ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು

Published : Jul 11, 2026, 07:45 AM IST
Bengaluru

ಸಾರಾಂಶ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ತೀವ್ರ ಬಿಸಿಲಿನ ಅಪಾಯದಲ್ಲಿರುವ ವಿಶ್ವದ ಅಗ್ರ 50 ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳಿವೆ. ಈ ಅಪಾಯಕಾರಿ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ಕೂಡಾ ಸ್ಥಾನ ಪಡೆದಿದ್ದು, ಇದು ಹವಾಮಾನ ಬದಲಾವಣೆಯ ಗಂಭೀರ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ.

ನವದೆಹಲಿ: ಭಾರತವು ಅತಿ ಹೆಚ್ಚು ಬಿಸಿಲಿನ ಅಪಾಯದಲ್ಲಿರುವ ನಗರಗಳನ್ನು ಹೊಂದಿರುವ 4 ದೇಶಗಳಲ್ಲಿ ಒಂದಾಗಿದೆ. ಭಾರತದ 14 ನಗರಗಳು ಅತಿ ಅಪಾಯದ ಅಗ್ರ 50ರ ಪಟ್ಟಿಯಲ್ಲಿದ್ದು, ಕರ್ನಾಟಕದ ಬೆಂಗಳೂರು ಕೂಡಾ ಸ್ಥಾನ ಪಡೆದಿದೆ ಎಂದು ಆಕ್ಸ್‌ಫರ್ಡ್ ವಿವಿಯ ಅಧ್ಯಯನವೊಂದು ತಿಳಿಸಿದೆ.

ವಿಶ್ವದ 205 ಅತಿ ದೊಡ್ಡ ನಗರಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ ಮತ್ತು ಘಾನಾ ಈ 4 ದೇಶಗಳು ತೀವ್ರ ಬಿಸಿಲಿನ ಅಪಾಯಕ್ಕೆ ಒಳಗಾಗಿರುವ ಅತಿ ಹೆಚ್ಚು ನಗರಗಳನ್ನು ಹೊಂದಿವೆ ಎಂದು ವರದಿ ತಿಳಿಸಿದೆ.

ಅಪಾಯದ ಪಟ್ಟಿಯಲ್ಲಿ ಬೆಂಗಳೂರು

ಅತಿ ಹೆಚ್ಚು ಅಪಾಯದಲ್ಲಿರುವ ನಗರಗಳಲ್ಲಿ ಶೇ.95ಕ್ಕಿಂತ ಹೆಚ್ಚು ನಗರಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹಾಗೂ ಉಪ-ಸಹಾರಾ ಆಫ್ರಿಕಾ ಪ್ರದೇಶಗಳಲ್ಲಿವೆ. ಇರಾಕ್‌ನ ಅಲ್ ಬಸ್ರಾ ನಗರ ವಿಶ್ವದ ಅತ್ಯಂತ ಅಪಾಯದಲ್ಲಿರುವ ನಗರವಾಗಿ ದಾಖಲಾಗಿದೆ. ಇದರ ನಂತರ ಗುಜರಾತ್‌ನ ಅಹಮದಾಬಾದ್ 2ನೇ ಸ್ಥಾನದಲ್ಲಿದೆ. ಭಾರತದ 14 ನಗರಗಳು ಅತಿ ಅಪಾಯದ ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇವುಗಳಲ್ಲಿ ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ನಾಗ್ಪುರ ಮತ್ತು ಪುಣೆ, ತಮಿಳುನಾಡಿನ ಮದುರೈ ಮತ್ತು ಚೆನ್ನೈ, ಉತ್ತರ ಪ್ರದೇಶದ ಕಾನ್ಪುರ ಮತ್ತು ಲಖನೌ, ಜೈಪುರ ಸೇರಿದಂತೆ ಹಲವು ನಗರಗಳಿವೆ.

ಜೈಪುರ, ಕೈರೋ, ಬ್ಯಾಂಕಾಕ್, ಹನಾಯ್‌ನಂತಹ ಪ್ರವಾಸಿ ಮತ್ತು ವ್ಯಾಪಾರ ಕೇಂದ್ರಗಳೂ ಅಪಾಯದ ಪಟ್ಟಿಯಲ್ಲಿವೆ. ಏರ್ ಕಂಡಿಷನರ್‌ಗಳ ಮೇಲಿನ ಅತಿಯಾದ ಅವಲಂಬನೆಯು ಇನ್ನಷ್ಟು ಜಾಗತಿಕ ತಾಪಮಾನಕ್ಕೆ ಕಾರಣವಾಗಬಹುದು. ಪ್ಯಾಸಿವ್ ಕೂಲಿಂಗ್, ಫ್ಯಾನ್‌ಗಳು ಮತ್ತು ಕಡಿಮೆ ಶಕ್ತಿಯ ತಂತ್ರಜ್ಞಾನಗಳನ್ನು ಹೆಚ್ಚು ಬಳಸುವುದು ಸೂಕ್ತ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ: ಕೇಂದ್ರ
India Latest News Live: ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು