ಈ ಮದುಮಕ್ಕಳು ಧರಿಸಿದ್ದ ಮಾಸ್ಕ್‌ಗೆ ಸೋಶಿಯಲ್ ಮೀಡಿಯಾ ಫಿದಾ!

By Suvarna NewsFirst Published May 25, 2020, 5:13 PM IST
Highlights

ಜಗತ್ತಿಗೆ ಆವರಿಸಿದ ಕೊರೋನಾ/ ಮದುಮಕ್ಕಳ ಮಾಸ್ಕ್ ವೈರಲ್/ ಅಪ್ಪಟ ರೇಷ್ಮೆಯ ಮಾಸ್ಕ್/ ಮಾಸ್ಕ್ ಮೇಲೆ ಸುಂದರ ಕಲಾಕೃತಿ

ಗುಹವಾಟಿ(ಮೇ 25) ಕೊರೋನಾ ವೈರಸ್ ಎಂಬ ಮಹಾಮಾರಿ  ಜಗತ್ತನ್ನು ಆವರಿಸಿಕೊಂಡ ನಂತರ ಮಾಆನವ ಮಾಸ್ಕ್ ಧರಿಸಿ ಓಡಾಡುವುದು ಕಡ್ಡಾಯ ಆಗಿದೆ. ಮದುಮಕ್ಕಳಿಗೆ ಮಾಸ್ಕ್ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು. ಈಗ ಮತ್ತೊಂದು ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಅಸ್ಸಾಂನ ಗುಹವಾತಿಯಲ್ಲಿ  ಮೇ 22 ರಂದು ನಡೆದ ಮದುವೆಯಲ್ಲಿ ಮದುಮಗ ಮತ್ತು ಮದುಮಗಳು ಮ್ಯಾಚಿಂಗ್ ಮಾಸ್ಕ್ ಧರಿಸಿದ್ದಾರೆ. ಅದು ಅಪ್ಪಟ ರೇಷ್ಮೆಯಿಂದ ಮಾಡಿದ್ದು.

ಇದು ಪಕ್ಕಾ ಡಿಫರೆಂಟ್ ಮಾಸ್ಕ್; ನಿಮ್ಮ ಮುಖ ಮರೆಯಾಗಲ್ಲ

ಅಸ್ಸಾಂನ ಪಾತ್ ಸಿಲ್ಕ್ ನಿಂದ ತಯಾರು ಮಾಡಿದ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದಾರೆ. ಮಾಸ್ಕ್ ಕೇವಲ ಮಾಸ್ಕ್ ಆಗಿಲ್ಲ, ಅದರ ಮೇಲೆ ಕ್ರಿಯಾತ್ಮಕ ಕೆತ್ತನೆಗಳಿವೆ, ಮಾಸ್ಕ್ ಗೆ ಹೊಸ ರಂಗು ತರಲಾಗಿದೆ, ವೂದ್ಯಾಧಿಕಾರಿಗಳ ನಿರ್ದೇಶನವನ್ನು ಪಡೆದುಕೊಳ್ಳಲಾಗಿದೆ ಎಂದು ಮಾಸ್ಕ್ ಡಿಸೈನ್ ಮಾಡಿರುವ ನಂದಿನಿ ಬೋರಾಕಾಟಿ ಹೇಳುತ್ತಾರೆ.

ಮದುಮಕ್ಕಳಿಗೆ ಮಾಸ್ಕ್ ತಯಾರಿಸಿಕೊಡಬೇಕೆಂಬ ಆರ್ಡರ್ ನಮ್ಮ ಕೈಸೇರಿತ್ತು. ಮಾಸ್ಕ್ ನಲ್ಲಿಯೇ ಕಲೆ ಅರಳಿಸುವ ಯತ್ನ ಮಾಡಿದೇವು ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ. 

ಮದುಮಗಳು ಮಾಸ್ಕ್ ಧರಿಸಿದ ನಂತರ ಟಿಕ್ ಟಾಕ್ ವಿಡಿಯೋ ಒಂದನ್ನು  ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. 20 ಗಂಟೆ ಅವಧಿಯಲ್ಲಿ ವಿಡಿಯೋ 1.3 ಮಿಲಿಯನ್ ವೀವ್ಸ್ ಕಂಡಿದೆ ಎಂದು  ಮೇಕಪ್ ಆರ್ಟಿಸ್ಟ್ ಹೀಮಾದ್ರಿ ಗೋಗೊಯ್ ಹೇಳುತ್ತಾರೆ.
 

 

 

click me!