'BJP ಆಡಳಿತದಲ್ಲಿ ಪಾನ್ ಪಟ್ಟಿ ಅಂಗಡಿಯಾಗಿದೆ CBI'..!

By Suvarna NewsFirst Published Nov 20, 2020, 3:39 PM IST
Highlights

ಸಿಬಿಐ ಎಲ್ಲಾದ್ರೂ ಹೋಗುತ್ತೆ, ಯಾರ ಮೇಲಾದ್ರು ಕೇಸ್ ಹಾಕುತ್ತೆ, ವಿಶೇಷವಾಗಿ ಬಿಜೆಪಿ ಬಿಟ್ಟು ಉಳಿದ ಸರ್ಕಾರವಿರುವಲ್ಲಿ ಇದು ಹೆಚ್ಚಾಗಿದೆ. ಬಿಜೆಪಿ ಸರ್ಕಾರದಡಿಯಲ್ಲಿ ಸಿಬಿಐ ಪಾನ್ ಪಟ್ಟಿ ಅಂಗಡಿಯಾಗಿ ಬದಲಾಗಿದೆ ಎಂದು ಸಚಿವ ಅಸ್ಲಂ ಶೇಖ್ ಟೀಕಿಸಿದ್ದಾರೆ.

ಮುಂಬೈ(ನ.20): ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಿಬಿಐ ಪಾನ್ ಶಾಪ್ ಆಗಿ ಬದಲಾಗಿದೆ ಎಂದು ಮಹಾರಾಷ್ಟ್ರ ಸಚಿವ ಅಸ್ಲಂ ಶೇಖ್ ಟೀಕಿಸಿದ್ದಾರೆ. ಬಿಜೆಪಿ ಸರ್ಕಾರದಡಿಯಲ್ಲಿ ಸಿಬಿಐ ಪಾನ್ ಪಟ್ಟಿಯ ಅಂಗಡಿಯಾಗಿ ಬದಲಾಗಿದೆ ಎಂದಿದ್ದಾರೆ.

ಸಿಬಿಐ ಎಲ್ಲಾದ್ರೂ ಹೋಗುತ್ತೆ, ಯಾರ ಮೇಲಾದ್ರು ಕೇಸ್ ಹಾಕುತ್ತೆ, ವಿಶೇಷವಾಗಿ ಬಿಜೆಪಿ ಬಿಟ್ಟು ಉಳಿದ ಸರ್ಕಾರವಿರುವಲ್ಲಿ ಇದು ಹೆಚ್ಚಾಗಿದೆ, ಸಿಬಿಐ ಸಿಎಂ ಸಚಿವರ ಮೇಲೂ ಕ್ರಮ ಕೈಗೊಳ್ತಿದೆ. ಸರ್ಕಾರದ ಅನುಮತಿ ಪಡೆದು ಸಿಬಿಐ ತನಿಖೆ ನಡೆಸಬೇಕೆಂಬ ಸುಪ್ರಿಂ ಕೋರ್ಟ್‌ ತೀರ್ಪನ್ನು ಸಚಿವ ಸ್ವಾಗತಿಸಿದ್ದಾರೆ.

ತನ್ನ ಮೇಲೆಯೇ ಕೊರೋನಾ ಔಷಧ ಪ್ರಯೋಗ ಮಾಡಿಕೊಂಡ ಆರೋಗ್ಯ ಸಚಿವ..!

ರಾಜ್ಯ ಸರ್ಕಾರಗಳ ಒಪ್ಪಿಗೆಯಿಲ್ಲದೆ ಸಿಬಿಐ ತನಿಖೆ ನಡೆಸಬಾರದು. ಕೇಂದ್ರ ಅನುಮತಿಯಿಲ್ಲದೆ ಯಾವುದೇ ರಾಜ್ಯಕ್ಕೆ ಏಜೆನ್ಸಿಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿತ್ತು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಬಿ.ಆರ್. ಗವಾಯಿ ಅವರು ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯನ್ನು ಉಲ್ಲೇಖಿಸಿ ಭಾರತದ ಪ್ರಧಾನ ತನಿಖಾ ಸಂಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ.

ಸರ್ಕಾರದ ಜೊತೆ ಇದ್ದು ಹೋರಾಟ ಮಾಡ್ತೀನಿ : ಪ್ರಜ್ವಲ್ ರೇವಣ್ಣ

ಕಾನೂನಿನ ಪ್ರಕಾರ, ರಾಜ್ಯದ ಒಪ್ಪಿಗೆ ಅತ್ಯಗತ್ಯ ಮತ್ತು ರಾಜ್ಯದ ಒಪ್ಪಿಗೆಯಿಲ್ಲದೆ ಕೇಂದ್ರವು ಸಿಬಿಐ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಕಾನೂನು ಸಂವಿಧಾನದ ಫೆಡರಲ್ ರಚನೆಗೆ ಅನುಗುಣವಾಗಿದೆ "ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ

click me!