ಕೋವಿಡ್ ಪಾಸಿಟಿವ್ ಬಳಿಕ ನಾಪತ್ತೆಯಾದ ಅರ್ಜೆಂಟೀನಾ ಪ್ರವಾಸಿಗ

By Anusha Kb  |  First Published Dec 29, 2022, 3:44 PM IST

ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಅರ್ಜೆಂಟೀನಾದ ಟೂರಿಸ್ಟ್ ಒಬ್ಬರು ನಂತರ ನಾಪತ್ತೆಯಾದ ಘಟನೆ ವಿಶ್ವ ವಿಖ್ಯಾತ ಪ್ರವಾಸಿ ತಾಣ ತಾಜ್‌ ಮಹಲ್‌ನಲ್ಲಿ ನಡೆದಿದೆ. ಅರ್ಜೆಂಟೀನಾದ ಪ್ರವಾಸಿಗ ಡಿಸೆಂಬರ್ 26 ರಂದು ತಾಜ್‌ಮಹಲ್‌ಗೆ ಭೇಟಿ ನೀಡಿದ್ದ.


ಜಗತ್ತಿನಾದ್ಯಂತ ಕೋವಿಡ್ ದಿನೇ ದಿನೇ ಹೆಚ್ಚಳವಾಗುತ್ತಿದೆ. ಭಾರತದಲ್ಲೂ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ, ವಿದೇಶಗಳಿಂದ ಆಗಮಿಸುವವರಿಗೆ, ಕೋವಿಡ್ ತಪಾಸಣೆ ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ಸ್ಥಳಗಳಲ್ಲೂ ಕೂಡ ವಿದೇಶಗಳಿಂದ ಬಂದ ಪ್ರವಾಸಿಗರಿಗೆ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಹೀಗೆ ಕೋವಿಡ್ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಅರ್ಜೆಂಟೀನಾದ ಟೂರಿಸ್ಟ್ ಒಬ್ಬರು ನಂತರ ನಾಪತ್ತೆಯಾದ ಘಟನೆ ವಿಶ್ವ ವಿಖ್ಯಾತ ಪ್ರವಾಸಿ ತಾಣ ತಾಜ್‌ ಮಹಲ್‌ನಲ್ಲಿ ನಡೆದಿದೆ. ಅರ್ಜೆಂಟೀನಾದ ಪ್ರವಾಸಿಗ ಡಿಸೆಂಬರ್ 26 ರಂದು ತಾಜ್‌ಮಹಲ್‌ಗೆ ಭೇಟಿ ನೀಡಿದ್ದ.  ಈತನ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ಬಂದಿತ್ತು. 

ಮುಂಜಾಗೃತ ಕ್ರಮವಾಗಿ ತಾಜ್‌ಮಹಲ್‌ನ (monument) ಪಶ್ಚಿಮ ಗೇಟ್‌ನಲ್ಲಿ ಪ್ರವಾಸಿಗರಿಗೆ ಕೋವಿಡ್ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಅರ್ಜೆಂಟೀನಾದ ಪ್ರಸ್ತುತ ನಾಪತ್ತೆಯಾದ ವ್ಯಕ್ತಿಯ ತಪಾಸಣೆ ನಡೆಸಿ ಗಂಟಲಿನ ದ್ರವ ಸಂಗ್ರಹಿಸಲಾಗಿತ್ತು. ಇದರ ಆರ್‌ ಪಿಸಿಆರ್ ವರದಿ ನಿನ್ನೆ ಬಂದಿದ್ದು, ಈತನಿಗೆ ಕೋವಿಡ್ ಇದೇ ಎಂಬುದು ನಿನ್ನೆ ಖಚಿತವಾಗಿತ್ತು. ಈ ವಿಚಾರವನ್ನು ಆತನಿಗ ಫೋನ್ ಮೂಲಕ ತಿಳಿಸಲಾಗಿತ್ತು. ಆದರೆ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಆತ ನಾಪತ್ತೆಯಾಗಿದ್ದಾನೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

Tap to resize

Latest Videos

ಕೋವಿಡ್ ಆತಂಕ, ತಾಜ್‌ಮಹಲ್ ಪ್ರವೇಶಕ್ಕೆ ನೆಗಟೀವ್ ರಿಪೋರ್ಟ್ ಕಡ್ಡಾಯ!

ಅಲ್ಲದೇ ಆತನ ನೀಡಿದ ದೂರವಾಣಿ ಸಂಖ್ಯೆ ಹಾಗೂ ಆತ ನೀಡಿದ ಹೊಟೇಲ್ ವಿಳಾಸ ಕೂಡ ತಪ್ಪಾಗಿದೆ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಕಷ್ಟವಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಆರೋಗ್ಯ ಇಲಾಖೆ (health department) ಅಧಿಕಾರಿಗಳು ಈಗ ಸ್ಥಳೀಯ ಗುಪ್ತಚರ ಘಟಕಕ್ಕೆ ಏರ್‌ಪೋರ್ಟ್ ಪ್ರಾಧಿಕಾರಕ್ಕೆ (airport authority), ಎಎಸ್‌ಐ ಹಾಗೂ ಸಮೀಪದ ಹೊಟೇಲ್‌ಗಳಿಗೆ ಈ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ.  
ಕೋವಿಡ್ ಪಾಸಿಟಿವ್ (Covid-19 positive) ಬಳಿಕ ನಾಪತ್ತೆಯಾಗಿರುವ ಈ ಅರ್ಜೆಂಟೀನಾದ (Argentina) ಪ್ರವಾಸಿಗನ ಗುರುತು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈತ ನೀಡಿದ ಸಂಪರ್ಕ ವಿವರ ತಪ್ಪಾಗಿದೆ. ಇತ್ತೀಚೆಗೆ ಅರ್ಜೆಂಟೀನಾದಿಂದ ಬಂದು ಹೊಟೇಲ್ ಸೇರಿದ ಪ್ರವಾಸಿಗರ ಮಾಹಿತಿಯನ್ನು ಹೊಟೇಲ್‌ಗಳಿಂದ ಕೇಳಿದ್ದೇವೆ. ಅಲ್ಲದೇ ನಾವು ಭಾರತೀಯ ಪುರಾತತ್ವ ಇಲಾಖೆಯಿಂದಲೂ (ASI) ಈ ವ್ಯಕ್ತಿ ಬಗ್ಗೆ ಮಾಹಿತಿ ಕೇಳಿದ್ದೇವೆ. ಒಂದು ವೇಳೆ ಮಾಹಿತಿ ಸಿಕ್ಕಿದಲ್ಲಿ ಇತರರಿಗೂ ಕಾಯಿಲೆ ಹರಡದಂತೆ ತಡೆಯಲು ಆತನನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದು ಆಗ್ರಾದ ಮುಖ್ಯ ವೈದ್ಯಕೀಯ ಅಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ್ (Arun Kumar Srivastava) ಹೇಳಿದ್ದಾರೆ. 

ಜಿ20 ಸಮಾವೇಶ, ತಾಜ್‌ಮಹಲ್‌ನಲ್ಲಿ ಮಂಗಗಳನ್ನು ಹಿಡಿಯೋಕೆ ಪುರಾತತ್ವ ಇಲಾಖೆಯಿಂದ ಟೆಂಡರ್‌!

ಇದುವರೆಗೆ 30 ಸಾವಿರ ಪ್ರವಾಸಿಗರು ಬುಧವಾರ ಆಗ್ರಾಕ್ಕೆ ಭೇಟಿ ನೀಡಿ ತಾಜ್ ಮಹಲ್ (Taj Mahal) ವೀಕ್ಷಣೆ ಮಾಡಿದ್ದಾರೆ. ಪಶ್ಚಿಮ ಹಾಗೂ ಪೂರ್ವ ಗೇಟ್‌ನಲ್ಲಿ ಪ್ರವಾಸಿಗರು ಸರತಿಯಲ್ಲಿ ಕಾದು ನಿಂತು ತಪಾಸಣೆ ಮಾಡಿಕೊಂಡು ಆಗ್ರಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದರ ಹೊರತಾಗಿ ಮಥುರಾ (Mathura) ಜಿಲ್ಲೆಯಲ್ಲಿರುವ ಬೃಂದಾವನದಲ್ಲಿಯೂ (Vrindavan town) ಕೂಡ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿಗೆ ವಿದೇಶಿ ಭಕ್ತರು ವರ್ಷಪೂರ್ತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. 

click me!