ಯೋಧರಿಗೆ ಕಡಿಮೆ ತೂಕದ ಗುಂಡು ನಿರೋಧಕ ಜಾಕೆಟ್‌

By Kannadaprabha News  |  First Published Apr 2, 2021, 11:46 AM IST

ಭಾರತೀಯ ಯೋಧರಿಗೆ ಕಾರಾರ‍ಯಚರಣೆಗೆ ಅನುಕೂಲವಾಗುವಂತೆ ಕಡಿಮೆ ತೂಕದ ಗುಂಡು ನಿರೋಧಕ ಜಾಕೆಟ್‌ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ 


ಬೆಂಗಳೂರು (ಏ..02) : ದೇಶದ ಗಡಿಯಲ್ಲಿ ಹಗಲಿರುಳು ಶ್ರಮ ವಹಿಸುವ ಭಾರತೀಯ ಯೋಧರಿಗೆ ಕಾರಾರ‍ಯಚರಣೆಗೆ ಅನುಕೂಲವಾಗುವಂತೆ ಕಡಿಮೆ ತೂಕದ ಗುಂಡು ನಿರೋಧಕ ಜಾಕೆಟ್‌ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ತಿಳಿಸಿದೆ. ಈ ಮೊದಲು 10.4 ಕೇಜಿಯಷ್ಟಿದ್ದ ಗುಂಡು ನಿರೋಧಕ ಜಾಕೆಟ್‌ವೊಂದರ ತೂಕ ಇದೀಗ 9 ಕೇಜಿಗೆ ಇಳಿಸಲಾಗಿದೆ.

ಚೀನಾ ಗಡಿಯಲ್ಲಿ ಭಾರತೀಯ ಯೋಧರ ಸಖತ್ ಡ್ಯಾನ್ಸ್; ವಿಡಿಯೋ ವೈರಲ್! ..

Latest Videos

undefined

ಫ್ರಂಟ್‌ ಹಾರ್ಡ್‌ ಆರ್ಮರ್‌ ಪ್ಯಾನೆಲ್‌(ಎಫ್‌ಎಚ್‌ಎಪಿ) ಹೆಸರಿನ ಜಾಕೆಟ್‌ ಅನ್ನು ಚಂಡೀಗಢದಲ್ಲಿರುವ ಟರ್ಮಿನಲ್‌ ಬ್ಯಾಲಿಸ್ಟಿಕ್ಸ್‌ ರಿಸಚ್‌ರ್‍ ಲ್ಯಾಬೋರೇಟರಿ(ಟಿಬಿಆರ್‌ಎಲ್‌)ಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಿಐಎಸ್‌ನ ಗುಣಮಟ್ಟಗಳನ್ನು ಹೊಂದಿದೆ ಎಂದು ಡಿಆರ್‌ಡಿಒ ಹೇಳಿದೆ.

ದೇಶದ ಯೋಧರಿಗೆ ಹಾಕಿಕೊಳ್ಳಲು ಕಿರಿಕಿರಿ ಎನಿಸದ ಕಡಿಮೆ ತೂಕದ ಜಾಕೆಟ್‌ ಅಭಿವೃದ್ಧಿಗೊಳಿಸಿದ ಡಿಆರ್‌ಡಿಒನ ವಿಜ್ಞಾನಿಗಳು ಮತ್ತು ಕಂಪನಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.

click me!