ನನ್ನ ಜೀವನದಲ್ಲಿ ಸರ್‌ನೇಮ್ ಯಾವತ್ತೂ ನೆರವಾಗಿಲ್ಲ, ಬರಿ ಅವಮಾನವೇ ಎಂದ ಸಿದ್ಧಾರ್ಥ್ ಮಲ್ಯ!

Published : Jul 19, 2024, 10:27 PM IST
ನನ್ನ ಜೀವನದಲ್ಲಿ ಸರ್‌ನೇಮ್ ಯಾವತ್ತೂ ನೆರವಾಗಿಲ್ಲ, ಬರಿ ಅವಮಾನವೇ ಎಂದ ಸಿದ್ಧಾರ್ಥ್ ಮಲ್ಯ!

ಸಾರಾಂಶ

ಸಾವಿರಾರು ಕೋಟಿ ರೂ ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ತಮ್ಮ ಜೀವನದ ನೋವು, ಸಂಕಷ್ಟಗಳ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ. 

ಲಂಡನ್(ಜು.19) ಬ್ಯಾಂಕ್ ವಂಚನೆಯಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಭಾರತ ಸರ್ಕಾರ ಕಾನೂನು ಹೋರಾಟ ಮುಂದುವರಿಸಿದೆ. ಈಗಾಗಲೇ ಭಾರತದಲ್ಲಿರುವ ಬಹುತೇಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ತಂದೆ ವಿಜಯ್ ಮಲ್ಯ ವ್ಯವಹಾರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಪುತ್ರ ವಿಜಯ್ ಮಲ್ಯ. ಐಷಾರಾಮಿ ಜೀವನದಲ್ಲಿದ್ದ ಸಿದ್ಧಾರ್ಥ್ ಮಲ್ಯ ಏಕಾಏಕಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದ ಸಿದ್ಧಾರ್ಥ್ ಮಾನಸಿಕ ಖಿನ್ನತೆ ಜಾರಿದ್ದರು. ಇವೆಲ್ಲದರಿಂದ ಚೇತರಿಸಿಕೊಂಡು ಇತ್ತೀಚಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್ ಮಲ್ಯ ಇದೀಗ ತನ್ನ ಜೀವನದಲ್ಲಿ ಎದುರಿಸಿದ ಅಪಮಾನ, ನೋವು, ಸಂಕಷ್ಟಗಳ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ ಸಿದ್ದಾರ್ಥ್ ಮಲ್ಯ ಬರೆದರುವ WhosThat360 ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಎನ್‌ಡಿಟಿಎ ಮಾಧ್ಯಮದ ಜೊತೆ ಮಾತನಾಡಿದ ಸಿದ್ಧಾರ್ಥ್ ಮಲ್ಯ, ಜೀವನ ಹಲವು ಘಟನೆಗಳನ್ನು ನೆನೆಪಿಸಿದ್ದಾರೆ. ನಾನು ನಟನಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ. ಟಿವಿ ಸೀರಿಸ್ ಪರ್ಸುಯೇಶನ್, 2016ರಲ್ಲಿ ತೆರೆ ಕಂಡ ಬ್ರಾಹ್ಮನ್ ನಮನ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲ ವೆಬ್ ಸೀರಿಸ್‌ಗಳಲ್ಲಿ ಸಿದ್ಧಾರ್ಥ್ ಮಲ್ಯ ಕಾಣಿಸಿಕೊಂಡಿದ್ದಾರೆ. ಹಲವು ಬಾರಿ ಆಡಿಶನ್ ನೀಡಿದ್ದೇನೆ. ಆದರೆ ಎಲ್ಲೂ ಆಯ್ಕೆಯಾಗಿರಲ್ಲ. ನಾನೊಬ್ಬ ಕಳಪೆ ನಟ ಎಂದು ಪತ್ರಕರ್ತರು ಬರೆದಿದ್ದರು. 

ಬಹುಕಾಲದ ಗೆಳತಿ ಜಾಸ್ಮಿನ್ ಮದುವೆಯಾದ ಸಿದ್ಧಾರ್ಥ್ ಮಲ್ಯ, ಲಂಡನ್‌ನಲ್ಲಿ ಅದ್ಧೂರಿ ವಿವಾಹ!

ಎಲ್ಲರೂ ತೆರ ಮೇಲೆ ನೋಡುತ್ತಾರೆ. ತೆರೆ ಹಿಂದಿನ ಕಷ್ಟಗಳು ಯಾರಿಗೂ ತಿಳಿಯುವುದಿಲ್ಲ. ನನ್ನ ಮಲ್ಯ ಸರ್‌ನೇಮ್ ನನ್ನ ಜೀವನದಲ್ಲಿ ನೆರವಾಗಿಲ್ಲ. ಎಲ್ಲಾ ಕಡೆ ಅವಮಾನವೇ ಎದುರಿಸಬೇಕಾಯಿತು. ಆರಂಭದಲ್ಲಿ ಎಕಾನಮಿ ಪವರ್ ಎಂದು ಹೀಯಾಳಿಸಿದರೆ ಬಳಿಕ ಎದುರಿಸದ ಸಂಕಷ್ಟ ಬೇರೆ. ನಾನು ಎಲ್ಲೆ ಹೋದರು ಜನರು ಆತನಿಗೆ ಏನು? ಉದ್ಯಮಿ ಕುಟುಂಬ, ಆರ್ಥಿಕತೆ ಬಲ, ಮಲ್ಯ ಸರ್‌ನೇಮ್ ಈ ಕರಿತು ಟೀಕೆ ಮಾಡುತ್ತಿದ್ದರು. ಆದರೆ ನನಗೆ ಎಲ್ಲೂ ಸರ್‌ನೇಮ್ ನೆರವಾಗಿಲ್ಲ. ಬರಿ ಅಪಮಾನ, ಟೀಕೆಗಳನ್ನು ಎದುರಿಸಿಕೊಂಡು ಬಂದೆ ಎಂದು ಸಿದ್ದಾರ್ಥ್ ಮಲ್ಯ ಪರೋಕ್ಷವಾಗಿ ತಂದೆಯನ್ನು ತಿವಿದಿದ್ದಾರೆ.

ಹಲವು ಸವಾಲು ಎದುರಿಸಿದ್ದೇನೆ. ಇದೀಗ ನನ್ನ ಬದುಕು ಕಟ್ಟಿಕೊಂಡಿದ್ದೇನೆ. ನನ್ನ ಪ್ರಪಂಚವೇ ಬೇರೆ. ಆದರೆ ಈ ಜೀವನ ಕಟ್ಟಿಕೊಳ್ಳಲು ಪ್ರಯತ್ನದಲ್ಲಿ ಹಲವು ಏಳು ಬೀಳು ಕಂಡಿದ್ದೇನೆ ಎಂದಿದ್ದಾರೆ. ಸಿದ್ದಾರ್ಥ್ ಮಲ್ಯ ಇತ್ತೀಚೆಗೆ ತನ್ನ ಬಹುಕಾಲದ ಗೆಳತಿ ಜಾಸ್ಮಿನ್ ಮದುವೆಯಾಗಿದ್ದರು. ಲಂಡನ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ತಂದೆ ವಿಜಯ್ ಮಲ್ಯ ಕೂಡ ಕಾಣಿಸಿಕೊಂಡಿದ್ದರು. 

ಶುರುವಾದಷ್ಟೇ ಬೇಗ ಕೊನೆಯಾಯ್ತು ವಿಜಯ್ ಮಲ್ಯ ಸಮೀರಾ ತ್ಯಾಬ್ಜಿ ಪ್ರೇಮಕತೆ; ಅಷ್ಟರಲ್ಲಿ ಸಿದ್ಧಾರ್ಥ್ ಮಲ್ಯ ಹುಟ್ಟಾಗಿತ್ತು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು