1 ಕೋಟಿ ಚಂದಾದಾರರ ದಾಖಲೆ ಬರೆದ ಏಷ್ಯಾನೆಟ್ ನ್ಯೂಸ್‌ ಯೂಟ್ಯೂಬ್

Published : Oct 14, 2024, 02:18 PM IST
1 ಕೋಟಿ ಚಂದಾದಾರರ ದಾಖಲೆ ಬರೆದ ಏಷ್ಯಾನೆಟ್ ನ್ಯೂಸ್‌ ಯೂಟ್ಯೂಬ್

ಸಾರಾಂಶ

ಏಷ್ಯಾನೆಟ್ ನ್ಯೂಸ್ ಯೂಟ್ಯೂಬ್ ಚಾನೆಲ್ 10 ಮಿಲಿಯನ್ ಚಂದಾದಾರರನ್ನು ದಾಟಿದ ಮೊದಲ ಮಲಯಾಳಂ ಸುದ್ದಿ ಮಾಧ್ಯಮವಾಗಿದೆ. 2008 ರಲ್ಲಿ ಪ್ರಾರಂಭವಾದ ಈ ಚಾನೆಲ್ 10.2 ಬಿಲಿಯನ್ ವೀಕ್ಷಕರನ್ನು ಹೊಂದಿದೆ ಮತ್ತು ಡಿಜಿಟಲ್ ವೇದಿಕೆಗಳಲ್ಲಿಯೂ ಪ್ರಬಲವಾಗಿದೆ.

ತಿರುವನಂತಪುರಂ (ಅ.14): ಯೂಟ್ಯೂಬ್‌ನಲ್ಲಿ ಏಷ್ಯಾನೆಟ್ ನ್ಯೂಸ್ ಚಂದಾದಾರರ (ಸಬ್‌ಸ್ಕ್ರೈಬರ್) ಸಂಖ್ಯೆ 10 ಮಿಲಿಯನ್‌ಗೆ ಹೆಚ್ಚಳವಾಗಿದೆ. ಇದರೊಂದಿಗೆ ಏಷ್ಯಾನೆಟ್ ನ್ಯೂಸ್ 1 ಕೋಟಿ ಯೂಟ್ಯೂಬ್ ಚಂದಾದಾರರ ಮೈಲಿಗಲ್ಲನ್ನು ದಾಟಿದ ಮೊದಲ ಮಲಯಾಳಂ ಸುದ್ದಿ ಮಾಧ್ಯಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಷ್ಯಾನೆಟ್ ನ್ಯೂಸ್ ಯೂಟ್ಯೂಬ್ ಚಾನೆಲ್ ಪ್ರಸ್ತುತವಾಗಿ 10.2 ಬಿಲಿಯನ್ ವೀಕ್ಷಕರನ್ನು ಹೊಂದಿದೆ.

ಏಷ್ಯಾನೆಟ್ ನ್ಯೂಸ್ ಯೂಟ್ಯೂಬ್ ಚಾನೆಲ್ ಅನ್ನು ಸೆಪ್ಟೆಂಬರ್ 2008ರಲ್ಲಿ ಪ್ರಾರಂಭಿಸಲಾಯಿತು. ಫೆಬ್ರವರಿ 2018ರಲ್ಲಿ, 10 ಲಕ್ಷ ಚಂದಾದಾರರ ಮೈಲಿಗಲ್ಲನ್ನು ಸಾಧಿಸಲಾಯಿತು. ಇದು ಫೆಬ್ರವರಿ 2019ರಲ್ಲಿ 25 ಲಕ್ಷ ಚಂದಾದಾರರ ಮೈಲಿಗಲ್ಲನ್ನು ದಾಟಿದೆ. ಏಷ್ಯಾನೆಟ್ ನ್ಯೂಸ್ ಏಪ್ರಿಲ್ 2020ರಲ್ಲಿ 40 ಲಕ್ಷ ಯೂಟ್ಯೂಬ್ ಚಂದಾದಾರರನ್ನು ತನ್ನದಾಗಿಸಿಕೊಂಡಿದೆ. ಜನವರಿ 2021 ರಲ್ಲಿ 50 ಲಕ್ಷದ ಮೈಲಿಗಲ್ಲನ್ನು ದಾಟಿದೆ. ಅಲ್ಲಿಂದ ಮೂರು ವರ್ಷಗಳಲ್ಲಿ 90 ಲಕ್ಷದ ಚಂದಾದಾರರನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಕೆಲವೇ ವರ್ಷಗಳಲ್ಲಿ ಏಷ್ಯಾನೆಟ್ ನ್ಯೂಸ್ ಒಂದು ಕೋಟಿ ವೀಕ್ಷಕರ ನೆಚ್ಚಿನ ವೀಕ್ಷಣಾ ವೇದಿಕೆಯಾಗಿ ಇತಿಹಾಸ ನಿರ್ಮಿಸಿದೆ.

ಹಲವು ವರ್ಷಗಳಿಂದ ರೇಟಿಂಗ್‌ನಲ್ಲಿ ಇತರ ಸುದ್ದಿ ವಾಹಿನಿಗಳಿಗಿಂತ ಬಹಳ ಮುಂದಿರುವ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಕ್ಷೇತ್ರದಲ್ಲೂ ಯಾವಾಗಲೂ ಮುಂದಿದೆ. ಬೆರಳ ತುದಿಯಲ್ಲಿ ಸುದ್ದಿ ಸಿಗುವ ಡಿಜಿಟಲ್ ಜಗತ್ತಿನಲ್ಲಿ ಮಲಯಾಳಿ ಭಾಷಿಕರು ಫೇಸ್ ಬುಕ್ ನಲ್ಲೂ ಏಷ್ಯಾನೆಟ್ ನ್ಯೂಸ್ ಎಂದು ಹುಡುಕುತ್ತಾರೆ. ಫೇಸ್‌ಬುಕ್‌ನಲ್ಲಿ ಏಷ್ಯಾನೆಟ್ ನ್ಯೂಸ್ ಅನ್ನು 6 ಮಿಲಿಯನ್ ಮಲಯಾಳಿ ಭಾಷಿಕರು ಫಾಲೋ ಮಾಡುತ್ತಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಏಷ್ಯಾನೆಟ್ ನ್ಯೂಸ್ ಕೂಡ ಬಹಳ ಮುಂದಿದೆ. ಹೊಸ ಪೀಳಿಗೆಯ ನೆಚ್ಚಿನ ಡಿಜಿಟಲ್ ಸ್ಥಳವಾದ Instagram, 1.1 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ