ಅಕ್ರಮ ಮದ್ಯ ನೀತಿ ಹಗರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಇಂದು ಅಧಿಕೃತವಾಗಿ ಬಂಧಿಸಿದೆ. ಇದೀಗ ನ್ಯಾಯಾಲಯ ಕೇಜ್ರಿವಾಲ್ ಅವರನ್ನು 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಆದರೆ, ಕೇಂದ್ರ ಏಜೆನ್ಸಿ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ಕೋರಿತ್ತು.
ನವದೆಹಲಿ (ಜೂ.26): ಅಕ್ರಮ ಮದ್ಯ ನೀತಿ ಹಗರಣ (Delhi liquor policy) ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಸಿಬಿಐ (CBI) ಬಂಧಿಸಿದೆ. ಸಿಬಿಐ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ಕೋರಿತ್ತು, ಆದರೆ ನ್ಯಾಯಾಲಯವು ಕಸ್ಟಡಿ ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ರೂಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್ ಅವರನ್ನು 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ನಾನು ಹೇಳಿಕೆಯೊಂದರಲ್ಲಿ ಸಂಪೂರ್ಣ ಆರೋಪವನ್ನು ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿದ್ದೇನೆ ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ ಎಂದು ಕೇಜ್ರಿವಾಲ್ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು, ನಾನು ಸಿಸೋಡಿಯಾ ತಪ್ಪಿತಸ್ಥ ಅಥವಾ ಬೇರೊಬ್ಬರು ತಪ್ಪಿತಸ್ಥರು ಎಂದು ಯಾವುದೇ ಹೇಳಿಕೆ ನೀಡಿಲ್ಲ. ನಾನು, ಸಿಸೋಡಿಯಾ ನಿರಪರಾಧಿ, ಆಮ್ ಆದ್ಮಿ ಪಕ್ಷ ನಿರಪರಾಧಿ, ನಾನು ನಿರಪರಾಧಿ ಎಂದು ಕೇಜ್ರಿವಾಲ್ ಮತ್ತೊಮ್ಮೆ ಹೇಳಿದ್ದಾರೆ.
ಮಾಧ್ಯಮಗಳ ಮುಂದೆ ನಮ್ಮ ಮಾನಹಾನಿ ಮಾಡುವುದೇ ಅವರ (ಸಿಬಿಐ) ಸಂಪೂರ್ಣ ಯೋಜನೆಯಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಎಲ್ಲಾ ವಿಷಯಗಳನ್ನು ಸಿಬಿಐ ಮೂಲಗಳ ಮೂಲಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ ಎಂಬುದನ್ನು ದಯವಿಟ್ಟು ದಾಖಲಿಸಿ. ಸಿಬಿಐ ಈ ವಿಷಯವನ್ನು ಸೆನ್ಸೇಷನ್ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು. ವಿಷಯವನ್ನು ಸೆನ್ಸೇಷನ್ ಮಾಡುವುದೇ ಸಿಬಿಐ ಉದ್ದೇಶ ಎಂದು ಹೇಳಿದ್ದಾರೆ.
ಇತರ ಆರೋಪಿಗಳೊಂದಿಗೆ ಮುಖಾಮುಖಿ ವಿಚಾರಣೆ: ನ್ಯಾಯಾಲಯದಲ್ಲಿ ಸಿಬಿಐ ವಕೀಲರು ತಾವು ವಾಸ್ತವಾಂಶದ ಆಧಾರದ ಮೇಲೆ ವಾದಿಸಿದ್ದೇವೆ ಮತ್ತು ಯಾವುದೇ ಏಜೆನ್ಸಿ ಮೂಲಗಳು ಏನನ್ನೂ ಹೇಳಿಲ್ಲ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಅವರ ಕಸ್ಟಡಿಗೆ ಕೋರಿ ಸಲ್ಲಿಸಿದ ಅರ್ಜಿಯಲ್ಲಿ, ಪ್ರಕರಣದಲ್ಲಿ ದೊಡ್ಡ ಪಿತೂರಿಯನ್ನು ಕಂಡುಹಿಡಿಯಲು ಅವರನ್ನು ಪ್ರಶ್ನಿಸಬೇಕಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ದೆಹಲಿ ಮುಖ್ಯಮಂತ್ರಿಯನ್ನು ಸಾಕ್ಷ್ಯಾಧಾರಗಳು ಮತ್ತು ಪ್ರಕರಣದ ಇತರ ಆರೋಪಿಗಳ ಮುಂದೆ ಹಾಜರುಪಡಿಸಬೇಕಾಗಿದೆ ಎಂದಿದೆ.
ನ್ಯಾಯಾಲಯದಲ್ಲಿ ಸಿಬಿಐ ಹೇಳಿದ್ದೇನು?: ಕೇಜ್ರಿವಾಲ್ ಅವರನ್ನು ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಬೇಕಾಗಿದೆ ಎಂದು ಸಿಬಿಐ ಹೇಳಿದೆ. (ಸಹ ಆರೋಪಿ) ವಿಜಯ್ ನಾಯರ್ ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದಾನೆ ಎಂಬುದನ್ನೂ ಅವರು ಗುರುತಿಸುತ್ತಿಲ್ಲ. ವಿಜಯ್ ನಾಯರ್ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳುತ್ತಾರೆ. ಅವರು ಮನೀಷ್ ಸಿಸೋಡಿಯಾ (ಈ ಪ್ರಕರಣದಲ್ಲಿ ಆರೋಪಿಯೂ ಆಗಿದ್ದಾರೆ) ಮೇಲೆ ಎಲ್ಲಾ ಆರೋಪಗಳನ್ನು ಹೊರಿಸುತ್ತಿದ್ದಾರೆ. ಹಾಗಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ದಾಖಲೆಗಳನ್ನು ತೋರಿಸಬೇಕು.
ತಿಹಾರ್ ಜೈಲಿನಲ್ಲಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಸಿಬಿಐ ವಶಕ್ಕೆ
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು ತಿಹಾರ್ ಜೈಲಿನಲ್ಲಿದ್ದರು. ಸಿಬಿಐ ತಂಡ ನಿನ್ನೆ ಅವರನ್ನು ಜೈಲಿನಲ್ಲಿ ವಿಚಾರಣೆ ನಡೆಸಿತ್ತು. ಇದೇ ವೇಳೆ ಕೇಂದ್ರ ಸರ್ಕಾರ ಕೇಜ್ರಿವಾಲ್ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಅವರನ್ನು ಬಂಧಿಸಲು ಸಿಬಿಐ ಸುಳ್ಳು ಕೇಸ್ ಹಾಕಿದೆ ಎಂದು ಹೇಳಿದೆ.
Breaking: ಅರವಿಂದ್ ಕೇಜ್ರಿವಾಲ್‌ಗೆ ನೀಡಿದ ಜಾಮೀನು ರದ್ದು ಮಾಡಿದ ಹೈಕೋರ್ಟ್!