡುಗಡೆ : ಟ್ರಂಪ್‌ಗೆ ಪರೋಕ್ಷ ಟಾಂಗ್?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ