Asianet Suvarna News Asianet Suvarna News

Assam ಮುಸ್ಲಿಮರು ಅಲ್ಪಸಂಖ್ಯಾತರಲ್ಲ, ಬಹುಸಂಖ್ಯಾತರಾಗಿರುವ ಕಾರಣ ಇತರರ ರಕ್ಷಣೆ ಮಾಡಬೇಕು

ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಹೇಳಿಕೆ

ಬಹುಸಂಖ್ಯಾತರ ರೀತಿ ಅವರು ಇತರರ ರಕ್ಷಣೆ ಮಾಡಬೇಕು

ಕಾಶ್ಮೀರದಲ್ಲಾದ ರೀತಿಯಲ್ಲೇ ಅಸ್ಸಾಂನಲ್ಲಿ ಆಗಬಾರದು

muslims cannot be considered as a minority anymore in assam says chief minister himanta biswa sarma san
Author
Bengaluru, First Published Mar 16, 2022, 8:30 PM IST

ಗುವಾಹಟಿ (ಮಾ. 16): ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರು ಇನ್ನು ಮುಂದೆ ಅಲ್ಪಸಂಖ್ಯಾತರಲ್ಲ (minority). ಅವರು ಬಹುಸಂಖ್ಯಾತರಾಗಿದ್ದಾರೆ (majority). ಹಾಗಾಗಿ ಬಹುಸಂಖ್ಯಾತರ ಜವಾಬ್ದಾರಿ ಎನ್ನುವಂತೆ ಇತರ ಧರ್ಮದವರನ್ನು ಅವರು ರಕ್ಷಣೆ ಮಾಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ (Assam Chief Minister Himanta Biswa Sarma) ಬುಧವಾರ ಹೇಳಿದ್ದಾರೆ. ಅಸ್ಸಾಂ ಜನಸಂಖ್ಯೆಯಲ್ಲಿ ( Assam's population) ಶೇ. 35ರಷ್ಟು ಮಂದಿ ಈಗ ಮುಸ್ಲಿಮರು.  ಆದ್ದರಿಂದ ಅವರನ್ನು ಇನ್ನುಮುಂದೆ ಅಲ್ಪಸಂಖ್ಯಾತರು ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿರುವ ಮುಸ್ಲಿಮರು ಬಹುಸಂಖ್ಯಾತರಂತೆ ವರ್ತಿಸಬೇಕು. ಕಾಶ್ಮೀರದಲ್ಲಿ ನಡೆದಂಥ ವಿಚಾರಗಳು ಅಸ್ಸಾಂನಲ್ಲಿ ನಡೆಯದೇ ಇರುವಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ನೀಡಬೇಕು ಎಂದು ದಿ ಕಾಶ್ಮೀರ ಫೈಲ್ಸ್  (The Kashmir Files)ಚಿತ್ರವನ್ನು ಉಲ್ಲೇಖಿಸಿ ಹಿಮಾಂತ ಬಿಸ್ವಾ ಶರ್ಮ ಹೇಳಿದ್ದಾರೆ. "ಇಂದು ಮುಸ್ಲಿಂ ಸಮುದಾಯದ ಜನರು ವಿರೋಧ ಪಕ್ಷದ ನಾಯಕರು, ಶಾಸಕರು ಮತ್ತು ಸಮಾನ ಅವಕಾಶ ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಆದ್ದರಿಂದ ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಣೆ ಮಾಡವ ಮೂಲಕ ಮತ್ತು ಅವರ ಭೂಮಿಯನ್ನು ಅತಿಕ್ರಮಿಸದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ" ಎಂದು ಅಸ್ಸಾಂ ವಿಧಾನಸಭೆಯಲ್ಲಿ ( budget session of the Assam Assembly)ನಡೆದ ಬಜೆಟ್ ಅಧಿವೇಶನದಲ್ಲಿ ಹೇಳಿದರು.

 "ಆರನೇ ಶೆಡ್ಯೂಲ್ ಪ್ರದೇಶದಲ್ಲಿ ( sixth schedule area )  ವಾಸಿಸುವ ಆದಿವಾಸಿಗಳ ಭೂಮಿಯನ್ನು ಅತಿಕ್ರಮಿಸುವ ಅಗತ್ಯವಿಲ್ಲ. ಬೋರಾ ( Bora ) ಮತ್ತು ಕಲಿತಾ ( Kalita ) (ಅಸ್ಸಾಮಿ ಉಪನಾಮಗಳು) ಆ ಭೂಮಿಯಲ್ಲಿ ನೆಲೆಸದಿದ್ದರೆ, ಈ ಭೂಮಿಗಳಲ್ಲಿ ಇಸ್ಲಾಂ ( Islam )  ಮತ್ತು ರೆಹಮಾನ್ ( Rahman ) (ಮುಸ್ಲಿಂ ಉಪನಾಮಗಳು) ಸಹ ನೆಲೆಸುವುದನ್ನು ತಡೆಯಬೇಕು" ಎಂದು ಹೇಳಿದ್ದಾರೆ.

Surgical Strikes Proof Row : ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ಕೇಸ್ ದಾಖಲಿಸಿದೆ ಅಸ್ಸಾಂ ಪೊಲೀಸ್!
 "ಅಧಿಕಾರವು ಜವಾಬ್ದಾರಿಯೊಂದಿಗೆ ಬರುತ್ತದೆ" ಮತ್ತು ಮುಸ್ಲಿಮರು ರಾಜ್ಯದ ಜನಸಂಖ್ಯೆಯ 35 ಪ್ರತಿಶತದಷ್ಟು ಇರುವುದರಿಂದ, "ಇಲ್ಲಿನ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರ ಕರ್ತವ್ಯ" ಎಂದು ಬಿಜೆಪಿ ನಾಯಕ  ( BJP leader ) ಹೇಳಿದ್ದಾರೆ. ಅಸ್ಸಾಂ ಅಸೆಂಬ್ಲಿಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ (governor's address in the Assam Assembly )  ಮಾತನಾಡಿದ ಶರ್ಮಾ, "ಅಸ್ಸಾಮಿ ಜನರು ಭಯಭೀತರಾಗಿದ್ದಾರೆ. ಸಂಸ್ಕೃತಿ ( culture ) ಮತ್ತು ನಾಗರಿಕತೆಯನ್ನು ( civilisation ) ರಕ್ಷಿಸುವ ಭಯವಿದೆ. ಸಾಮರಸ್ಯವು ದ್ವಿಮುಖ ಸಂಚಾರವಾಗಿದೆ" ಎಂದರು. ‘ಸಂಕಾರಿ ಸಂಸ್ಕೃತಿ, ಸತ್ರೀಯ ಸಂಸ್ಕೃತಿ ರಕ್ಷಣೆ ಬಗ್ಗೆ ಮುಸ್ಲಿಮರು ಮಾತನಾಡಲಿ.. ಸೌಹಾರ್ದತೆ ಇರುತ್ತದೆ, ಹತ್ತು ವರ್ಷಗಳ ಹಿಂದೆ ನಾವು ಅಲ್ಪಸಂಖ್ಯಾತರಾಗಿರಲಿಲ್ಲ ಆದರೆ, ಈಗ ಅಲ್ಪ ಸಂಖ್ಯಾತರಾಗಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

Rahul Gandhi ಕುರಿತ ಹೇಳಿಕೆ: ಅಸ್ಸಾಂ ಸಿಎಂ ಸಮರ್ಥನೆ
ಇತ್ತೀಚೆಗೆ ವೀಕ್ಷಿಸಿದ ಕಾಶ್ಮೀರ ಫೈಲ್ಸ್ ಚಲನಚಿತ್ರದ ಬಗ್ಗೆ ಮಾತನಾಡಿದ ಅವರು ಅಸ್ಸಾಂನ ಜನರ ಪರಿಸ್ಥಿತಿಯೂ ಹೆಚ್ಚೂ ಕಡಿಮೆ ಕಾಶ್ಮೀರಿ ಹಿಂದೂಗಳ ಪರಿಸ್ಥಿತಿ ಆದಂತಾಗಿದೆ ಎಂದಿದ್ದಾರೆ. "ಕಾಶ್ಮೀರಿ ಪಂಡಿತರಂತೆಯೇ ಅಸ್ಸಾಮಿ ಜನರು ಅದೇ ಭವಿಷ್ಯವನ್ನು ಎದುರಿಸುತ್ತಾರೆಯೇ ಎಂದು ಜನರು ನನ್ನನ್ನು ಕೇಳುತ್ತಾರೆ. ಹತ್ತು ವರ್ಷಗಳ ಬಳಿಕ, ಅಸ್ಸಾಂ ಜನರ ಸ್ಥಿತಿ ಬಾಲಿವುಡ್ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್‌ನಲ್ಲಿ ತೋರಿಸಿರುವಂತೆ ಆಗುತ್ತದೆಯೇ? ಎಂದು ನನ್ನಲ್ಲಿ ಕೇಳಿದ್ದಾರೆ. "ನಮ್ಮ ಭಯವನ್ನು ಹೋಗಲಾಡಿಸುವುದು ಮುಸ್ಲಿಮರ ಕರ್ತವ್ಯ. ಮುಸ್ಲಿಮರು ಬಹುಸಂಖ್ಯಾತರಂತೆ ವರ್ತಿಸಬೇಕು ಮತ್ತು ಇಲ್ಲಿ ಕಾಶ್ಮೀರ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು" ಎಂದು ಮಾತನಾಡಿದ್ದಾರೆ.

Follow Us:
Download App:
  • android
  • ios