ಅರುಣಾಚಲದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು: ಸಿಕ್ಕಿಂ ಕ್ಲೀನ್ ಸ್ವೀಪ್‌ಗೆ ಎಸ್‌ಕೆಎಂ ಸಜ್ಜು

Published : Jun 02, 2024, 12:18 PM ISTUpdated : Jun 02, 2024, 12:25 PM IST
 ಅರುಣಾಚಲದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು: ಸಿಕ್ಕಿಂ ಕ್ಲೀನ್ ಸ್ವೀಪ್‌ಗೆ ಎಸ್‌ಕೆಎಂ ಸಜ್ಜು

ಸಾರಾಂಶ

ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಭರದಿಂದ ಸಾಗುತ್ತಿದೆ. ಬಿಜೆಪಿ ಅರುಣಾಚಲ ಪ್ರದೇಶದಲ್ಲಿ ಮರು ಪಾರುಪತ್ಯ ಸಾಧಿಸುವ ಲಕ್ಷಣಗಳು ಕಾಣಿಸುತ್ತಿದೆ

ನವದೆಹಲಿ: ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಭರದಿಂದ ಸಾಗುತ್ತಿದೆ. ಬಿಜೆಪಿ ಅರುಣಾಚಲ ಪ್ರದೇಶದಲ್ಲಿ ಮರು ಪಾರುಪತ್ಯ ಸಾಧಿಸುವ ಲಕ್ಷಣಗಳು ಕಾಣಿಸುತ್ತಿದೆ. ಹಾಗೆಯೇ ಸಿಕ್ಕಿಂನಲ್ಲಿ ಆಡಳಿತದಲ್ಲಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(SKM)2ನೇ ಬಾರಿ ಅಧಿಕಾರದ ಗದ್ದುಗೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶದ 60 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆದಿತ್ತು. 

ಆದರೆ ಇವತ್ತು ಅರುಣಾಚಲ ಪ್ರದೇಶದ ಕೇವಲ 50 ಕ್ಷೇತ್ರಗಳ ಫಲಿತಾಂಶ ಮಾತ್ರ ಹೊರ ಬೀಳಲಿದೆ. ಏಕೆಂದರೆ ಇಲ್ಲಿನ 10 ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಇಲ್ಲಿ ಆಡಳಿತದಲ್ಲಿರುವ ಬಿಜೆಪಿ ಸಿಎಂ ಪೇಮಾ ಖಂಡು ಮೂರನೇ ಬಾರಿ ಗದ್ದುಗೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿ ಇಲ್ಲಿ ಎಲ್ಲಾ 60 ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್ ಮಾತ್ರ ಕೇವಲ 34 ಕ್ಷೇತ್ರಗಳಲ್ಲಿ ಸ್ಪರ್ಧೆ ನೀಡಿತ್ತು.

ಮೋದಿ ಗ್ಯಾರಂಟಿ ಎದುರು ವರ್ಕೌಟ್‌ ಆಗಿಲ್ವಾ ಕಾಂಗ್ರೆಸ್‌ ಗ್ಯಾರಂಟಿ? ಮೋದಿಗೆ ಅಧಿಕಾರ ಎಂದ ಎಕ್ಸಿಟ್ ಪೋಲ್‌ಗಳು !

ಇನ್ನು ಸಿಕ್ಕಿಂ ರಾಜ್ಯದಲ್ಲಿ 32 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ 17 ಸೀಟುಗಳ ಅಗತ್ಯವಿದೆ. ಹಾಲಿ ಮುಖ್ಯಮಂತ್ರಿ ಪಿಎಸ್ ತಮಂಗ್ ಅವರು, 'ಜನ ತಮಗೆ 2ನೇ ಅವಧಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡುತ್ತಾರೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  2019ರಲ್ಲಿ ಎಸ್‌ಕೆಎಂ ಪಕ್ಷವೂ ಪವನ್ ಚಮ್ಲಿಂಗ್ ನೇತೃತ್ವದ ಎಸ್‌ಡಿಎಫ್ ಪಕ್ಷದ ವಿರುದ್ಧ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಎಸ್‌ಡಿಎಫ್ ಪಕ್ಷದ  25 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು. 

ಇನ್ನು ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಶುರು ಮಾಡಿದ್ದು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಎಕ್ಸಿಟ್ ಫೋಲ್ ಸುಳ್ಳಾಗಲಿದೆ, ಮೋದಿ 3ನೇ ಬಾರಿ ಪ್ರಧಾನಿಯಾದರೆ ತಲೆ ಶೇವ್ ಮಾಡುವೆ : ಎಎಪಿ ನಾಯಕ

ಅರುಣಾಚಲದ ಚಯಾಂಗ್ತಾಜೊ ಕ್ಷೇತ್ರದಲ್ಲಿ ಬಿಜೆಪಿಯ ಹಯೆಂಗ್ ಮಂಗ್ಫಿ ಅವರು ಕಾಂಗ್ರೆಸ್‌ನ ಕೊಂಪು ಡೊಲೊ ಅವರನ್ನು 6,685 ಮತಗಳಿಂದ ಸೋಲಿಸಿದ್ದಾರೆ.

ಹಾಗೆಯೇ ಬಿಜೆಪಿಯ ತೇಸಾಮ್ ಪೊಂಗ್ಟೆ ಮತ್ತು ವಾಂಗ್ಲಿನ್ ಲೋವಾಂಗ್‌ಡಾಂಗ್ ಅವರು ಕ್ರಮವಾಗಿ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಉತ್ತರ ಮತ್ತು ಬೋರ್ದುರಿಯಾ ಬೊಗಪಾನಿ ಕ್ಷೇತ್ರವನ್ನು ಗೆದ್ದಿದ್ದಾರೆ.

11 ಗಂಟೆಯ ಸುಮಾರಿಗೆ ಬಿಜೆಪಿ ಅರುಣಾಚಲದಲ್ಲಿ ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.  12 ಗಂಟೆಯ ವೇಳೆಗೆ ಸಿಕ್ಕಿಂ ಹಾಲಿ ಸಿಎಂ ಪ್ರೇಮ್ ಸಿಂಗ್ ತಾಮಂಗ್ ಅವರು ಕೂಡ ಎಸ್‌ಕೆಎಂ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ಶಾ ವಾಗ್ದಾಳಿ
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!