
ಸಿಂಗಾಪುರದಲ್ಲಿ ಸಾವಿಗೀಡಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸೋದರ ಸಂಬಂಧಿ, ಸಹ ಗಾಯಕರು, ಬ್ಯಾಂಡ್‌ಮೇಟ್‌ಗಳು, ಕಾರ್ಯಕ್ರಮ ಸಂಘಟಕರ ಬಂಧನದ ನಂತರ ಈಗ ಜುಬೀನ್ ಗಾರ್ಗ್ ಅವರ ಭದ್ರತಾ ಸಿಬ್ಬಂದಿಯನ್ನು ಸಹ ಅಸ್ಸಾಂನ ವಿಶೇಷ ತನಿಖಾ ತಂಡ ಬಂಧಿಸಿದೆ. ಜುಬೀನ್ ಗಾರ್ಗ್ ಸಾವಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ನಿನ್ನೆಯಷ್ಟೆ ಜುಬೀನ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್‌ನನ್ನು ಬಂಧಿಸಿದ್ದರು. ಸಂದೀಪನ್ ಅವರು ಅಸ್ಸಾಂ ಪೊಲೀಸ್ ಸರ್ವಿಸ್‌ನಲ್ಲಿ ಉದ್ಯೋಗದಲ್ಲಿದ್ದು, ಕಮ್ರಾಪ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಇವರ ಬಂಧನದ ನಂತರ ಈಗ ಜುಬೀನ್ ಅವರ ಸೋದರ ಸಂಬಂಧಿಯ ಬಂಧನದ ನಂತರ ಈಗ ಅವರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಕುಡ ಬಂಧಿಸಿದ್ದಾರೆ. ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತನಿಖಾ ತಂಡ ಈ ಇಬ್ಬರನ್ನು ಬಂಧಿಸಿದ್ದು, ಬಂಧಿತ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ನಂದೇಶ್ವರ್ ಬೋರಾ ಹಾಗೂ ಪರೇಶ್ ಬೈಶಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸುದೀರ್ಘ ಕಾಲದಿಂದ ಜುಬೀನ್ ಗಾರ್ಗ್ ಅವರಿಗೆ ವೈಯಕ್ತಿಕ ಭದ್ರತೆಯನ್ನು ನೀಡುತ್ತಿದ್ದರು.
ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆ
ಈ ಪ್ರಕರಣದಲ್ಲಿಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಜುಬೀನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ, ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವ ಆಯೋಜಿಸಿದ್ದ ಸಂಘಟಕ ಶ್ಯಾಮಕಾನು ಮಹಂತಾ ಅವರನ್ನು ಎರಡು ವಾರಗಳ ಹಿಂದೆಯೇ ದೆಹಲಿಯಲ್ಲಿ ತನಿಖಾ ತಂಡ ಬಂಧಿಸಿದೆ. ಇವರ ಬಂಧನದ ನಂತರ ಜುಬೀನ್ ಗಾರ್ಗ್ ಅವರ ಬ್ಯಾಂಡ್ ಮೇಟ್ ಗಾಯಕ ಶೇಕರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕ ಅಮೃತ್‌ಪ್ರವಾ ಮಹಂತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಈಗ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಕೂಡ ಬಂಧಿಸಿದ್ದು, ಹೀಗಾಗಿ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.
ಕಳೆದ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಡೆದ ಈಶಾನ್ಯ ಭಾರತ ಉತ್ಸವದ ಸಂದರ್ಭದಲ್ಲಿ ನಡೆದ ವಿಹಾರ ನೌಕೆ ಪಾರ್ಟಿ ವೇಳೆ ಜುಬೀನ್ ಗಾರ್ಗ್ ನೀರಿಗೆ ಬಿದ್ದು ನಂತರ ಸಾವನ್ನಪ್ಪಿದ್ದರು. ಈ ವೇಳೆ ಜುಬೀನ್ ಜೊತೆ ಸಹಗಾಯಕರಾದ ಗೋಸ್ವಾಮಿ ಮತ್ತು ಮಹಾಂತ ಇಬ್ಬರೂ ಇದ್ದರು. ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳಲ್ಲಿ 52 ವರ್ಷದ ಗಾರ್ಗ್ ಅವರು ಈಜಲು ಹೋದಾಗ ಅವರ ದೇಹ ನೀರಿನಲ್ಲಿ ಕೆಳಮುಖ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿತು. ಈ ವೇಳೆ ಗೋಸ್ವಾಮಿ ಅವರು ಕೂಡ ಜುಬೀನ್ ಗಾರ್ಗ್ ಅವರಿಗೆ ಬಹಳ ಹತ್ತಿರದಲ್ಲೇ ಈಜುತ್ತಿರುವುದನ್ನು ವೀಡಿಯೊಗಳಲ್ಲಿ ನೋಡಲಾಗಿದೆ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ಹೇಳಿವೆ. ಇತ್ತ ಮಹಂತಾ ಇಡೀ ಘಟನೆಯನ್ನು ತಮ್ಮ ಸೆಲ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಹೀಗಾಗಿ ಆರು ದಿನಗಳ ಕಾಲ ಸತತ ವಿಚಾರಣೆ ನಡೆಸಿದ ಪೊಲೀಸರು ನಂತರ ಈ ಇಬ್ಬರನ್ನು ಬಂಧಿಸಿದ್ದಾರೆ.
ಸಿಂಗಾಪುರದಲ್ಲಿ ಸ್ವಿಮ್ಮಿಂಗ್ ವೇಳೆ ಜುಬೀನ್ ಗಾರ್ಗ್ ಜೀವರಕ್ಷಕ ಜಾಕೆಟ್‌ನ್ನು ಧರಿಸಿರಲಿಲ್ಲ, ಭಾರತ ಸಿಂಗಾಪುರ ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷದ ಆಚರಣೆ ಮತ್ತು ಭಾರತ ಆಸಿಯಾನ್ ಪ್ರವಾಸೋದ್ಯಮ ವರ್ಷ ಹಾಗೂ ಈಶಾನ್ಯ ಭಾರತ ಉತ್ಸವವನ್ನು ಆಚರಿಸಲು ಅವರು ಸಿಂಗಾಪುರಕ್ಕೆ ತೆರಳಿದ್ದರು. ಆದರೆ ಜುಬೀನ್ ಅವರ ಸಾವು ಸಂಭವಿಸಿದ್ದರಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು.
ಇದನ್ನೂ ಓದಿ: ಸಾವಿನಿಂದ ಜಸ್ಟ್ ಮಿಸ್: ಕಾರಿನ ಡ್ಯಾಶ್‌ಕ್ಯಾಮ್ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಹೊಟ್ಟೆಯಿಂದ ಹೇಗೆ ಹೊರಗೆ ಬಂದೆ ಎಂದು ಕೇಳಿದ ಮಗು: ಅಮ್ಮನ ಉತ್ತರ ಕೇಳಿದ ಮಗು ಹೇಳಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ