ಜಿ20 ಆರಂಭಕ್ಕೂ ಮುನ್ನ ಮೋದಿ ಜಕರ್ತಾ ಪ್ರಯಾಣ, ಇಲ್ಲಿದೆ ಬಿಡುವಿಲ್ಲದ 3 ದಿನದ ವೇಳಾಪಟ್ಟಿ!

By Suvarna News  |  First Published Sep 6, 2023, 7:00 PM IST

ಜಿ20 ಶೃಂಗಸಭೆಗೆ ಭಾರತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಸೆ.9 ಹಾಗೂ 10ಕ್ಕೆ ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಗಣ್ಯರು ಆಗಮಿಸುತ್ತಿದ್ದಾರೆ. ಆದರೆ ಪ್ರದಾನಿ ನರೇಂದ್ರ ಮೋದಿ ಶೃಂಗಸಭೆ ಆರಂಭಕ್ಕೂ ಮುನ್ನ ಜಕರ್ತಾ ಪ್ರಯಾಣ ಮಾಡಲಿದ್ದಾರೆ. ಪ್ರಧಾನಿ ಮೋದಿ 3 ದಿನದ ಬಿಡುವಿಲ್ಲದ ವೇಳಾಪಟ್ಟಿ ಇಲ್ಲಿದೆ.


ನವದೆಹಲಿ(ಸೆ.06) ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿರುವ ಭಾರತ ಇದೀಗ ದೆಹಲಿಯಲ್ಲಿ ಮಹತ್ವದ ಸಭೆ ಆಯೋಜಿಸಿದೆ. ಬಹುತೇಕ ದೇಶದ ಗಣ್ಯರು ದೆಹಲಿಗೆ ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್ 9 ಹಾಗೂ 10 ರಂದು ರಾಜಧಾನಿಯಲ್ಲಿ ಶೃಂಗಸಭೆ ನಡೆಯಲಿದೆ. ಈ ಸಭೆಗೂ ಮುನ್ನ ಪ್ರಧಾನಿ ಮೋದಿಯ ಏಷ್ಯಾ ಶೃಂಗಸಭೆಗಾಗಿ ಜಕರ್ತಾ ಪ್ರಯಾಣ ಬೆಳೆಸಲಿದ್ದಾರೆ. ಪ್ರಧಾನಿ ಮೋದಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಂದು ಪ್ರಧಾನಿ ಮೋದಿ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ. ಜಿ20 ಶೃಂಗಸಭೆ ಯಶಸ್ವಿಗೊಳಿಸುವ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಸಚವರಿಗೆ ನೀಡಲಾಗಿದೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಜಕರ್ತಾಗೆ ಪ್ರಯಾಣ ಮಾಡಲಿದ್ದಾರೆ. ಇದಕ್ಕೂ ಮೊದಲು ಹಲವು ಸುತ್ತಿನ ಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದಾರೆ.  ಸೆಪ್ಟೆಂಬರ್ 7 ರ ಬೆಳಗ್ಗೆ  ಜಕರ್ತಾ ತಲುಪಲಿದ್ದಾರೆ. 7 ಗಂಟೆಗಳ ವಿಮಾನ ಪ್ರಯಾಣದ ಬಳಿಕ ಪ್ರಧಾನಿ ಮೋದಿ ಜಕರ್ತಾ ತಲುಪಲಿದ್ದಾರೆ.

Tap to resize

Latest Videos

ಆರ್‌ಟಿಐ ಮಾಹಿತಿ, ಕಳೆದ 9 ವರ್ಷಗಳಿಂದ ಒಂದೇ ಒಂದು ರಜೆ ತೆಗೆದುಕೊಳ್ಳದ ಪ್ರಧಾನಿ ನರೇಂದ್ರ ಮೋದಿ!
 
ಸೆಪ್ಟೆಂಬರ್ 7 ರ ಬೆಳಗ್ಗೆ ಏಷ್ಯನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 8.45ಕ್ಕೆ ಏಷ್ಯನ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 7ರ ಸಂಜೆ ವರೆಗೆ ಶೃಂಗಸಭೆಯಲ್ಲಿದ್ದು ಸಂಜೆ 6.45ಕ್ಕೆ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ರಧಾನಿ ಮೋದಿ  3 ದೇಶದ ಪ್ರಮುಖ ನಾಯಕರ ದೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಅಮೆರಿಕ ಅಧ್ಯಶ್ರ ಜೋ ಬೈಡೆನ್ ಜೊತೆಗಿನ ಸಭೆಯೂ ಸೇರಿದೆ.  

ಸೆಪ್ಟೆಂಬರ್ 9 ಹಾಗೂ 10 ರಂದು ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಎರಡು ದಿನ ಹಲವು ಮಹತ್ವದ ಸಭೆಗಳನ್ನು ಮೋದಿ ನಡೆಸಲಿದ್ದಾರೆ.  ಪ್ರಧಾನಿಯಾದ ಬಳಿಕ ಮೋದಿ ಒಂದೇ ಒಂದು ರಜೆ ಪಡೆದಿಲ್ಲ ಅನ್ನೋದು ಇತ್ತೀಚೆಗೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಬಿಡುವಿಲ್ಲದೆ ಸತತ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳುವ ಮೂಲಕ ಮತ್ತೆ ಎಲ್ಲರ ಹುಬ್ಬೇರಿಸಿದ್ದಾರೆ.

G20 ಶೃಂಗಸಭೆಗೆ ಹೈಟೆಕ್‌ ಭದ್ರತೆ: ಗಣ್ಯರಿಗೆ ಬುಲೆಟ್‌ಪ್ರೂಫ್ ಲಿಮೋಸಿನ್‌ ಕಾರು, ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನ ಅಳವಡಿಕೆ

ಇನ್ನು ಸೆ.9 ಮತ್ತು 10ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಗವಹಿಸುತ್ತಿಲ್ಲ.  ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚೀನಾ ವಿದೇಶಾಂಗ ಸಚಿವಾಲಯವು ‘ಭಾರತ ಸರ್ಕಾರದ ಆಹ್ವಾನದ ಮೇರೆಗೆ 18ನೇ ಜಿ20 ಶೃಂಗಸಭೆಯಲ್ಲಿ ಚೀನಾದ ಕಾನೂನು ಸಲಹೆಗಾರ ಲಿ ಖಿಯಾಂಗ್‌ ಅವರು ಭಾಗವಹಿಸಲಿದ್ದಾರೆ. ಜಿ20ಯು ದೇಶಗಳ ಆರ್ಥಿಕ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಿದ್ದು ಅದಕ್ಕೆ ಚೀನಾದ ಸಹಕಾರ ಇರುತ್ತದೆ’ ಎಂದಿದೆ. ರಷ್ಯಾ ಅಧ್ಯಕ್ಷ ಪುಟಿನ್‌ ಕೂಡ ಜಿ20 ಶೃಂಗಕ್ಕೆ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

click me!