
ಸಿಯಾಚಿನ್(ಜ.09): ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಇಂದು ಸಿಯಾಚಿನ್ ಗಡಿಗೆ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದರು.
ಸಿಯಾಚಿನ್ ಯುದ್ಧ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿದ ಮುಕುಂದ್ ನಾರವಾನೆ, ತಮ್ಮ ಸಹೋದ್ಯೋಗಿಗಳೊಂದಿಗಿನ ಆತ್ಮೀಯ ಭೇಟಿಗೆ ಸಾಕ್ಷಿಯಾದರು.
ಪಾಕ್ ಆಕ್ರಮಿತ ಕಾಶ್ಮೀರ ಟಾರ್ಗೆಟ್ ಮಾಡಲು ಸಿದ್ಧ: ಸೇನಾ ಮುಖ್ಯಸ್ಥ!
ಈ ವೇಳೆ ಮಾತನಾಡಿದ ಜನರಲ್ ನಾರವಾನೆ, ಭಾರತೀಯ ಭೂಸೇನೆ ಮುಖ್ಯಸ್ಥರಾಗಿ ಮೊದಲ ಬಾರಿಗೆ ಸಿಯಾಚಿನ್ ಗಡಿಗೆ ಭೇಟಿ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸಿಯಾಚಿನ್ ಗಡಿ ದೇಶದ ಹೆಮ್ಮೆ ಎಂದು ಹೇಳಿರುವ ನಾರವಾನೆ, ನಮ್ಮ ಗಡಿ ಸುರಕ್ಷಿತಗೆ ಸೇನೆ ಸರ್ವ ಸನ್ನದ್ಧವಾಗಿದೆ ಎಂಬ ಸಂದೇಶ ಸಿಯಾಚಿನ್ ನೀರ್ಗಲ್ಲುಗಳನ್ನು ಸೀಳಿಯೇ ದೇಶ ತಲುಪುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಚೀನಾ ಮೇಲೆ ನಿಗಾ ಎಂದ ಸೇನಾ ಮುಖ್ಯಸ್ಥ: ನಾರವಾನೆ ಮಾತಿಗೆ ಡ್ರ್ಯಾಗನ್ ಅಸ್ವಸ್ಥ!
ಇನ್ನು ಸೇನಾ ಮುಖ್ಯಸ್ಥರ ಸಿಯಾಚಿನ್ ಭೇಟಿ, ನೆರೆಯ ಪಾಕಿಸ್ತಾನದ ಎದೆಬಡಿತ ಹೆಚ್ಚಿಸಿದ್ದು, ಅತ್ತ ಚೀನಾ ಕೂಡ ಈ ನಡೆಯನ್ನು ವಾರೆಗಣ್ಣಿನಿಂದ ನೋಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ