2041ಕ್ಕೆ ಅಸ್ಸಾಂ ಮುಸ್ಲಿಂ ರಾಜ್ಯವಾಗಲಿದೆ;: ಸಿಎಂ ಹಿಮಂತ ಬಿಸ್ವಾ ಶರ್ಮಾ ಕಳವಳ

Published : Jul 20, 2024, 04:49 AM ISTUpdated : Jul 22, 2024, 12:59 PM IST
2041ಕ್ಕೆ ಅಸ್ಸಾಂ ಮುಸ್ಲಿಂ ರಾಜ್ಯವಾಗಲಿದೆ;: ಸಿಎಂ ಹಿಮಂತ ಬಿಸ್ವಾ ಶರ್ಮಾ ಕಳವಳ

ಸಾರಾಂಶ

‘ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರತಿ 10 ವರ್ಷಗಳಿಗೊಮ್ಮೆ ಶೇ.30ರಷ್ಟು ಬೆಳೆಯುತ್ತಿದೆ. 2041ರ ವೇಳೆಗೆ ನಮ್ಮ ರಾಜ್ಯ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ’ ಎಂದು ಶುಕ್ರವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.

ಪಿಟಿಐ ಗುವಾಹಟಿ: (ಜು.20): ‘ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರತಿ 10 ವರ್ಷಗಳಿಗೊಮ್ಮೆ ಶೇ.30ರಷ್ಟು ಬೆಳೆಯುತ್ತಿದೆ. 2041ರ ವೇಳೆಗೆ ನಮ್ಮ ರಾಜ್ಯ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ’ ಎಂದು ಶುಕ್ರವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಜನಸಂಖ್ಯೆ 10 ವರ್ಷಕ್ಕೊಮ್ಮೆ ಕೇವಲ ಶೇ.16ರಷ್ಟು ಏರಿಕೆಯಾಗುತ್ತಿದೆ ಎಂದರು. ‘ಅಂಕಿಸಂಖ್ಯೆಗಳ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ಶೇ.40ರಷ್ಟು ಮುಸ್ಲಿಂ ಜನಸಂಖ್ಯೆಯಿದೆ. 2041ಕ್ಕೆ ಅಸ್ಸಾಂ ಬಹುತೇಕ ಮುಸ್ಲಿಂ ರಾಜ್ಯವಾಗಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬೇಸರಿಸಿದರು.

ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ತೀವ್ರ ಹೆಚ್ಚಳ: ಆರ್ಗನೈಸರ್ ನಿಯತಕಾಲಿಕ ವರದಿ

2011ರ ಜನಗಣತಿಯ ಪ್ರಕಾರ, ಅಸ್ಸಾಂ ಒಟ್ಟು 1.07 ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಒಟ್ಟು 3.12 ಕೋಟಿ ನಿವಾಸಿಗಳಲ್ಲಿ ಶೇ.34.22 ಪ್ರಮಾಣ ಹೊಂದಿದೆ. ರಾಜ್ಯದಲ್ಲಿ 1.92 ಕೋಟಿ ಹಿಂದೂಗಳಿದ್ದು, ಒಟ್ಟು ಜನಸಂಖ್ಯೆಯ ಶೇ.61.47ರಷ್ಟಿದೆ. ಈ ಬಗ್ಗೆ ಪ್ರಸ್ತಾಪಿಸಿದ ಶರ್ಮಾ, ‘ಪ್ರತಿ 10 ವರ್ಷಗಳಿಗೊಮ್ಮೆ, ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ 11 ಲಕ್ಷ ಏರಿಕೆಯಾಗುತ್ತಿದೆ. ಅಂದರೆ ಶೇ.30ರಷ್ಟು ಏರಿಕೆ ಆಗುತ್ತಿದೆ. 2041ರ ವೇಳೆಗೆ ಅಸ್ಸಾಂ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ. ಇದು ವಾಸ್ತವ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಪ್ರತಿ 10 ವರ್ಷಗಳಿಗೊಮ್ಮೆ ಹಿಂದೂ ಸಮುದಾಯದ ಜನಸಂಖ್ಯೆಯು(Hindu community population) ಸುಮಾರು 16 ಪ್ರತಿಶತದಷ್ಟು ಮಾತ್ರ ಏರುತ್ತಿದೆ. ಇದು ಹಿಮಂತ ಬಿಸ್ವ ಶರ್ಮಾHimanta Biswa Sharma( ಅವರ ಡೇಟಾ ಅಲ್ಲ, ಭಾರತೀಯ ಜನಗಣತಿಯ ಮಾಹಿತಿ’ ಎಂದು ಶರ್ಮಾ ಹೇಳಿದರು.

ಹೀಗೇ ಆದಲ್ಲಿ ಮುಂದೆ ಬಿಜೆಪಿ, ಟಿಎಂಸಿ, ಕಾಂಗ್ರೆಸ್, ಎಡರಂಗ ಯಾವ ರಾಜಕೀಯ ಪಕ್ಷ ಕೂಡ ಇರೋದಿಲ್ಲ!

ಹಿಂದಿನ ಸರ್ಕಾರಗಳು ಮುಸ್ಲಿಂ ಜನಸಂಖ್ಯೆ ನಿಯಂತ್ರಣ(Muslim population control)ಕ್ಕೆ ಕ್ರಮ ಕೈಗೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಅದರ ಏರಿಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..