ಏಷ್ಯಾದ ಅತೀ ದೊಡ್ಡ ಏರ್ ಶೋ ಏರೋ ಇಂಡಿಯಾ ಬೆಂಗಳೂರಿನಲ್ಲಿ ಆಯೋಜನೆ, ದಿನಾಂಕ ಪ್ರಕಟಿಸಿದ ಕೇಂದ್ರ

Published : Jul 11, 2026, 05:01 PM IST
Aero India 2023

ಸಾರಾಂಶ

ಏಷ್ಯಾದ ಅತೀ ದೊಡ್ಡ ಏರ್ ಶೋ ಆಗಿ ಹೊರಹೊಮ್ಮಿರುವ ಏರೋ ಇಂಡಿಯಾ ಈ ಬಾರಿಯೂ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಇದೀಗ ಕೇಂದ್ರ ರಕ್ಷಣಾ ಇಲಾಖೆ ಏರೋ ಇಂಡಿಯಾ ಆಯೋಜನೆ ದಿನಾಂಕ ಘೋಷಿಸಿದೆ.

ದೆಹಲಿ (ಜು.11) ಬೆಂಗಳೂರಿನ ಹೆಮ್ಮೆಯಾಗಿ ಗುರುತಿಸಿಕೊಂಡಿರುವ ಏರೋ ಇಂಡಿಯಾ ಶೋ ಮತ್ತೆ ಬೆಂಗಳೂರಿನಲ್ಲೇ ಆಯೋಜನೆಗೊಳ್ಳುತ್ತಿದೆ. ಕೇಂದ್ರ ರಕ್ಷಣಾ ಇಲಾಖೆ ಈ ಕುರಿತು ಮಹತ್ವದ ಘೋಷಣೆ ಮಾಡಿದೆ. ಏರೋ ಇಂಡಿಯಾ 2027 ಆಯೋಜನೆ ದಿನಾಂಕವನ್ನು ಘೋಷಿಸಿದೆ. ಬೆಂಗಳೂರಿನ ಯಲಂಹಕಾದ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ಆಯೋಜನೆಗೊಳ್ಳುತ್ತಿದೆ. 2027ರ ಏರೋ ಇಂಡಿಯಾ ಶೋ ಫೆಬ್ರವರಿ 8 ರಿಂದ 12ರ ವರೆಗೆ ನಡೆಯಲಿದೆ.

ಸ್ಥಳಾಂತರ ಇಲ್ಲ, ಬೆಂಗಳೂರಲ್ಲೇ ಆಯೋಜನೆ

16ನೇ ಆವೃತ್ತಿ ಏರೋ ಇಂಡಿಯಾ ಬೆಂಗಳೂರಿನ ಯಲಂಹಕಾ ವಾಯುನೆಲೆಯಲ್ಲಿ ಆಯೋಜನೆಗೊಳ್ಳಲಿದೆ. ವಾಯುನೆಲೆಯ ಏರೋ ಇಂಡಿಯಾದ ಪ್ರದರ್ಶನ ನಡೆಯುವ ಹಾಗೂ ಇತರ ಕೆಲ ಪ್ರದೇಶಗಳು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ವಿವಾದಗಳು ಇತ್ತೀಚೆಗೆ ಭುಗಿಲೆದ್ದಿತ್ತು. ಹೀಗಾಗಿ ಈ ಬಾರಿ ಏರೋ ಇಂಡಿಯಾ ಶೋ ಬೇರೆ ವಾಯನೆಲೆಯಲ್ಲಿ ನಡೆಸುವ ಕುರಿತು ಮಾತುಗಳು ಕೇಳಿಬಂದಿತ್ತು. ಕೊನೆಗೆ ರಕ್ಷಣಾ ಇಲಾಖೆ ಬೆಂಗಳೂರಿನಲ್ಲೇ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಿರುವ ಏರೋ ಇಂಡಿಯಾ ಶೋವನ್ನು ಸ್ಥಳಾಂತರ ಮಾಡದೆ ಬೆಂಗಳೂರಿನಲ್ಲೇ ಆಯೋಜಿಸಲಾಗುತ್ತಿದೆ.

2027ರ ಏರೋ ಇಂಡಿಯಾ ಶೋಗಾಗಿ ಈಗಾಗಲೇ HAL ಹಾಗೂ BEL ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಹಲವು ದೇಶಗಳು ಭಾರತದ ಏರೋ ಇಂಡಿಯಾ ಶೋನಲ್ಲಿ ಪಾಲ್ಗೊಳ್ಳುತ್ತದೆ. ಮಹತ್ವದ ಒಪ್ಪಂದ, ಹೂಡಿಕೆ ಸೇರಿದಂತೆ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗುವ ಈ ಏರ್ ಶೋ ಏಷ್ಯಾದಲ್ಲೇ ಅತೀ ದೊಡ್ಡ ಹಾಗೂ ಪ್ರತಿಷ್ಠಿತ ಶೋ ಆಗಿ ಮಾರ್ಪಟ್ಟಿದೆ.

1996ರಲ್ಲಿ ಮೊದಲ ಆವೃತ್ತಿಯ ಏರೋ ಇಂಡಿಯಾ ಶೋ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಆರಂಭಗೊಂಡ ಈ ಏರ್ ಶೋ ಬಳಿಕ ಸ್ಥಳಾಂತರಗೊಂಡಿಲ್ಲ. ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಆಯೋಜನೆ ಮಾಡಲು ಕೇಂದ್ರ ಸರ್ಕಾರ ಚರ್ಚಿಸಿತ್ತು. ಆದರೆ ಹಲವು ಕಾರಣಗಳಿಂದ ಬೆಂಗಳೂರು ಪ್ರತಿ ಬಾರಿ ಅತ್ಯಂತ ಯಶಸ್ವಿಯಾಗಿ ಏರ್ ಶೋ ಆಯೋಜಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

16ನೇ ವಯಸ್ಸಿಗೆ ಎಲ್ಲರ ಮನವೊಲಿಸಿ ಶಾಲೆ ಬಿಟ್ಟ ಬಾಲಕಿ, ಇಂದು 7 ಸಾವಿರ ರೂ.ಕೋಟಿ ಒಡತಿ
ಮತ್ತೆ ಓಡಿಹೋದ ಮಳೆರಾಯ.. ದೇಶಕ್ಕೆ ಎದುರಾಗುವ ಕೆಟ್ಟ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ಕೊಟ್ಟ ಸ್ಯಾಟಲೈಟ್..!