
ಅಸ್ಸಾಂ(ಎ.03): ಸತತ ಚುನಾವಣೆ ರ‍್ಯಾಲಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಪಂಚ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ವಿಶ್ವಾಸದಲ್ಲಿದ್ದಾರೆ. ದಕ್ಷಿಣ ಭಾರತದ ರ‍್ಯಾಲಿ ಬಳಿಕ ಅಸ್ಸಾಂಗೆ ತೆರಳಿದ ಮೋದಿ ಇಂದು(ಎ.03) ತಮಲ್‌ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಬೃಹತ್ ರ‍್ಯಾಲಿಯನ್ನುದ್ದೇಶಿ ಮಾತನಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತ ಕುಸಿದ ಬಿದ್ದ ಘಟನೆ ನಡೆದಿದೆ. ತಕ್ಷಣವೇ ಮೋದಿ, ತಮ್ಮ ವೈದ್ಯಕೀಯ ತಂಡಕ್ಕೆ ಸೂಚನೆ ನೀಡಿದ್ದಾರೆ.
ಪ್ರಧಾನಿ ಮೋದಿಗೆ ಕೇರಳ ಜನತೆಯ ಅದ್ಧೂರಿ ಸ್ವಾಗತ; ಕ್ರೀಡಾಂಗಣದಲ್ಲಿ ಫ್ಲಾಶ್ ಲೈಟ್ ಮಿಂಚು!.
ತಮಲ್‌ಪುರದಲ್ಲಿನ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಷಣ ಕೇಳಲು ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಆಗಮಿಸಿದ್ದರು. ಬಿಸಿಲನ್ನು ಲೆಕ್ಕಿಸದೆ ಜನ ಮೋದಿ ಭಾಷಣ ಕೇಳುತ್ತಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಬಿಸಿಲನ ಬೇಗೆಗೆ ತಾಳಲಾರದೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಭಾಷಣ ನಿಲ್ಲಿಸಿದ ಮೋದಿ, ತಮ್ಮ ಜೊತೆ ಬಂದ ವೈದ್ಯಕೀಯ ತಂಡಕ್ಕೆ ಸೂಚನೆ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮೋದಿ ವಿಡಿಯೋ ಎಡಿಟ್ ಮಾಡಿ ಪೇಚಿಗೆ ಸಿಲುಕಿದ ಕಾಂಗ್ರೆಸ್; ಸತ್ಯ ಬಯಲಾದಾಗ ಟ್ವೀಟ್ ಡಿಲೀಟ್!.
ಪ್ರಧಾನಿ ವೈದ್ಯಕೀಯ ತಂಡ ತಕ್ಷಣವೇ ಕಾರ್ಯಕರ್ತನ ನೆರವಿಗೆ ಧಾವಿಸಬೇಕು. ಕಾರ್ಯಕರ್ತನಿಗೆ ನೀರಿನ ಅಭಾವ ಕಾಣುತ್ತಿದೆ. ತಕ್ಷಣವೇ ಕಾರ್ಯಕರ್ತನಿಗೆ ನೆರವಿನ ಅಗತ್ಯವಿದೆ. ನನ್ನ ಜೊತೆ ಬಂದಿರುವ ಪ್ರಧಾನಿ ವೈದ್ಯಕೀಯ ತಂಡ ತಕ್ಷಣವೇ ನಮ್ಮ ಸ್ನೇಹಿತನಿಗೆ ನೆರವಾಗಬೇಕು ಎಂದು ಭಾಷಣದ ನಡುವೆ ಸೂಚನೆ ನೀಡಿದ್ದಾರೆ.
ಅಸ್ಸಾಂ ವಿಧಾನಸಬೆ ಚುನಾವಣೆ 3 ಹಂತದಲ್ಲಿ ನಡೆಯಲಿದೆ. ಈಗಾಗಲೇ ಎರಡು ಹಂತದ ಚುನಾವಣೆ ಪೂರ್ಣಗೊಂಡಿದೆ. ಅಂತಿಮ ಹಂತದ ಚುನಾವಣೆ ಎಪ್ರಿಲ್ 6 ರಂದು ನಡೆಯಲಿದೆ. ಮೇ.02ರಂದು ಫಲಿತಾಂಶ ಹೊರಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ