
ನವದೆಹಲಿ[ನ.16]: ತೀವ್ರ ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ದಿಲ್ಲಿಯಲ್ಲಿ ಶುದ್ಧಗಾಳಿ ಸಿಗುವುದೇ ಅಪರೂಪವಾಗಿಬಿಟ್ಟಿದೆ. ಅದಕ್ಕೆಂದೇ ಈಗ ‘ಆಕ್ಸಿಜನ್ ಬಾರ್’ಗಳು (ಆಮ್ಲಜನಕ ಸೇವಿಸುವ ಘಟಕ) ತಲೆಯೆತ್ತಿವೆ! ಅಚ್ಚರಿ ಎನ್ನಿಸಿದರೂ ಇದು ನಿಜ. ‘ಆಕ್ಸಿ ಪ್ಯೂರ್’ ಎಂಬ ಆಮ್ಲಜನಕ ಬಾರ್ ದಿಲ್ಲಿಯ ಸಾಕೇತ್ ಪ್ರದೇಶದಲ್ಲಿ ಕಳೆದ ಮೇನಲ್ಲೇ ಕಾರ್ಯಾರಂಭ ಮಾಡಿದೆ. ಆರ್ಯವೀರ ಕುಮಾರ್ ಎಂಬುವರು ಇದರ ಸ್ಥಾಪಕರು.
ವಾಯುಮಾಲಿನ್ಯ: ರಾಷ್ಟ್ರ ರಾಜಧಾನಿ ದೆಹಲಿ ವಿಶ್ವಕ್ಕೆ ನಂ. 1!
299 ರುಪಾಯಿ ಶುಲ್ಕ ಕೊಟ್ಟು ಇಲ್ಲಿ ಆಮ್ಲಜನಕ ಪೈಪನ್ನು ಮೂಗಿಗೆ ಹಾಕಿಕೊಂಡು 15 ನಿಮಿಷ ಆಕ್ಸಿಜನ್ ಸೇವಿಸಬಹುದು. 7 ವಿವಿಧ ಸುಗಂಧಗಳಲ್ಲಿ ಆಮ್ಲಜನಕ ಲಭ್ಯವಿದೆ. ಪುದಿನಾ, ಪೆಪ್ಪರ್‌ಮಿಂಟ್, ಲವಂಗ, ಕಿತ್ತಳೆ, ನಿಂಬೆ, ನೀಲಗಿರಿ ಹಾಗೂ ಲ್ಯಾವೆಂಡರ್- ಸುಗಂಧವುಳ್ಳ ಆಕ್ಸಿಜನ್ ಇಲ್ಲಿ ಲಭ್ಯ. ಗ್ರಾಹಕರು ತಮಗಿಷ್ಟವಾದ ಸುಗಂಧ ಆಯ್ಕೆ ಮಾಡಿಕೊಂಡು ಆ ಸುಗಂಧಭರಿತ ಆಮ್ಲಜನಕ ಸೇವಿಸಬಹುದು. ಒಬ್ಬ ವ್ಯಕ್ತಿಗೆ ದಿನಕ್ಕೆ ಒಂದು ಸಲ ಮಾತ್ರ ಆಮ್ಲಜನಕ ಸೇವನೆಗೆ ಅವಕಾಶ ನೀಡಲಾಗುತ್ತದೆ.
ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!
ಈ ಶುದ್ಧ ಆಮ್ಲಜನಕ ಸೇವನೆಯಿಂದ ಕೆಟ್ಟಹವೆಯಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಸಮಾಧಾನವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಲೆನೋವು ಸೇರಿದಂತೆ ವಾಯುಮಾಲಿನ್ಯದಿಂದ ಉಂಟಾಗುವ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಇದರಿಂದ ಸಾಧ್ಯ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. ಅಂದಹಾಗೆ ದಿಲ್ಲಿ ವಿಮಾನ ನಿಲ್ದಾಣ ಸಮೀಪ ದಿಲ್ಲಿಯ 2ನೇ ಆಮ್ಲಜನಕ ಬಾರ್ ಡಿಸೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ