ಮತದಾನದ ಅಂಕಿ ಅಂಶ ಪ್ರಕಟಿಸದ ಆಯೋಗ: ಕೇಜ್ರಿವಾಲ್ ಕಿಡಿ!

By Suvarna NewsFirst Published Feb 9, 2020, 8:05 PM IST
Highlights

ಮತದಾನದ ಅಂತಿಮ ಅಂಕಿ ಅಂಶ ಪ್ರಕಟಿಸದ ಆಯೋಗ| ಚುನಾವಣಾ ಆಯೋಗದ ನಡೆಗೆ ಕೇಜ್ರಿವಾಲ್ ಕಿಡಿ| ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಶೇಕಡಾವಾರು ಅಂಕಿ ಅಂಶ| ಒಂದು ದಿನ ಕಳೆದರೂ ಅಂತಿಮ ಮಾಹಿತಿ ನೀಡದ ಚುನಾವಣಾ ಆಯೋಗ| ಚುನಾವಣಾ ಆಯೋಗದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ  ಎಂದ ಕೇಜ್ರಿ|

ನವದೆಹಲಿ(ಫೆ.09): ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಶೇಕಡಾವಾರು ಅಂಕಿ ಅಂಶವನ್ನು ಪ್ರಕಟಿಸದ ಚುನಾವಣಾ ಆಯೋಗದ ನಡೆಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.

ಮತದಾನದ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸಲು ವಿಳಂಬ ಮಾಡುತ್ತಿರುವ ಆಯೋಗದ ಕ್ರಮಕ್ಕೆ ಅರವಿಂದ್ ಕೇಜ್ರಿವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

It’s almost 17 hours since the completion of the poll, EC yet to give final voter turnout data for .

Officials say “data being revised, final polling percentage will be made public by today evening.”

— Arvind Gunasekar (@arvindgunasekar)

ಮತದಾನ ಪ್ರಕ್ರಿಯೆ ಮುಕ್ತಾಯಗೊಂಡು ಒಂದು ದಿನವೇ ಕಳೆದಿದ್ದರೂ ಚುನಾವಣಾ ಆಯೋಗ ಏಕೆ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸುತ್ತಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಶೇಕಡಾವಾರು ಮತದಾನದ ಅಂಕಿ ಅಂಶ ಪ್ರಕಟಿಸದಿರುವ ಚುನಾವಣಾ ಆಯೋಗದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ.

Absolutely shocking. What is EC doing? Why are they not releasing poll turnout figures, several hours after polling? https://t.co/ko1m5YqlSx

— Arvind Kejriwal (@ArvindKejriwal)

ನಿನ್ನೆ(ಶನಿವಾರ)ಚುನಾವಣಾ ಆಯೋಗ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ ಶೇ.61.46 ರಷ್ಟು ಮತದಾನ ನಡೆದಿತ್ತು. ಆದರೆ ಅಂತಿಮ ಅಂಕಿ ಅಂಶಗಳನ್ನು ಆಯೋಗ ಇದುವರೆಗೂ ಪ್ರಕಟಿಸಿಲ್ಲ.

click me!