
ಕೋಲ್ಕತಾ(ನ.20): ಇಳೀ ವಯಸ್ಸಿನಲ್ಲಿ ತುತ್ತು ಅನ್ನಕ್ಕಾಗಿ ಕಠಿಣ ಪ್ರಯತ್ನ ಪಡುತ್ತಿದ್ದ ಹಲವರು ಸಾಮಾಜಿಕ ಜಾಲತಾಣದ ಮೂಲಕ ಉತ್ತಮ ನೆಲೆ ಕಂಡುಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಯ ಬಾಬಾ ಕಾ ಡಾಬಾ, ಬೆಂಗಳೂರಿನ ರೇವಣ್ಣ ಸಿದ್ದಪ್ಪ, ಅಗ್ರಾದ ರೋಟಿವಾಲಿ ಅಮ್ಮ, ಕೇರಳದ ಪಾರ್ವತಿ ಅಮ್ಮ, ಅಸ್ಸಾಂನ ಪಕೋಡೆ ವಾಲಿ ದಾದಿ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವ್ಯಾಪಾರ ವಹಿವಾಟು ವೃದ್ಧಿಸಿ ಉತ್ತಮ ನೆಲೆ ಕಂಡುಕೊಂಡಿದ್ದಾರೆ. ಇದೀಗ ಇದೇ ರೀತಿಯ ನೆರವು 80ರ ವಯಸ್ಸಿನ ಸುನಿಲ್ ಪಾಲ್‌ಗೆ ಬೇಕಾಗಿದೆ.
ರಾತ್ರೋ ರಾತ್ರಿ ವೈರಲ್ ಆದ ಬಾಬಾ ಕಾ ಧಾಬಾ ಈಗ ಝೊಮ್ಯಾಟೋದಲ್ಲೂ ಲಭ್ಯ
ಕೋಲ್ಕತಾದ ಸುನಿಲ್ ಪಾಲ್ ವಯಸ್ಸು 80. ಮಕ್ಕಳು ಅಪ್ಪನನ್ನು ತ್ಯಜಿಸಿದ್ದಾರೆ. ಅವರೆಲ್ಲಿದ್ದಾರೆ ಅನ್ನೋ ಸುಳಿವು ಕೂಡ ಸುನಿಲ್ ಪಾಲ್‌ಗೆ ಇಲ್ಲ. ಕನಿಷ್ಠ ಜೀವನೋಪಾಯಕ್ಕೆ ಯಾವ ನೆರವೂ ಸನಿಲ್ ಪಾಲ್ ಮಕ್ಕಳು ನೀಡಿಲ್ಲ. ತುತ್ತು ಅನ್ನಕ್ಕಾಗಿ, ಜೀವನ ನಿರ್ವಹಣೆಗಾಗಿ ಸುನಿಲ್ ಪಾಲ್, ದಶಕಗಳ ಹಿಂದೆ ಕುಟುಂಬವನ್ನು ಪೋಷಿಸಿದ್ದ ಚಿತ್ರ ಕಲೆಯನ್ನು ಮತ್ತೆ ಹಿಡಿದುಕೊಂಡಿದ್ದಾರೆ.
ಉತ್ತಮ ಚಿತ್ರಕಾರನಾಗಿರವ ಸುನಿಲ್ ಪಾಲ್, ರಾತ್ರಿಯಿಡಿ ಚಿತ್ರ ಬರೆದು ಬೆಳಗಿನ ಸಮಯದಲ್ಲಿ ಗೋಲ್‌ಪಾರ್ಕ್‌ನ ಗರಿಹಾಟ್ ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ಪಕ್ಕದಲ್ಲಿ ಸುನಿಲ್ ಪಾಲ್ ತಾವು ಬಿಡಿಸಿದ ಚಿತ್ರ ಮಾರಾಟ ಮಾಡುತ್ತಿದ್ದಾರೆ. ಕಷ್ಟಪಟ್ಟು ಸುಂದರವಾಗಿ ಬಿಡಿಸಿದ ಚಿತ್ರಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ. ಇಷ್ಟೇ ಅಲ್ಲ ಯಾರೂ ಕೂಡ ಖರೀದಿಗೂ ಮುಂದಾಗುತ್ತಿಲ್ಲ. 10 ರಿಂದ 50 ರೂಪಾಯಿ ತಮ್ಮ ಚಿತ್ರ ಕಲೆಯನ್ನು ಮಾರಾಟ ಮಾಡುತ್ತಿದ್ದಾರೆ.
ಸುನಿಲ್ ಪಾಲ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. ಇವರಿಗೆ ನಿಮ್ಮ ಸಹಾಯದ ಅಗತ್ಯವಿದೆ ಅನ್ನೋ ಕ್ಯಾಪ್ಶನ್ ಹಾಕಲಾಗಿದೆ. ಸಾಮಾಜಿಕ ಜಾಲತಾದಣಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಬಹುತೇಕರು ಸುನಿಲ್ ಪಾಲ್‌ಗೆ ನೆರವಾಗಲು ಮುಂದಾಗಿದ್ದಾರೆ. ಅವರ ಚಿತ್ರಕಲೆಗೆ ಸರಿಯಾದ ಬೆಲೆ ನೀಡಲು ಹಲವರು ಮುಂದೆ ಬಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ