ಇಬ್ಬರನ್ನು ಕೊಂದ ಹುಲಿಗೆ ಅಜೀವ ಶಿಕ್ಷೆ!

Published : Jun 08, 2020, 10:45 AM ISTUpdated : Jun 08, 2020, 12:00 PM IST
ಇಬ್ಬರನ್ನು ಕೊಂದ ಹುಲಿಗೆ ಅಜೀವ ಶಿಕ್ಷೆ!

ಸಾರಾಂಶ

ಎರಡು ವರ್ಷಗಳ ಹಿಂದೆ ಇಬ್ಬರನ್ನು ಕೊಂದ ತಪ್ಪಿಗೆ ಹುಲಿ|  ‘ಅಜೀವ ಶಿಕ್ಷೆ’ಗೆ ಗುರಿ ಪಡಿಸಿದ ಅಪರೂಪದ ಘಟನೆ| 2018ರಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಇಬ್ಬರನ್ನು ಕೊಂದಿದ್ದ ಹುಲಿ

ಭೋಪಾಲ್(ಜೂ.08)‌: ಎರಡು ವರ್ಷಗಳ ಹಿಂದೆ ಇಬ್ಬರನ್ನು ಕೊಂದ ತಪ್ಪಿಗೆ ಹುಲಿಯೊಂದನ್ನು ‘ಅಜೀವ ಶಿಕ್ಷೆ’ಗೆ ಗುರಿ ಪಡಿಸಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

2018ರಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಇಬ್ಬರನ್ನು ಕೊಂದಿದ್ದ ಹುಲಿ, ಮಧ್ಯಪ್ರದೇಶಕ್ಕೆ ಪ್ರವೇಶ ಮಾಡಿ, ಪದೇ ಪದೇ ಜನವಸತಿ ಪ್ರದೇಶಗಳಿಗೆ ಬರುತ್ತಿತ್ತು. ಶನಿವಾರ ಭೋಪಾಲ್‌ನ ಸರ್ಣಿ ಎಂಬ ಜನ ವಸತಿ ಪ್ರದೇಶಕ್ಕೆ ನುಗ್ಗಿದ್ದು, ಅರಣ್ಯಾಧಿಕಾರಿಗಳು ಅದನ್ನು ಹಿಡಿದು ಖನ್ನಾ ಹುಲಿ ರಕ್ಷಿತಾ ಅಭಯಾರಣ್ಯದಲ್ಲಿ ಇರಿಸಿದ್ದಾರೆ.

ಗದಗ ಮೃಗಾಲಯ: ಜೂ.8ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಬಳಿಕ ಅದನ್ನು ವನ ವಿಹಾರ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಿ ಅಜೀವ ಶಿಕ್ಷೆಗೆ ಒಳಪಡಿಸಿದ್ದಾರೆ. ಪದೇ ಪದೇ ಜನವಸತಿ ಪ್ರದೇಶಕ್ಕೆ ತೆರಳುವ ಅಭ್ಯಾಸ ಹೊಂದಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ವರ್ಗಾಯಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!