ನೂಪುರ್ ಶರ್ಮಾ ಹತ್ಯೆಗೆ ಆಗಮಿಸಿದ ಪಾಕ್ ಭಯೋತ್ಪಾದನಾ ಸಂಘಟನೆ ಉಗ್ರನ ಬಂಧಿಸಿದ ATS!

By Suvarna News  |  First Published Aug 12, 2022, 8:33 PM IST

ಬಿಜೆಪಿ ವಿವಾದಿತ ನಾಯಕಿ ನೂಪುರ್ ಶರ್ಮಾ ಹತ್ಯೆ ಜವಾಬ್ದಾರಿ ಹೊತ್ತ ಉಗ್ರನ ಭಯೋತ್ಪದನಾ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಈತ ಪಾಕಿಸ್ತಾನದ ಜೈಶ್ ಇ ಮೊಹಮ್ಮದ್ ಹಾಗೂ ತೆಹ್ರಿಕ್ ಇ ತಾಲಿಬಾನ್ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಈತ ಬಂಧನದಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
 


ಲಖನೌ(ಆ.12):  ಬಿಜೆಪಿ ವಿವಾದಿತ ನಾಯಕಿ ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಅನ್ನೋ ವಿವಾದ ದೇಶದಲ್ಲಿ ಹಲವು ಹತ್ಯೆಗೆ ಕಾರಣವಾಗಿದೆ. ಪ್ರತಿಭಟನೆ, ದಂಗೆಯಿಂದ ದೇಶವೇ ಹೊತ್ತಿ ಉರಿದಿದೆ. ಮೇಲ್ನೋಟಕ್ಕೆ ಪರಿಸ್ಥಿತಿ ತಣ್ಣಗಾಗಿದ್ದರೂ, ಒಳಗೊಳಗೆ ರಕ್ತ ಕುದಿಯುವ ಪರಿಸ್ಥಿತಿ ಇದೆ. ಇದೀಗ ನೂಪರ್ ಶರ್ಮಾ ಹತ್ಯೆ ಜವಾಬ್ದಾರಿ ಹೊತ್ತುಕೊಂಡು ಕಾರ್ಯಾಚರಣೆ ಆರಂಭಿಸಿದ್ದ ಪಾಕಿಸ್ತಾನ ಉಗ್ರ ಸಂಘಟನಗಳ ಸಂಪರ್ಕಿತ ಉಗ್ರ ಮೊಹಮ್ಮದ್ ನದೀಮ್‌ನನ್ನು ಉತ್ತರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಜೈಶ್ ಇ ಮೊಹಮ್ಮದ್ ಹಾಗೂ ತೆಹ್ರಿಕ್ ಇ ತಾಲಿಬಾನ್ ಉಗ್ರ ಸಂಘಟನೆಗಳು ಮೊಹಮ್ಮದ್ ನದೀಮ್‌ಗೆ ಮಹತ್ವದ ಜವಾಬ್ದಾರಿ ನೀಡಿತ್ತು. ನೂಪುರ್ ಶರ್ಮಾ ಹತ್ಯೆ ಮಾಡುವಂತೆ ಹೇಳಿತ್ತು. ಇದರಂತೆ ಈ ಸಂಘಟನೆಗಳಿಂದ ಹಣ ಪಡೆದಿರುವ ಮೊಹಮ್ಮದ್ ನದೀಮ್ ನೂಪರ್ ಹತ್ಯೆಗೆ ಸಂಚು ರೂಪಿಸಿದ್ದ. ಈ ಕುರಿತು ಮಾಹಿತಿ ಪಡೆದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಮೊಹಮ್ಮದ್ ನದೀಮ್ ಬಂಧಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ನೂಪುರ್ ಶರ್ಮಾ ಹತ್ಯೆ ಮಾಡಲು ಮೊಹಮ್ಮದ್ ನದೀಮ್ ಸಂಚು ರೂಪಿಸಿದ್ದ. ಅಜಮಘಡದಲ್ಲಿ ಇಸ್ಲಾಮಿಕ್ ಸ್ಟೇಟ್ ಕಾರ್ಯಾಚರಣೆಗಳು ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಆರ್‌ಎಸ್ಎಸ್ ನಾಯಕರು, ಬಿಜೆಪಿ ಮುಖಂಡರ ಹತ್ಯೆಗೆ ಸಂಚು ರೂಪಿಸುತ್ತಿದ್ದ ಹಾಗೂ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಕುರಿತು ತನಿಖೆ ನಡೆಸಿದ ಪೊಲೀಸರು ಇದೀಗ ನೂಪುರ್ ಶರ್ಮಾ ಹತ್ಯೆಗೆ ಓಡಾಡುತ್ತಿದ್ದ ಉಗ್ರ ಮೊಹಮ್ಮದ್ ನದೀಮ್ ಬಂಧಿಸಿದ್ದಾರೆ.

Tap to resize

Latest Videos

ನೂಪುರ್ ಶರ್ಮಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ಕೋರ್ಟ್‌!

ನೂಪುರ್ ಶರ್ಮಾಗೆ ಹತ್ಯೆಗೆ ಇತ್ತೀಚೆಗೆ ಪಾಕಿಸ್ತಾನದಿಂದ ಭಾರತ ಗಡಿಯೊಳಗ್ಗೆ ಉಗ್ರ ನುಸುಳಿದ್ದ. ಈತನನ್ನು ಬಂಧಿಸಲಾಗಿತ್ತು. ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ ಅಧಿಕಾರಿಗಳು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿ ಬಳಿ ಬಂಧಿಸಿದ್ದರು. ರಿಜ್ವಾನ್‌ ಅಶ್ರಫ್‌ (24) ಬಂಧಿತ ಆರೋಪಿ. ಬಿಎಸ್‌ಎಫ್‌ ಯೋಧರಿಂದ ಬಂಧನಕ್ಕೊಳಗಾದಾಗ ಆಶ್ರಫ್‌ ಮೊದಲಿಗೆ, ತಾನು ಶ್ರೀ ಗಂಗಾನಗರದಿಂದ ಅಜ್ಮೇರ್‌ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಲು ಬಂದಿದ್ದಾಗಿ ಸುಳ್ಳು ಹೇಳಿದ್ದಾನೆ. ಆದರೆ ತನಿಖೆ ಬಳಿಕ ಪ್ರವಾದಿ ಮೊಹಮ್ಮದ್‌ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹತ್ಯೆ ಉದ್ದೇಶದಿಂದ ಭಾರತದ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ್ದೆ ಎಂದು ಬಾಯ್ಬಿಟ್ಟಿದ್ದ. ಹಿಂದೂ ಮಾಲ್ಕೋಟ್‌ನ ಖನಕ್‌ ಚೆಕ್‌ಪೋಸ್ಟ್‌ ಮೂಲಕ ದೇಶದ ಗಡಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಈತನ ಬಳಿಯಿಂದ 2 ಚಾಕು, ಕೆಲವು ಪುಸ್ತಕಳು ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಪ್ರವಾದಿ ಮೊಹಮ್ಮದ ಕುರಿತು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದ ಆರೋಪ ಎದುರಿಸುತ್ತಿರುವ ನೂಪುರ್‌ ಶರ್ಮಾ ಬೆಂಬಲಿಸಿದ ಕಾರಣಕ್ಕೆ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಕರ್ಜತ್‌ ಪಟ್ಟಣದಲ್ಲಿ ನಡೆದಿದೆ. ಕಳೆದ ಗುರುವಾರ ಪ್ರತೀಕ್‌ ಅಲಿಯಾಸ್‌ ಪವಾರ್‌ (23) ತನ್ನ ಸ್ನೇಹಿರೊಬ್ಬರಿಗಾಗಿ ಸ್ಥಳೀಯ ಮೆಡಿಕಲ್‌ ಶಾಪ್‌ ಮುಂದೆ ಕಾಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ 10-15 ಮುಸ್ಲಿಂ ಯುವಕರು, ಈತನೇ ನೂಪುರ್‌ ಶರ್ಮಾ ಬೆಂಬಲಿಸಿ ಡಿಪಿ ಹಾಕಿಕೊಂಡಿದ್ದು ಎಂದು ಕೂಗುತ್ತಾ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 35 ಹೊಲಿಗೆ ಹಾಕಲಾಗಿದೆ. ಸದ್ಯ ಆತ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ದಾಳಿ ವೇಳೆ ನಿನಗೂ ಉಮೇಶ್‌ ಕೊಲ್ಹೇ (ನೂಪುರ್‌ ಬೆಂಬಲಿಸಿದ್ದಕ್ಕೆ ಹತ್ಯೆಯಾದ ಮಹಾರಾಷ್ಟ್ರದ ವ್ಯಕ್ತಿ) ಗತಿಯೇ ಆಗಲಿದೆ ಎಂದು ಎಚ್ಚರಿಸಿಯೂ ಹೋಗಿದ್ದಾರೆ ಎನ್ನಲಾಗಿದೆ.

ಇನ್ಸ್ಟಾ ಖಾತೆಯಲ್ಲಿ ನೂಪುರ್ ಫೋಟೋ ಅಪ್ಲೋಡ್‌ ಮಾಡಿದ ಉದ್ಯಮಿಗೆ ಕೊಲೆ ಬೆದರಿಕೆ!

click me!