* ಅಸ್ಸಾಂನಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು 2 ಮಕ್ಕಳ ನೀತಿ
* ಹಂತ ಹಂತವಾಗಿ ಜಾರಿಗೆ ಸಿದ್ಧತೆ: ಸಿಎಂ
* ಕೇಂದ್ರದ ಯೋಜನೆಗೆ ಅನ್ವಯವಿಲ್ಲ
ಗುವಾಹಟಿ(ಜೂ.20): ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಎರಡು ಮಕ್ಕಳ ನೀತಿಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ.
ಸದ್ಯದ ಮಟ್ಟಿಗೆ ರಾಜ್ಯದ ಕೆಲವು ಯೋಜನೆಗಳಿಗೆ ಮಾತ್ರವೇ ಈ ನೀತಿ ಅನ್ವಯ ಆಗಲಿದೆ. ಹಂತ ಹಂತವಾಗಿ ಇತರ ಯೋಜನೆಗಳಿಗೆ ವಿಸ್ತರಿಸಲಾಗುತ್ತದೆ ಎಂದು ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಶನಿವಾರ ತಿಳಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಅನುಸರಿಸಿ; ವಲಸೆ ಮುಸ್ಲಿಮರಿಗೆ ಅಸ್ಸಾಂ ಸಿಎಂ ಸೂಚನೆ!
ಆದರೆ, ಈಗಾಗಲೇ ಹಲವು ಕುಟುಂಬಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಪ್ರವೇಶ, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಕೆಲವು ಯೋಜನೆಗಳನ್ನು ಎರಡು ಮಕ್ಕಳ ನೀತಿಯಿಂದ ಹೊರಗಿಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಧ್ವಂಸಗೊಂಡ, ದಿಕ್ಕಿಲ್ಲದ ಟೈಟಾನಿಕ್ ಮುಳುಗಲಾರಂಭಿಸಿದೆ: ಕೈಗೆ ಬಿಜೆಪಿ ನಾಯಕನ ಪೆಟ್ಟು!
ಕಳೆದ ತಿಂಗಳು ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಹಿಮಂತ್ ಬಿಸ್ವಾ ಶರ್ಮಾ ಜನಸಂಖ್ಯಾ ನಿಯಂತ್ರಣಕ್ಕಾಗಿ ಎರಡು ಮಕ್ಕಳ ನೀತಿಯನ್ನು ಬೆಂಬಲಿಸಿದ್ದರು.