AAP ಸಂಸದ, ಸಚಿವರಿಗೆ ಮಹತ್ವದ ಸೂಚನೆ ನೀಡಿದ ಕೇಜ್ರಿವಾಲ್; ದೇಶವೇ ಮೆಚ್ಚುಗೆ!

By Suvarna News  |  First Published Nov 20, 2020, 9:37 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಜನ ಸಾಮಾನ್ಯರ ಪಾಡು ಹೇಳತೀರದು. ಅದೆಷ್ಟೋ ಮಂದಿ ಮಾಸ್ಕ್ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ.  ಸರ್ಕಾರ ಮಾಸ್ಕ್ ನೀಡುವುದರ ಬದಲು ದಂಡ ಹಾಕುತ್ತಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ ಸಂಸದರು, ಸಚಿವರು, ಶಾಸಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.


ನವದೆಹಲಿ(ನ.20): ಕೊರೋನಾ ವೈರಸ್ ದೇಶದ ಚಿತ್ರವಣನ್ನೇ ಬದಲಿಸಿದೆ. ಜನಸಾಮಾನ್ಯರು ತೀರಾ ಸಂಕಷ್ಟ ಪಡುತ್ತಿದ್ದಾರೆ. ಮಾಸ್ಕ್ ಧರಿಸಲು ಸಾಧ್ಯವಾಗದೆ, ಅತ್ತ ದಂಡ ಕಟ್ಟಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಸಂಸದರು, ಶಾಸಕರು, ಸಚಿವರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಜನ ಸಾಮಾನ್ಯರಿಗೆ ಮಾಸ್ಕ್ ನೀಡವು ಕುರಿತು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ದಿಲ್ಲಿಯಲ್ಲಿ ಕೊರೋನಾ 3ನೇ ಅಲೆ: ಸಿಎಂ ಕೇಜ್ರಿವಾಲ್‌!..

Latest Videos

undefined

ಆಪ್ ಸಂಸದರು, ಶಾಸಕರು, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆ ಸ್ಥಳಗಳಿಗೆ ತೆರಳಿ ಮಾಸ್ಕ್ ಧರಿಸದವರಿಗೆ ಮಾಸ್ಕ್ ಉಚಿತವಾಗಿ ನೀಡಬೇಕು. ಮಾನವ ಸೇವೆಯೇ ಅತೀ ದೊಡ್ಡ ದೇಶಭಕ್ತಿ. ಇತರ ರಾಜಕೀಯ ಪಕ್ಷಗಳು, ಪಕ್ಷದ ಕಾರ್ಯಕರ್ತರು ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಿದರೆ ಉತ್ತಮ. ಕೊರೋನಾ ತಡೆಯದಂತೆ ಎಲ್ಲರು ನೆರವಾಗಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

 

Dear AAP MLAs, MPs, councillors, volunteers,

Go to public places n distribute free masks to those not wearing a mask. Today, this is the best deshbhakti n manav sewa.

I urge all political parties also to ask their volunteers to do this

Lets join hands to stop spread of corona

— Arvind Kejriwal (@ArvindKejriwal)

ದೇಶದ ಹಲವು ನಗರಗಳಲ್ಲಿ ಮಾಸ್ಕ್ ಧರಿಸಿದಿದ್ದರೆ ದಂಡ 2000 ರೂಪಾಯಿಗೆ ಏರಿಸಲಾಗಿದೆ. ಪದೆ ಪದೇ ಮಾಸ್ಕ್ ಬದಲಾಸುವ ಶಕ್ತಿ ಹಲವರಿಗಿಲ್ಲ. ಇದೀಗ ಈ ಸಮಸ್ಯೆಯನ್ನು ಗಮನಿಸಿರುವ ಅರವಿಂದ್ ಕೇಜ್ರಿವಾಲ್ ಉಚಿತ ಮಾಸ್ಕ್ ವಿತರಿಸಲು ಕರೆ ನೀಡಿದ್ದಾರೆ. ಸ್ವಯಂತ ಸೇವಕರು ಈ ಅಭಿಯಾನಕ್ಕೆ ಕೈಜೋಡಿಸಲು ಸೂಚಿಸಿದ್ದಾರೆ.

click me!