
ಅಹಮದಾಬಾದ್ (ನ.19): ದೇಶದಲ್ಲಿ ಪ್ರಬಲ ನಾಯಕ ಇಲ್ಲದೇ ಇದ್ದಲ್ಲಿ, ನಾವು ನಮ್ಮ ಸಮಾಜವನ್ನು ರಕ್ಷಣೆ ಮಾಡಲು ಸಾಧ್ಯವಾಗೋದಿಲ್ಲ. ಹಾಗೇನಾದರೂ ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸದೇ ಇದ್ದಲ್ಲಿ, ಅಫ್ತಾಬ್‌ನಂಥ ವ್ಯಕ್ತಿಗಳು ಪ್ರತಿ ನಗರದಲ್ಲೂ ಹುಟ್ಟುತ್ತಾರೆ ಎಂದುಸ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಶನಿವಾರ ಗುಜರಾತ್‌ನ ಕಛ್‌ನಲ್ಲಿ ನಡೆದ ಚುನಾವಣೆ ಸಮಾವೇಶದ ವೇಳೆ ಹೇಳಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡುವುದು ಪ್ರಸ್ತುತ ಈ ದೇಶದ ತುರ್ತು ಅಗತ್ಯ ಎಂದು ಹೇಳಿರುವ ಬಿಸ್ವಾ, ದೆಹಲಿಯಲ್ಲಿ ಹಿಂದು ಹುಡುಗಿ ಶ್ರದ್ಧಾ ಹತ್ಯೆ ಪ್ರಕರಣ ಲವ್ ಜಿಹಾದ್‌ನ ಕ್ರೂರ ರೂಪ ಎಂದು ಬಣ್ಣಿಸಿದ್ದಾರೆ. ಕೊಲೆಗಾರ ಅಫ್ತಾಭ್ ಪೂನಾವಾಲಾ ಶ್ರದ್ಧಾಳನ್ನು ಮುಂಬೈನಿಂದ ದೆಹಲಿಗೆ ಕರೆತಂದಿದ್ದ, ಲವ್ ಜಿಹಾದ್ ಹೆಸರಿನಲ್ಲಿ 35 ತುಂಡುಗಳನ್ನಾಗಿ ಕತ್ತರಿಸಿದ್ದಾನೆ ಎಂದು ಹೇಳಿದರು. ಶ್ರದ್ಧಾಳ ಮೃತದೇಹವನ್ನು ಆತ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಹಾಗಿದ್ದರೂ ಆತ ಮತ್ತೊಬ್ಬ ಹುಡುಗಿಯನ್ನು ಮನೆಗೆ ಕರೆತಂದು ತನ್ನ ಡೇಟಿಂಗ್ ಕಥೆ ಆರಂಭಿಸಿದ್ದ ಎಂದು ಹೇಳಿದ್ದಾರೆ. ಅದರೊಂದಿಎಗ ಅಫ್ತಾಬ್ ಪೂನಾವಾಲಾನ ಕ್ರೂರತನ ರಾಜಕೀಯ ರೂಪ ಕೂಡ ಪಡೆದುಕೊಂಡಿದೆ.
ಬಿಜೆಪಿ ಖಂಡಿತವಾಗಿ ಮುಸ್ಲಿಂ ಮಹಿಳೆಯರನ್ನು ಗೌರವಿಸುತ್ತದೆ ಎಂದು ಹೇಳಿದ ಹಿಮಾಂತ ಬಿಸ್ವಾ ಶರ್ಮ, ಮೋದಿ ಅವರ ನಾಯಕತ್ವದಲ್ಲಿಯೇ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್‌ನಂತ ಕ್ರೂರ ಅಭ್ಯಾಸಗಳಿಮದ ಸ್ವಾತಂತ್ರ್ಯ ಪಡೆದುಕೊಂಡರು. ನರೇಂದ್ರ ಮೋದಿಯವರು ಏನೇ ಕೆಲಸ ಮಾಡಿದರೂ ಅದನ್ನು ಶಾಂತಿಯುತವಾಗಿ ಮುಗಿಸಿದ್ದಾರೆ. ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಲಾಯಿತು, ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು ಮತ್ತು ಯಾವುದೇ ಗೊಂದಲವಿಲ್ಲ. ಈಗ ನೀವೆಲ್ಲಾ ತಾಳ್ಮೆಯಿಂದಿರಿ, ಏಕರೂಪ ನಾಗರಿಕ ಸಂಹಿತೆ ಕೂಡ ಬರುತ್ತದೆ ಮತ್ತು ನಾಲ್ಕು ಮದುವೆಗಳನ್ನು ಮಾಡಿಕೊಳ್ಳುವ ಅಭ್ಯಾಸವನ್ನೂ ಕೊನೆ ಮಾಡುತ್ತೇವೆ ಎಮದು ಹೇಳಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಮೊದಲ ಹಂತದ ಮತದಾನ ಡಿಸೆಂಬರ್ 1 ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಇದೇ ವೇಳೆ ಎರಡೂ ಹಂತಗಳ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದ್ದು, ಮೊದಲ ಹಂತದ ಮತದಾನ ಪ್ರಕ್ರಿಯೆಗೆ ನ.5ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 10 ರಂದು 2ನೇ ಹಂತದ ಚುನಾವಣೆಯ ಗೆಜೆಟ್ ನೋಟಿಫಿಕೇಶನ್ ಹೊರಬಿದ್ದಿದೆ. ಮೊದಲ ಹಂತದ ನಾಮಪತ್ರಗಳ ಪರಿಶೀಲನೆ ನವೆಂಬರ್ 15 ರಂದು ನಡೆಯಲಿದ್ದರೆ, 2ನೇ ಹಂತದ ಚುನಾವಣೆಯ ಅಭ್ಯರ್ಥಿಗಳ ಪರಿಶೀಲನೆ ನವೆಂಬರ್ 18 ರಂದು ನಡೆಯಲಿದೆ. ಮೊದಲ ಹಂತಕ್ಕೆ ನವೆಂಬರ್ 17 ಹಾಗೂ 2ನೇ ಹಂತಕ್ಕೆ ನವೆಂಬರ್ 21 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
Assam ಮುಸ್ಲಿಮರು ಅಲ್ಪಸಂಖ್ಯಾತರಲ್ಲ, ಬಹುಸಂಖ್ಯಾತರಾಗಿರುವ ಕಾರಣ ಇತರರ ರಕ್ಷಣೆ ಮಾಡಬೇಕು
ಕಳೆದ 24 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರ ಬೇರೆ ಪಕ್ಷಕ್ಕೆ ಹೋಗಿಲ್ಲ. ಕಳೆದ 24 ವರ್ಷಗಳಿಂದ ಭಾರತೀಯ ಜನತಾ ಪಕ್ಷ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. ಇಲ್ಲಿ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಬಿಜೆಪಿಯ ಪ್ರಮುಖ ವಿರೋಧ ಪಕ್ಷವಾಗಿದೆ. ಆದರೆ, ಈ ಬಾರಿ ಆಮ್ ಆದ್ಮಿ ಪಕ್ಷವೂ ಪ್ರವೇಶಿಸಿದೆ. ಇದರೊಂದಿಗೆ ಸಮೀಕರಣವನ್ನು ಬದಲಾಯಿಸುವ ಸಾಧ್ಯತೆಗಳೂ ಇವೆ. ಪಂಜಾಬ್ ಚುನಾವಣೆಯಲ್ಲಿ ಗೆದ್ದ ನಂತರ ಗುಜರಾತ್‌ನಲ್ಲೂ ಆಮ್ ಆದ್ಮಿ ಪಕ್ಷ ಸಂಪೂರ್ಣ ಬಲ ತುಂಬಿದೆ. ಅಂತಹ ಪರಿಸ್ಥಿತಿಯಲ್ಲಿ, ಸ್ಪರ್ಧೆಯು ತ್ರಿಕೋನವಾಗಿರುತ್ತದೆ.
Surgical Strikes Proof Row : ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ಕೇಸ್ ದಾಖಲಿಸಿದೆ ಅಸ್ಸಾಂ ಪೊಲೀಸ್!
ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿಯಲ್ಲಿ 160 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಬದಲಿಗೆ ಡಾ.ದರ್ಶಿತಾ ಶಾ ಅವರು ರಾಜ್‌ಕೋಟ್ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ. ಇದೇ ವೇಳೆ ಹಾಲಿ ಸರ್ಕಾರದ 5 ಸಚಿವರ ಟಿಕೆಟ್‌ಗೂ ಪಕ್ಷ ಕತ್ತರಿ ಹಾಕಿದೆ. ಇವುಗಳಲ್ಲಿ ರಾಜೇಂದ್ರ ತ್ರಿವೇದಿ ಮತ್ತು ಪ್ರದೀಪ್ ಪರ್ಮಾರ್ ಅವರಂತಹ ಹಿರಿಯ ಹೆಸರುಗಳು ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ