ನೀವು ಯೂಟ್ಯೂಬ್ ಸ್ಟಾರಾ... ಎಷ್ಟಿದೆ ಪಗಾರ...

Published : Oct 12, 2022, 01:10 PM IST
ನೀವು ಯೂಟ್ಯೂಬ್ ಸ್ಟಾರಾ... ಎಷ್ಟಿದೆ ಪಗಾರ...

ಸಾರಾಂಶ

, ಒಬ್ಬರು ಯೂಟ್ಯೂಬ್ ಕ್ರಿಯೇಟರ್ ಕಾಣಲು ಸಿಕ್ಕಿದರೆಂದರೆ ಮೊದಲು ಕೇಳುವ ಪ್ರಶ್ನೆ ಇದ್ರಿಂದ ನಿಮಗೆಷ್ಟು ದುಡ್ಡು ಬರುತ್ತೆ ಎನ್ನುವುದು. ಇಂತಹ ಜನರ ಪ್ರಶ್ನೆ ಬಹುತೇಕ ಯುಟ್ಯೂಬ್ ಸ್ಟಾರ್‌ಗಳನ್ನು ಕಾಡಿರಬಹುದು. ಅದೇನೆ ಇರಲಿ ಇಂದು ಭಾರತದಲ್ಲಿ ಇರುವ ಯೂಟ್ಯೂಬರ್‌ಗಳ ಸಂಖ್ಯೆ ಎಷ್ಟು ಗೊತ್ತೆ?

ನವದೆಹಲಿ: ಜನಸಂಖ್ಯೆಯ ವಿಚಾರದಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಭಾರತ ಕೋಟ್ಯಾಂತರ ಸಂಖ್ಯೆಯ ಯುಟ್ಯೂಬ್ ಸ್ಟಾರ್‌ಗಳನ್ನು ಕ್ರಿಯೇಟರ್‌ಗಳನ್ನು ಹೊಂದಿದೆ. ಇತ್ತೀಚೆಗಂತೂ ಪ್ರತಿ ಮನೆ ಮನೆ ಗಲ್ಲಿ ಗಲ್ಲಿಗಳಲ್ಲಿ ಯೂಟ್ಯೂಬ್‌ ಸ್ಟಾರ್‌ಗಳು ಕಾಣಲು ಸಿಗುತ್ತಾರೆ. ಯೂಟ್ಯೂಬ್‌ನಿಂದಲೂ ಹಣ ಮಾಡಬಹುದು ಎಂದು ಇಂದು ಬಹುತೇಕ ಯುವ ಸಮೂಹಕ್ಕೆ, ಜನ ಸಾಮಾನ್ಯರಿಗೆ ತಿಳಿದಿದ್ದು, ಒಬ್ಬರು ಯೂಟ್ಯೂಬ್ ಕ್ರಿಯೇಟರ್ ಕಾಣಲು ಸಿಕ್ಕಿದರೆಂದರೆ ಮೊದಲು ಕೇಳುವ ಪ್ರಶ್ನೆ ಇದ್ರಿಂದ ನಿಮಗೆಷ್ಟು ದುಡ್ಡು ಬರುತ್ತೆ ಎನ್ನುವುದು. ಇಂತಹ ಜನರ ಪ್ರಶ್ನೆ ಬಹುತೇಕ ಯುಟ್ಯೂಬ್ ಸ್ಟಾರ್‌ಗಳನ್ನು ಕಾಡಿರಬಹುದು. ಅದೇನೆ ಇರಲಿ ಇಂದು ಭಾರತದಲ್ಲಿ ಇರುವ ಯೂಟ್ಯೂಬರ್‌ಗಳ ಸಂಖ್ಯೆ ಎಷ್ಟು ಗೊತ್ತೆ?

ಭಾರತವು ಈಗ ಕನಿಷ್ಠ 8 ಕೋಟಿ ಯೂಟ್ಯೂಬ್ ಡಿಜಿಟಲ್ ಕ್ರಿಯೇಟರ್‌ಗಳನ್ನು (Youtube digital creator) ಹೊಂದಿದೆಯಂತೆ. ಡಿಜಿಟಲ್ ಕ್ರಿಯೇಟರ್‌ಗಳು ಹಾಗೂ ಇದನ್ನೇ ವೃತ್ತಿಯಾಗಿಸಿಕೊಂಡವರನ್ನು ಸೇರಿ ಸುಮಾರು 8 ಕೋಟಿ ಯುಟ್ಯೂಬರ್‌ಗಳನ್ನು ಹೊಂದಿದ್ದು, ಇದರಲ್ಲಿ ಈ ಮಾಧ್ಯಮವನ್ನು ಚೆನ್ನಾಗಿ ಬಳಸಿಕೊಂಡು ಹಣ ಗಳಿಸುತ್ತಿರುವವರು ಮಾತ್ರ 1.5 ಲಕ್ಷ ಮಂದಿಯಂತೆ. ಹೊಸ ಸಮೀಕ್ಷೆಯೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ. ಈ 1.5 ಲಕ್ಷ ವೃತ್ತಿಪರ ಕಂಟೆಂಟ್ (Professional content) ರಚನೆಕಾರರಲ್ಲಿ ಹೆಚ್ಚಿನವರು ತಿಂಗಳಿಗೆ $200-$2,500 ಡಾಲರ್ ಅಂದರೆ  16,000 ದಿಂದ ಆರಂಭವಾಗಿ 200,000 ವರೆಗೂ ದುಡಿಯುವವರಿದ್ದಾರೆ. ಇದು ಅವರು ತಮ್ಮ ತಮ್ಮ ಕೇತ್ರದಲ್ಲಿ ಮಾಡುವ ವಿಡಿಯೋಗಳು ಹಾಗೂ ಅವು ತಲುಪುವ ರೀತಿಯ ಮೇಲೆ ಅವಲಂಬಿಸಿದೆ.

World Richest ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತನಾದ ಯೂಟ್ಯೂಬರ್, ಆದರೆ 7 ನಿಮಿಷ ಮಾತ್ರ!

ತಂತ್ರಜ್ಞಾನ (Technology) ಆಧರಿತ, ಕೇಂದ್ರೀಕೃತ ಸಾಹಸೋದ್ಯಮ ಬಂಡವಾಳ ಸಂಸ್ಥೆ ಕಲಾರಿ ಕ್ಯಾಪಿಟಲ್‌ನ ವರದಿಯ ಪ್ರಕಾರ, ಶೇಕಡಾ 1 ಕ್ಕಿಂತ ಕಡಿಮೆ ವೃತ್ತಿಪರ ರಚನೆಕಾರರು (ಅಂದರೆ 1 ಮಿಲಿಯನ್‌ಗಿಂತಲೂ ಹೆಚ್ಚು  ಫಾಲೋವರ್‌ಗಳನ್ನು ಹೊಂದಿರುವವರು) ತಿಂಗಳಿಗೆ $2,500-$65,000 ಡಾಲರ್ (ರೂ. 53 ಲಕ್ಷಕ್ಕಿಂತ ಹೆಚ್ಚು) ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗೆಯೇ ಕೆಲವೇ ಕೆಲವು ಮಂದಿ ಮಾತ್ರ ತಿಂಗಳಿಗೆ $100,000 ಡಾಲರ್ ಅಂದರೆ 82 ಲಕ್ಷಕ್ಕಿಂತ ಹೆಚ್ಚು ಹಣ ಯುಟ್ಯೂಬ್‌ನಿಂದ ಗಳಿಸುತ್ತಿದ್ದಾರಂತೆ.

ಹಾಗೆಯೇ ಭಾರತದಲ್ಲಿ ಪ್ರಾದೇಶಿಕವಾಗಿ ಕಿರು ವೀಡಿಯೊ ನಿರ್ಮಾಣ ಪ್ಲಾಟ್‌ಫಾರ್ಮ್‌ಗಳಲ್ಲಿ 50,000 ವೃತ್ತಿಪರ ರಚನೆಕಾರರಿದ್ದು, ಅವರ ಶೇಕಡಾ 60 ರಷ್ಟು ವೀಕ್ಷಕರು ಮೆಟ್ರೋ ನಗರದಿಂದ ಹೊರ ಪ್ರದೇಶದಲ್ಲಿ ವಾಸಿಸುವವರಾಗಿದ್ದಾರೆ. ಸಾಮಾಜಿಕ ಜಾಲತಾಣ (Social Media) ಮುಂತಾದ ನೂತನ ವೇದಿಕೆಗಳು ಇಂತಹ ಹೆಚ್ಚಿನ ಫಾಲೋವರ್ಸ್‌ಗಳನ್ನು ಸೃಷ್ಟಿಸಲು ಮತ್ತು ಅವರ ಅಭಿಮಾನಿಗಳನ್ನು ನೇರವಾಗಿ ತಲುಪಲು ಅನುವು ಮಾಡಿಕೊಟ್ಟವು. ಆದಾಗ್ಯೂ, ಅವರ ಆರ್ಥಿಕತೆಯತ್ತ ಗಮನಿಸಿದಾಗ  ಕೆಲವೇ ಕೆಲವು ರಚನೆಕಾರರು ಮಾತ್ರ ಪರಿಣಾಮಕಾರಿಯಾಗಿ ಹಣ ಗಳಿಸಿದ್ದಾರೆ ಎಂದು ಸಂಶೋಧನೆಗಳು ತೋರಿಸಿವೆ.

ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯುಟ್ಯೂಬರ್ 'ಸ್ಕೈಲಾರ್ಡ್' ಖ್ಯಾತಿಯ ಅಭ್ಯುದಯ್ ಸಾವು

ಕಳೆದೊಂದು ದಶಕದಲ್ಲಿ ಕಂಟೆಂಟ್‌ ಕ್ರಿಯೇಟರ್‌ಗಳ ಸಂಖ್ಯೆ ಧಾರಾಳವಾಗಿ ಹೆಚ್ಚಾಗಿದ್ದು, ಆದರೆ ಅವರ ನಡುವೆ ಆದಾಯದ ಹಂಚಿಕೆಯಲ್ಲಿ ಭಾರಿ ವ್ಯತ್ಯಾಸವಿದೆ. ಸಾಮಾಜಿಕ ಜಾಲತಾಣಗಳು ವೇದಿಕೆಯ ಕೊರತೆಯ ಸಮಸ್ಯೆಯನ್ನು ಬಗೆಹರಿಸಿದೆ. ಆದರೆ ಬಹುತೇಕ ಅವರು ಸೃಷ್ಟಿಸಿದ ಕಂಟೆಂಟ್‌ನಿಂದ ಬರುವ ಸಂಪತ್ತನ್ನು ಆ ಫ್ಲಾಟ್ಪಾರ್ಮ್‌ಗಳೇ ವಶಕ್ಕೆ ಪಡೆಯುತ್ತವೆ. ಇದರಲ್ಲಿ ಬಹುತೇಕ ಜನರು ಮೊದಲ ಬಾರಿ ಇಂಟರ್‌ನೆಟ್ ಬಳಸುವವರಾಗಿದ್ದಾರೆ.

ಕಂಟೆಂಟ್ ಕ್ರಿಯೇಟರ್ (content creators), ವಿಡಿಯೋ ಸ್ಟ್ರೀಮರ್, ಇನ್‌ಫ್ಲುಯೆನ್ಸರ್(influencers), ಬ್ಲಾಗರ್, ಒಟಿಟಿ ಪ್ಲಾಟ್‌ಫಾರ್ಮ್‌ನ ಕ್ರಿಯೇಟರ್‌ಗಳು, ದೈಹಿಕ ಉತ್ಪನ್ನಗಳ ಕ್ರಿಯೇಟರ್‌ಗಳು ಹೀಗೆ ಎಲ್ಲರನ್ನು ಒಳಗೊಂಡಂತೆ ಪ್ರಸ್ತುತ ಭಾರತದಲ್ಲಿ 8 ಕೋಟಿ ಕ್ರಿಯೇಟರ್‌ಗಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌