ಅರಿಶಿನ ಶಾಸ್ತ್ರ ಸೇರಿದಂತೆ ಎಲ್ಲಾ ಮದುವೆ ಕಾರ್ಯಕ್ರಮಗಳು ತಡರಾತ್ರಿವರೆಗೆ ಅದ್ಧೂರಿಯಾಗಿ ನಡೆದಿವೆ. ಮದುವೆ ನಂತರ ಕೈಕೈ ಹಿಡಿದುಕೊಂಡು ನವದಂಪತಿ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಂಜು ವರನಂತೆ, ಕವಿತಾ ವಧುವಿನಂತೆ ಪೋಷಾಕು ಧರಿಸಿದ್ದರು.
ನವದೆಹಲಿ: ದೆಹಲಿಯ ಗುರುಗ್ರಾಮದಲ್ಲಿ ಯುವತಿಯರಿಬ್ಬರು (Two Young Girls) ಮದುವೆಯಾಗಿದೆ. ಇಬ್ಬರಲ್ಲಿ ಓರ್ವ ಯುವತಿ ವರನಂತೆ, ಮತ್ತೋರ್ವಳು ವಧುವಿನಂತೆ ಸಿದ್ಧವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಭಾರತದಲ್ಲಿ ಸಲಿಂಗಿಗಳ ಮದುವೆಗೆ (Same Sex Marriage) ಅನುಮತಿ ಇಲ್ಲ. ಆದ್ರೆ ಇದ್ಯಾವೂದನ್ನು ಲೆಕ್ಕಿಸದ ಇವರಿಬ್ಬರು ಮದುವೆಯಾಗಿದ್ದಾರೆ. ಈ ಮದುವೆ ಏಪ್ರಿಲ್ 24ರಂದು ನಡೆದಿದ್ದು, ಇದೀಗ ಜೋಡಿಯ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಗುರುಗ್ರಾಮ್ ನಿವಾಸಿ 30 ವರ್ಷದ ಅಂಜು ಶರ್ಮಾ ಮದುವೆ ಹರಿಯಾಣದ ಫತೇಹಬಾದ್ ನಗರದ 30 ಕವಿತಾ ಟಪ್ಪು ಜೊತೆ ನಡೆದಿದೆ. ಎಲ್ಲಾ ಮದುವೆಗಳಂತೆ ಸಂಪ್ರದಾಯಬದ್ಧವಾಗಿ ಅಂಜು ಮತ್ತು ಕವಿತಾ ಕಲ್ಯಾಣ ನೆರವೇರಿದೆ.
undefined
ಅದ್ಧೂರಿಯಾಗಿ, ಸಂಪ್ರದಾಯಬದ್ಧವಾಗಿ ನಡೆದ ಮದುವೆ
ಅರಿಶಿನ ಶಾಸ್ತ್ರ ಸೇರಿದಂತೆ ಎಲ್ಲಾ ಮದುವೆ ಕಾರ್ಯಕ್ರಮಗಳು ತಡರಾತ್ರಿವರೆಗೆ ಅದ್ಧೂರಿಯಾಗಿ ನಡೆದಿವೆ. ಮದುವೆ ನಂತರ ಕೈಕೈ ಹಿಡಿದುಕೊಂಡು ನವದಂಪತಿ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಂಜು ವರನಂತೆ, ಕವಿತಾ ವಧುವಿನಂತೆ ಪೋಷಾಕು ಧರಿಸಿದ್ದರು. ಈ ಮದುವೆಯಲ್ಲಿ ಎರಡು ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಕೇವಲ 80 ಜನರು ಮಾತ್ರ ಭಾಗಿಯಾಗಿದ್ದರು. ಗುರುಗ್ರಾಮದ ಚೋಟಿ ಪಂಚಾಯ್ತಿಯ ಧರ್ಮಶಾಲಾದಲ್ಲಿ ಅದ್ಧೂರಿಯಾಗಿ, ಸಂಪ್ರದಾಯಬದ್ಧವಾಗಿ ಅಂಜು-ಕವಿತಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಸಲಿಂಗಿ ಮಗನ ಅಂತ್ಯಕ್ರಿಯೆಗೆ ಒಪ್ಪದ ಕುಟುಂಬ; ಸಂಗಾತಿಯ ಪಾರ್ಥಿವ ಶರೀರ ಕೋರಿ ಕೋರ್ಟ್ ಮೆಟ್ಟಿಲೇರಿದ ಗೆಳೆಯ
ಕೊನೆ ಕ್ಷಣದಲ್ಲಿ ಕೈ ಕೊಟ್ಟ ಪುರೋಹಿತರು!
ಆದ್ರೆ ಅಂಜು-ಕವಿತಾ ಮದುವೆ ಸಮಯದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯ್ತು. ಆರಂಭದಲ್ಲಿಯೇ ಪುರೋಹಿತರಿಗೆ ಇದು ಇಬ್ಬರು ಮಹಿಳೆಯರ ಮದುವೆ ಎಂದು ಹೇಳಲಾಗಿತ್ತು. ಪುರೋಹಿತರು ಸಹ ಮದುವೆ ಮಾಡಿಸೋದಾಗಿ ಒಪ್ಪಿಕೊಂಡಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಅಪಘಾತವಾಗಿದೆ ಎಂದು ಹೇಳಿ ಪುರೋಹಿತರು ಮದುವೆಗೆ ಗೈರಾದರು. ಆನಂತರ ಸಂಬಂಧಿಯೊಬ್ಬರು ಪುರೋಹಿತರೊಬ್ಬರನ್ನು ಕರೆದುಕೊಂಡು ಬಂದರು. ಅದೇ ರೀತಿ ಕಲ್ಯಾಣಮಂಟಪ ಬುಕ್ ಮಾಡುವಾಗ, ಮದುವೆ ಕೆಲಸಕ್ಕೆ ಕಾರ್ಮಿಕರನ್ನು ನಿಯೋಜಿಸುವಾಗಲೂ ಇದು ಮಹಿಳೆಯರಿಬ್ಬರ ಮದುವೆ ಎಂದು ಸಂಪೂರ್ಣ ಮಾಹಿತಿ ನೀಡಲಾಗಿತ್ತು.
ಯುವಕನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್
ಗುರುಗ್ರಾಮದ ಅಂಜು ಶರ್ಮಾ ನಟಿಯಾಗಿದ್ದು, ಕವಿತಾ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. 2020ರಲ್ಲಿ ಅಂಜು ಶರ್ಮಾಗೆ ಮೇಕಪ್ ಮಾಡಲು ಕವಿತಾ ಬಂದಿದ್ರು. ಈ ವೇಳೆ ಪರಿಚಯವಾದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಈ ಕುರಿತು ಮಾತನಾಡಿರುವ ಕವಿತಾ, ನಾನು ಸಲಿಂಗಿ ಸಂಬಂಧದಲ್ಲಿ ಬರುತ್ತೇನೆ ಎಂದೂ ಊಹೆ ಮಾಡಿರಲಿಲ್ಲ. ಅಂಜು ಪರಿಚಯವಾಗುವ ಮುನ್ನ ನಾನು ಯುವಕನೋರ್ವನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದೆ. ನಂತರ ಇಬ್ಬರು ಜೊತೆಯಾಗಿ ವಾಸಿಸಲು ಶುರು ಮಾಡಿದೇವು. ಆದ್ರೆ ಯುವಕನ ಜೊತೆಗಿನ ಸಂಬಂಧದಿಂದ ನಾನು ಖುಷಿಯಾಗಿರಲಿಲ್ಲ. ಆದ್ರೆ ನಮ್ಮಿಬ್ಬರ ಸಂಬಂಧ ಕೆಲವೇ ದಿನಗಳಲ್ಲಿ ಮುರಿದು ಬಿತ್ತು ಎಂದು ಹೇಳುತ್ತಾರೆ.
ಮಗು ಬೇಕೆಂದ ಪತಿಗೆ ನೋ ಎಂದ ಮಡದಿ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಸಲಿಂಗಿ ಸ್ನೇಹಿತನ ಕುಡಿ!
ನನ್ನ ಸೋದರಳಿಯ ಅಪಘಾತದಲ್ಲಿ ಸಾವನ್ನಪ್ಪಿದ್ದಾಗ ತಾಯಿ ಮತ್ತು ನಾನು ತುಂಬಾ ನೊಂದಿದ್ದೇವು. ಆ ಸಮಯದಲ್ಲಿ ಅಂಜು ನನ್ನ ಜೊತೆಯಲ್ಲಿ ಇರದಿದ್ದರೆ ನಾನು ಖಿನ್ನತೆಗೆ ಜಾರುತ್ತಿದ್ದೆ ಎಂದು ಕವಿತಾ ಹೇಳುತ್ತಾರೆ. ಮದುವೆ ಬಗ್ಗೆ ಮಾತನಾಡಿರುವ ಅಂಜು ಶರ್ಮಾ, ಸಂಸಾರ ಆರಂಭಿಸಬೇಕು ಎಂಬುವುದು ನಮ್ಮ ಕನಸು ಆಗಿತ್ತು. ಹಾಗಾಗಿ ಮದುವೆಯಾಗಿದ್ದೇವೆ. ಭಾರತದಲ್ಲಿ ಸಲಿಂಗಿಗಳ ಮದುವೆ ಮಾನ್ಯವಿಲ್ಲ. ಹಾಗಾಗಿ ಮಗು ದತ್ತು ಪಡೆಯಲು ಆಗಲ್ಲ ಎಂದು ಹೇಳಿದ್ದಾರೆ.