SSLC ಓದಿ ಮದುವೆಯಾಗುವ ವಧುಗೆ ಸರ್ಕಾರದಿಂದ 10 ಗ್ರಾಂ ಚಿನ್ನ!

By Web DeskFirst Published Nov 21, 2019, 10:22 AM IST
Highlights

ರಾಜ್ಯ ಸರ್ಕಾರ ಅರುಂಧತಿ ಗೋಲ್ಡ್‌ ಯೋಜನೆ ಜಾರಿ| ಎಸ್‌ಎಸ್‌ಎಲ್‌ಸಿ ಪೂರೈಸಿದ ವಧುವಿಗೆ ಸರ್ಕಾರ 10 ಗ್ರಾಂ ಚಿನ್ನ ಘೋಷಣೆ| 

ಗುವಾಹಟಿ[ನ.21]: ಎಸ್‌ಎಸ್‌ಎಲ್‌ಸಿ ವ್ಯಾಸಂಗ ಪೂರೈಸಿದ ಪ್ರತಿ ವಯಸ್ಕ ಹೆಣ್ಣುಮಕ್ಕಳಿಗೆ ಮದುವೆ ವೇಳೆ 10 ಗ್ರಾಂ ಚಿನ್ನ ಉಡುಗೊರೆ ನೀಡಲಾಗುವುದು ಎಂದು ಅಸ್ಸಾಂ ಸರ್ಕಾರ ಪ್ರಕಟಿಸಿದೆ.

ಇದಕ್ಕಾಗಿ ರಾಜ್ಯ ಸರ್ಕಾರ ಅರುಂಧತಿ ಗೋಲ್ಡ್‌ ಯೋಜನೆ ಜಾರಿ ಮಾಡಿದ್ದು, ಬೊಕ್ಕಸದಲ್ಲಿ 800 ಕೋಟಿ ರು. ಅನುದಾನ ಮೀಸಲಿಟ್ಟಿದೆ. 2020 ಜನವರಿ 1ರಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್

ಅಸ್ಸಾಂನಲ್ಲಿ ಪ್ರತಿವರ್ಷ 3 ಲಕ್ಷ ಮದುವೆಗಳು ನಡೆಯುತ್ತವೆ. ಇದರಲ್ಲಿ 50 ರಿಂದ 60 ಸಾವಿರ ಜನರು ಮಾತ್ರ ವಿವಾಹ ನೋಂದಣಿ ಮಾಡಿಸುತ್ತಾರೆ. ಈ ಯೋಜನೆಯ ಲಾಭ ಪಡೆಯುವವರು ವಿವಾಹ ನೋಂದಣಿ ಕಡ್ಡಾಯ ಮಾಡಿಸಲೇಬೇಕು.

ಅಲ್ಲದೇ, ಎಸ್‌ಎಸ್‌ಎಲ್‌ಸಿ ಅರ್ಹತೆ ಕಡ್ಡಾಯವಾಗಿರುವುದರಿಂದ ಹೆಣ್ಣು ಮಕ್ಕಳ ಸಾಕ್ಷರತೆ ಪ್ರಮಾಣ ಹೆಚ್ಚಳ, ಬಾಲ್ಯವಿವಾಹವನ್ನು ತಡೆಗಟ್ಟುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ಹಣಕಾಸು ಖಾತೆ ಸಚಿವ ಹಿಮಂತ್‌ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

click me!