
ಭಾರತದಲ್ಲಿ ಸನಾತನ ಶಕ್ತಿ ಇರೋವರೆಗೂ ನೀವು ನರೇಂದ್ರ ಮೋದಿಯವರ ಒಂದು ಕೂದಲು ಅಲುಗಾಡಿಸಲಾಗಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಚುನಾವಣಾ ಆಯೋಗ, ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರಾಹುಲ್ ಗಾಂಧಿ ವಿರುದ್ಧ 'ಅಭಿವೃದ್ಧಿ ಹೊಂದಿದ ಭಾರತ ಸಂಕಲ್ಪ ಸಭೆ'ಯನ್ನುದ್ದೇಶಿಸಿ ಮಾತನಾಡುವ ವೇಳೆ ವಾಗ್ದಾಳಿ ನಡೆಸಿದರು.
'ರಾಹುಲ್ ಗಾಂಧಿ ಹತ್ತಿಪ್ಪತ್ತು ಸಾವಿರ ಜನರನ್ನು ಒಟ್ಟುಗೂಡಿಸುವ ಮೂಲಕ ಪ್ರಧಾನಿ ಮೋದಿಯವರನ್ನು ತಡೆಯಬಹುದು ಎಂದು ಭಾವಿಸಿದರೆ, ಅದು ಅವರ ಭ್ರಮೆ. ಮೋದಿಯವರ ಬೆನ್ನಿಗೆ ಕೋಟ್ಯಂತರ ಭಾರತೀಯರ ಶಕ್ತಿಯಿದೆ ಎಂಬುದು ಮರೆಯಬೇಡಿ. ಇಡೀ ಭಾರತದ ಜನತೆಯ ಆಶೀರ್ವಾದ ನರೇಂದ್ರ ಮೋದಿಯವರಿಗಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಪಕ್ಷವು ಚೀನಾ ಗಡಿಯಲ್ಲಿ ಸೈನ್ಯವನ್ನು ಕೈಬಿಟ್ಟಿತ್ತು. ಆದರೆ ಇಂದು ಮೋದಿ ಅವರ ನಾಯಕತ್ವದಲ್ಲಿ ಯಾರಿಗೂ ಹೆದರದ ನವ ಭಾರತವನ್ನು ನಿರ್ಮಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ಅಧಿಕಾರಾವಧಿಯಲ್ಲಿ ದೇಶವನ್ನು ಪುನರ್ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಜನತೆ ಕೇಂದ್ರದಲ್ಲಿ ಮೂರನೇ ಬಾರಿಗೆ ಪ್ರಧಾನಿ ಮೋದಿಯವರಿಗೆ ನಾಯಕತ್ವ ನೀಡಿದ್ದಾರೆ. ಇದು ದೇಶದ ಜನತೆ ಮೋದಿಯವರ ಮೇಲಿಟ್ಟಿರುವ ನಂಬಿಕೆಯನ್ನ ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ಕೊಡುಗೆಗಳನ್ನು ಸ್ಮರಿಸಿದ ಹಿಮಂತ್, 'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಹಿಡಿದು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಶ್ರಮ, ಸಂಕಲ್ಪ ಭಾರತದ ಇತಿಹಾಸವನ್ನು ರೂಪಿಸಿದ ನಿರ್ಧಾರಗಳಿಂದ ಗುರುತಿಸಲ್ಪಟ್ಟಿದೆ. 2014 ರಿಂದ ಸತತ ಮೂರು ಜನಾದೇಶಗಳು ಭಾರತದ ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಪ್ರಮುಖ ಅಧ್ಯಾಯವಾಗಿದ್ದು, ಮೋದಿ ಅವರ ನಾಯಕತ್ವದಲ್ಲಿ ಭಾರತ ನಂಬಿಕೆ ಇಟ್ಟಿದೆ.
ವಾಜಪೇಯಿ ಅವರ ಉತ್ತಮ ಆಡಳಿತ ಪರಂಪರೆಗೆ ಮೋದಿ ಹೊಸ ಚೈತನ್ಯ ನೀಡಿದ್ದಾರೆ ಎಂದರು.
ಮೋದಿಯವರ ನಾಯಕತ್ವದಲ್ಲಿ ವಾಜಪೇಯಿಯವರ ಉತ್ತಮ ಆಡಳಿತದ ಪರಂಪರೆ ಹೊಸ ವೇಗವನ್ನು ಪಡೆದುಕೊಂಡಿದೆ. ವಿಕಾಸ್ ಭಾರತ್ ಸಂಕಲ್ಪ ಸಭಾವು ಬಿಜೆಪಿಯ 'ಸೇವಾ ಸಂಕಲ್ಪ ಅಭಿಯಾನ'ದ ಅಂತಿಮ ಹಂತದ ಭಾಗವಾಗಿತ್ತು. ಈ ಅಭಿಯಾನವು ಪ್ರಧಾನಿ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಪ್ರಾರಂಭವಾಯಿತು ಮತ್ತು ಇಂದು ಮುಕ್ತಾಯಗೊಂಡಿತು' ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ