ಕೋವಿಡ್ ವಾರಿಯರ್ಸ್ ಮಕ್ಕಳಿಗೆ 5 MBBS ಸೀಟ್ ಮೀಸಲು; ಕೇಂದ್ರದ ಮಹತ್ವದ ನಿರ್ಧಾರ!

By Suvarna News  |  First Published Nov 20, 2020, 7:47 PM IST

MBBS ಸೀಟು ಸಿಗಬೇಕಾದರೆ NEET ರ್ಯಾಂಕ್ ಅಗತ್ಯ. ಶ್ರೇಯಾಂಕದ ಮೇಲೆ ಸೀಟು ಹಂಚಿಕೆಯಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇದೀಗ ದಿಟ್ಟ ಹೆಜ್ಜೆ ಇಟ್ಟಿದೆ. ಕೊರೋನಾ ವಾರಿಯರ್ಸ್ ಮಕ್ಕಳಿಗ ಎಂಬಿಬಿಎಸ್ ಸೀಟು ಮೀಸಲಿಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.


ನವದೆಹಲಿ(ನ.20):  ಕೊರೋನಾ ವಾರಿಯರ್ಸ್ ಅದೆಷ್ಟೇ ಧನ್ಯವಾದ ಹೇಳಿದರೂ ಸಾಕಾಗಲ್ಲ. ಕಾರಣ ಅವರ ನಿಸ್ವಾರ್ಥ ಸೇವೆಯಿಂದ ಕೋಟ್ಯಾಂತರ ಭಾರತೀಯರು ಸುರಕ್ಷಿತವಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೊರೋನಾ ವಾರಿಯರ್ಸ್ ಮಕ್ಕಳಿಗೆ 5 MBBS ಸೀಟು ಮೀಸಲಿಟ್ಟಿದೆ.

ಕೊರೋನಾ ಕೊಲ್ಲಲು ಕೊನೆಗೂ ಹೊಸ ಅಸ್ತ್ರ ಸಿಕ್ಕು,  30 ಸೆಕೆಂಡ್ ಸಾಕು!.

Tap to resize

Latest Videos

ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ, ಕೊರೋನಾ ಸೇವೆಯಲ್ಲಿ ಸಾವನ್ನಪ್ಪಿದವರ ಮಕ್ಕಳಿಗೆ 5 ಎಂಬಿಬಿಎಸ್ ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. 

 

Health Ministry approves new category for selection & nomination of candidates from ‘Wards of COVID Warriors’ under Central Pool MBBS/BDS seats for 2020-21

“It will honour the solemn sacrifice of all COVID warriors who served selflessly,” says Health Minister, Dr. Harsh Vardhan pic.twitter.com/iooVPDDpYC

— ANI (@ANI)

ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ನಡೆಸಿದ ನೀಟ್ 2020 ರ್ಯಾಂಕ್ ಆಧಾರದಲ್ಲಿ ಮೆಡಿಕಲ್ ಕೌನ್ಸಿಲ್ ಕಮಿಟಿ ಸೀಟು ಹಂಚಿಕೆ ಮಾಡಲಿದೆ. ಈ ಕುರಿತು ವಿಸ್ತೃತ ವಿವರವನ್ನು ಮೆಡಿಕಲ್ ಕೌನ್ಸಲಿ ನೀಡಲಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ. 

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ದೇಶದಲ್ಲಿನ ಆರೋಗ್ಯ ಸ್ಥಿತಿಯನ್ನು ತಹಬದಿಗೆ ತರಲು ಕೊರೋನಾ ವಾರಿಯರ್ಸ್ ಅವಿರತ ಶ್ರಮ ಪಟ್ಟಿದ್ದಾರೆ. ಹೀಗಾಗಿ ಅವರ ಸೇವೆಗೆ ಗೌರವ ನೀಡುವ ಸಲುವಾಗಿ 5 ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

click me!