ನವದೆಹಲಿ(ಆ.12): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ಬಿಜೆಪಿ ನಡುವಿನ ಸಮರ ಮುಂದುವರಿದಿದೆ. ಆದರೆ ಈ ಬಾರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರೋಧಿಸಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಸಾಲ ಮನ್ನಾ, ಉಚಿತ ಭಾಗ್ಯಗಳ ಕುರಿತು ಬಿಜೆಪಿ ಟೀಕೆಗೆ ತಿರುಗೇಟು ನೀಡಲು ಹೋಗಿ ತಾವೇ ಗುಂಡಿಗೆ ಬಿದ್ದಿದ್ದಾರೆ. ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಆಪ್ ಹಾಗೂ ಕೇಜ್ರಿವಾಲ್ ಹುಳುಕುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಉಚಿತ ಭಾಗ್ಯಗಳಿಂದ ಸಾಮಾನ್ಯ ಜನ ಸಾಲಗಾರರಾಗಿ ಹೊರಹೊಮ್ಮುತ್ತಾನೆ. ಜನರನ್ನು ಸಾಲದ ಸುಳಿಯಲ್ಲಿ ಮುಳುಗಿಸುವ ಯೋಜನೆಗಳಿಂದ ಜನರಿಗಾಗಲಿ, ಸರ್ಕಾರಕ್ಕಾಗಿ, ದೇಶಕ್ಕಾಗಿ ಒಳಿತಾಗಲ್ಲ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಅದರಲ್ಲೂ ಆರ್‌ಬಿಐ ಸಾಲ, ಮರುಪಾವತಿ ವಸೂಲಿಯನ್ನೇ ತಪ್ಪಾಗಿ ಅರ್ಥೈಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ರಾಹುಲ್ ಗಾಂಧಿ ಅರ್ಥಶಾಸ್ತ್ರದ ಪಾಂಡಿತ್ಯ ಪ್ರದರ್ಶಿಸಿ ವಿಫಲರಾಗಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಆರ್‌ಸಿಬಿ ಹೇಳಿರುವ ಉಚಿತವಲ್ಲದ ಸಾಲದ ವಿಧಾನವನ್ನು ಕೇಜ್ರಿವಾಲ್ ತಪ್ಪಾಗಿ ಅರ್ಥೈಸಿದ್ದಾರೆ. ಇದನ್ನೇ ಜನರಿಗೂ ಹೇಳುತ್ತಿದ್ದಾರೆ. ಸಾಲ ಮನ್ನಾ ವಿಚಾರದಲ್ಲೂ ಅರವಿಂದ್ ಕೇಜ್ರಿವಾಲ್ ತಮ್ಮ ಅಲ್ಪ ಜ್ಞಾನವನ್ನು ಜನರ ಮುಂದೆ ಪ್ರದರ್ಶಿಸಿ ಇಕಟ್ಟಿಗೆ ಸಿಲುಕಿದ್ದಾರೆ. ಬ್ಯಾಡ್ ಲೋನ್ ಕುರಿತು ಆರ್‌ಬಿಐ ಕಡ್ಡಾಯ ನಿಯಮ ಕೇಜ್ರಿವಾಲ್‌ಗೆ ಇನ್ನೂ ತಿಳಿದಿಲ್ಲ ಎಂದಿದ್ದಾರೆ.
ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!
ಅರವಿಂದ್ ಕೇಜ್ರಿವಾಲ್ ಹೇಳುತ್ತಿರುವ ಸುಳ್ಳುಗಳು, ಪೊಳ್ಳು ಆರೋಪಗಳು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೆರವಿನಿಂದ ದೆಹಲಿ ನಡೆಯುತ್ತಿದೆ ಅನ್ನೋದನ್ನು ಸಿಎಜಿ ವರದಿಯಲ್ಲಿ ದೆಹಲಿ ಸರ್ಕಾರ ಒಪ್ಪಿಕೊಂಡಿದೆ. ದೆಹಲಿಯಂದ ಬರುತ್ತಿರುವ ಆದಾಯವೆಲ್ಲಾ ತಮ್ಮ ರಾಜಕೀಯ ಬೇಳೆ ಬೆೇಯಿಸಿಕೊಳ್ಳಲು ಉಚಿತ ಭಾಗ್ಯಗಳನ್ನು, ಸಾಲ ಮನ್ನಾಗಳನ್ನು ಮಾಡಿ ಪೋಲು ಮಾಡುತ್ತಿದೆ ಅನ್ನೋದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಕೇಂದ್ರ ಸರ್ಕಾರ ಆರ್ಥಿಕ ನೆರವು ನಿಲ್ಲಿಸಿದರೆ, ದೆಹಲಿ ಸರ್ಕಾರದ ಬಳಿಕ ಪಡಿತರ ನೀಡಲು, ಜನರಿಗೆ ಮೂಲ ಸೌಕರ್ಯ ಒದಗಿಸಲು ಹಣವಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ದೆಹಲಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. ಭ್ರಷ್ಟಾಚಾರ ಸೇರಿದಂತೆ ಹಗರಣಗಳಲ್ಲಿ ಸಿಲುಕಿರುವ ಆಮ್ ಆದ್ಮಿ ಸರ್ಕಾರ ಇದೀಗ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ