ದಿನಕ್ಕೆ 24 ಸಾವಿರಕ್ಕೂ ಹೆಚ್ಚು ರೈಲು; ಭಾರತೀಯ ರೈಲ್ವೆಗೆ ದಿನಕ್ಕೆ ಎಷ್ಟು ಕೋಟಿ ಆದಾಯ ಬರುತ್ತೆ ಗೊತ್ತಾ?

Published : Oct 07, 2026, 06:55 PM IST
Indian Railways

ಸಾರಾಂಶ

ಭಾರತೀಯ ರೈಲ್ವೆಯು ಪ್ರತಿದಿನ 24 ಸಾವಿರಕ್ಕೂ ಹೆಚ್ಚು ರೈಲುಗಳನ್ನು ಓಡಿಸುವ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತದೆ. ಆದರೆ, ಪ್ರಯಾಣಿಕರಿಗಿಂತ ಸರಕು ಸಾಗಣೆಯಿಂದಲೇ ಅತಿ ಹೆಚ್ಚು ಹಣ ಹರಿದುಬರುತ್ತದೆ. ರೈಲ್ವೆಯು ಗಳಿಸುವ ಬಹುಪಾಲು ಹಣವು ಸಿಬ್ಬಂದಿ ವೇತನ, ನಿರ್ವಹಣೆ ಮತ್ತು ಸಬ್ಸಿಡಿ ಟಿಕೆಟ್ ದರಗಳಿಗಾಗಿಯೇ ಖರ್ಚಾಗುತ್ತದೆ.

Indian Railways Income: ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಅಂತ ಕರೆಯುತ್ತಾರೆ. ಇಷ್ಟು ದೊಡ್ಡ ವ್ಯವಸ್ಥೆ ನಡೆಸೋಕೆ ಪ್ರತಿದಿನ ಕೋಟಿ ಕೋಟಿ ಆದಾಯ ಬರುತ್ತೆ, ಹಾಗೇ ಖರ್ಚು ಕೂಡ ಅದೇ ರೇಂಜ್‌ನಲ್ಲಿ ಇರುತ್ತೆ. ಹಾಗಾದರೆ ದಿನಕ್ಕೆ ಎಷ್ಟು ರೈಲುಗಳು ಓಡಾಡುತ್ತವೆ? ರೈಲ್ವೆಗೆ ಬರೋ ಆದಾಯ ಎಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ದಿನಕ್ಕೆ 24 ಸಾವಿರಕ್ಕೂ ಹೆಚ್ಚು ರೈಲುಗಳ ಸಂಚಾರ

ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಸುಮಾರು 24 ರಿಂದ 25 ಸಾವಿರ ರೈಲುಗಳು ಓಡಾಡುತ್ತವೆ. ಇದರಲ್ಲಿ 13,500 ರಿಂದ 14,000 ಪ್ಯಾಸೆಂಜರ್ ರೈಲುಗಳೇ ಇವೆ. ಸಾಮಾನ್ಯ ರೈಲುಗಳು, ಎಕ್ಸ್‌ಪ್ರೆಸ್, ಮೇಲ್, ಸಬರ್ಬನ್, ವಂದೇ ಭಾರತ್ ಹಾಗೂ ಅಮೃತ್ ಭಾರತ್ ರೈಲುಗಳು ಇದರಲ್ಲಿ ಸೇರಿವೆ. ಇವೆಲ್ಲವೂ ಸೇರಿ ದಿನಕ್ಕೆ 2 ರಿಂದ 2.5 ಕೋಟಿ ಜನರನ್ನು ಅವರ ಊರುಗಳಿಗೆ ತಲುಪಿಸುತ್ತವೆ. ಇದರ ಜೊತೆಗೆ ದಿನಕ್ಕೆ 11 ಸಾವಿರಕ್ಕೂ ಹೆಚ್ಚು ಗೂಡ್ಸ್ ರೈಲುಗಳು ಕೂಡ ಸಂಚರಿಸುತ್ತವೆ. ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ, ರಸಗೊಬ್ಬರ ಹಾಗೂ ದವಸ ಧಾನ್ಯಗಳನ್ನು ದೇಶದ ಮೂಲೆ ಮೂಲೆಗೆ ಇವು ಸಾಗಿಸುತ್ತವೆ.

ರೈಲ್ವೆಗೆ ದಿನಕ್ಕೆ ಎಷ್ಟು ಆದಾಯ ಬರುತ್ತೆ?

ಭಾರತೀಯ ರೈಲ್ವೆಯ ವಾರ್ಷಿಕ ಆದಾಯ ಸುಮಾರು 2.74 ಲಕ್ಷ ಕೋಟಿ ರೂಪಾಯಿ. ಅಂದರೆ ದಿನಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತೆ. ಆದರೆ ರೈಲ್ವೆಗೆ ಅತಿ ಹೆಚ್ಚು ದುಡ್ಡು ಬರೋದು ಪ್ರಯಾಣಿಕರ ಟಿಕೆಟ್‌ನಿಂದ ಅಲ್ಲ, ಬದಲಾಗಿ ಗೂಡ್ಸ್ ರೈಲುಗಳಿಂದ. ಒಟ್ಟು ಆದಾಯದಲ್ಲಿ ಶೇ.60 ರಿಂದ 62ರಷ್ಟು ಪಾಲು ಸರಕು ಸಾಗಣೆಯಿಂದಲೇ ಬರುತ್ತೆ. ಅಂದರೆ ದಿನಕ್ಕೆ ಸುಮಾರು 465 ಕೋಟಿ ರೂ. ಆದಾಯ ಗೂಡ್ಸ್ ರೈಲಿನಿಂದಲೇ ಸಿಗುತ್ತೆ. ಇದರಲ್ಲಿ ಕಲ್ಲಿದ್ದಲು ಸಾಗಣೆ ಪಾಲು ದೊಡ್ಡದು. ಇನ್ನು ಪ್ರಯಾಣಿಕರ ರೈಲುಗಳಿಂದ ದಿನಕ್ಕೆ 200 ರಿಂದ 232 ಕೋಟಿ ರೂ. (ಶೇ.31) ಆದಾಯ ಬರುತ್ತೆ. ಉಳಿದ ದುಡ್ಡು ಪಾರ್ಸೆಲ್, ಜಾಹೀರಾತು, ಗುಜರಿ ಮಾರಾಟ ಹಾಗೂ ಲೀಸಿಂಗ್‌ನಿಂದ ಬರುತ್ತೆ.

ಬಂದ ದುಡ್ಡಿನಲ್ಲಿ ಬಹುಪಾಲು ಖರ್ಚಿಗೆ!

ಇಷ್ಟು ದೊಡ್ಡ ರೈಲ್ವೆ ನೆಟ್‌ವರ್ಕ್ ನಡೆಸೋಕೆ ಖರ್ಚು ಕೂಡ ಭಾರಿ ಪ್ರಮಾಣದಲ್ಲಿ ಇರುತ್ತೆ. ರೈಲ್ವೆಯ ದೈನಂದಿನ ನಿರ್ವಹಣಾ ವೆಚ್ಚವೇ ಸುಮಾರು 690 ರಿಂದ 720 ಕೋಟಿ ರೂಪಾಯಿ. ರೈಲ್ವೆಯಲ್ಲಿ ಕೆಲಸ ಮಾಡೋ 12 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯ ಸಂಬಳ ಹಾಗೂ ನಿವೃತ್ತ ನೌಕರರ ಪಿಂಚಣಿಗೆ ದೊಡ್ಡ ಮೊತ್ತದ ಹಣ ಖರ್ಚಾಗುತ್ತೆ. ಇದಲ್ಲದೆ ರೈಲು ಓಡಿಸಲು ಬೇಕಾದ ವಿದ್ಯುತ್, ಡೀಸೆಲ್, ಟ್ರ್ಯಾಕ್ ನಿರ್ವಹಣೆ, ರಿಪೇರಿ, ನಿಲ್ದಾಣಗಳ ನಿರ್ವಹಣೆ ಹಾಗೂ ಸಿಗ್ನಲ್ ವ್ಯವಸ್ಥೆಗೂ ಕೋಟಿ ಕೋಟಿ ಸುರಿಯಬೇಕು. ಬ್ರಾಡ್‌ಗೇಜ್ ನೆಟ್‌ವರ್ಕ್‌ನಲ್ಲಿ ಬಹುತೇಕ ವಿದ್ಯುದ್ದೀಕರಣ ಮುಗಿದಿರುವುದರಿಂದ ವಿದ್ಯುತ್ ಬಳಕೆ ಈಗ ಬಹಳ ಮುಖ್ಯವಾಗಿದೆ. ಖರ್ಚು ಕಡಿಮೆ ಮಾಡಲು ರೈಲ್ವೆ ಇಲಾಖೆ ಈಗ ಸೌರಶಕ್ತಿಯಂತಹ ಪರ್ಯಾಯ ಇಂಧನಗಳ ಮೊರೆ ಹೋಗುತ್ತಿದೆ.

ಆಪರೇಟಿಂಗ್ ರೇಷಿಯೋ ಅಂದರೆ ಏನು?

ಭಾರತೀಯ ರೈಲ್ವೆಯ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು 'ಆಪರೇಟಿಂಗ್ ರೇಷಿಯೋ' ಬಹಳ ಮುಖ್ಯ. ಉದಾಹರಣೆಗೆ, ಆಪರೇಟಿಂಗ್ ರೇಷಿಯೋ ಶೇ.98.43 ಇದೆ ಅಂದರೆ, ರೈಲ್ವೆ 100 ರೂಪಾಯಿ ಸಂಪಾದಿಸಲು 98.43 ರೂಪಾಯಿ ಖರ್ಚು ಮಾಡುತ್ತಿದೆ ಎಂದರ್ಥ. ಅಂದರೆ ಆದಾಯ ಎಷ್ಟಿದೆಯೋ, ಖರ್ಚು ಕೂಡ ಬಹುತೇಕ ಅಷ್ಟೇ ಇರುತ್ತೆ. ಹಾಗಾಗಿ ರೈಲ್ವೆಯನ್ನು ಭಾರಿ ಆದಾಯ ತರುವ ಸಂಸ್ಥೆ ಅನ್ನಬಹುದೇ ಹೊರತು, ಭಾರಿ ಲಾಭ ಮಾಡುವ ಬ್ಯುಸಿನೆಸ್ ಅಂತ ಹೇಳೋಕೆ ಆಗಲ್ಲ. ಬಂದ ದುಡ್ಡಿನಲ್ಲಿ ಬಹುಪಾಲು ನಿರ್ವಹಣೆಗೇ ಹೋಗುತ್ತೆ.

ಪ್ರಯಾಣಿಕರ ಟಿಕೆಟ್ ದರ ಯಾಕೆ ಕಡಿಮೆ ಇರುತ್ತೆ?

ಭಾರತೀಯ ರೈಲ್ವೆ ಕೇವಲ ಒಂದು ವ್ಯಾಪಾರಿ ಸಂಸ್ಥೆಯಾಗಿ ಕೆಲಸ ಮಾಡಲ್ಲ. ದೇಶದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಪ್ರಯಾಣದ ಸೌಲಭ್ಯ ಒದಗಿಸುವುದು ಕೂಡ ಅದರ ಜವಾಬ್ದಾರಿ. ಲೆಕ್ಕಾಚಾರದ ಪ್ರಕಾರ, ಒಬ್ಬ ಪ್ರಯಾಣಿಕನನ್ನು ಒಂದು ಕಿಲೋಮೀಟರ್ ಕರೆದೊಯ್ಯಲು ರೈಲ್ವೆಗೆ ಸರಾಸರಿ 1.38 ರೂ. ಖರ್ಚಾಗುತ್ತೆ. ಆದರೆ ಪ್ರಯಾಣಿಕನಿಂದ ರೈಲ್ವೆಗೆ ಸಿಗುತ್ತಿರೋದು ಕೇವಲ 73 ಪೈಸೆ ಮಾತ್ರ. ಅಂದರೆ ಟಿಕೆಟ್‌ನಿಂದ ಬರೋ ಆದಾಯಕ್ಕಿಂತ, ಪ್ರಯಾಣಿಕರಿಗೆ ಸೇವೆ ನೀಡಲು ರೈಲ್ವೆ ಮಾಡುವ ಖರ್ಚೇ ಹೆಚ್ಚಾಗಿರುತ್ತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಬ್ಬದ ಸೀಸನ್‌ಗೆ 'ರಿಯಲ್‌ಮಿ' ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ
Space Toys: ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಆಟಿಕೆ ಸಾಮಾನುಗಳನ್ನು ಒಯ್ಯುವುದು ಯಾಕೆ? ಭಾರೀ ಸೀಕ್ರೆಟ್ ಇದರಲ್ಲಿದೆ!