ಉಗ್ರರ ದಾಳಿಯಲ್ಲಿ ಹತ್ಯೆಯಾದ ಬಿಹಾರ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ ಘೋಷಣೆ!

Published : Oct 17, 2021, 09:31 PM IST
ಉಗ್ರರ ದಾಳಿಯಲ್ಲಿ ಹತ್ಯೆಯಾದ ಬಿಹಾರ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ ಘೋಷಣೆ!

ಸಾರಾಂಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ನಾಗರೀಕರನ್ನು ಗುರಿಯಾಸಿ ದಾಳಿ, ಇಬ್ಬರು ಹತ್ಯೆ ಸಾವನ್ನಪಿದ ಕುಟುಂಬಕ್ಕೆ ತಲಾ 2 ಲಕ್ಷ ಘೋಷಿಸಿದ ಬಿಹಾರ ಸಿಎಂ

ನವದೆಹಲಿ(ಅ.17): ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರನ್ನು ಗುರಿಯಾಗಿಸಿ ಉಗ್ರರ ದಾಳಿ ಮುಂದುವರಿದಿದೆ. ಕಳೆದ ಎರಡು ದಿನಗಳಲ್ಲಿ ಮೂರನೇ ದಾಳಿ ಇದಾಗಿದೆ. ಕಾಶ್ಮೀರದ ಕುಲ್ಗಾಮ್ ವಲಯದಲ್ಲಿ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಬಿಹಾರ ಕಾರ್ಮಿಕರು ಸಾವನ್ನಪ್ಪಿದ್ದಾರೆ.  ಸದ್ಯ ಗುಲ್ಕಾಮ್ ಏರಿಯಾವನ್ನು ಭಾರತೀಯ ಸೇನೆ ಸುತ್ತುವರಿದಿದ್ದು, ಶೋಧ ಕಾರ್ಯ ಮುಂದವರಿಸಿದ್ದಾರೆ.

Poonch encounter;ಉಗ್ರರ ದಾಳಿಗೆ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ!

ಕಾಶ್ಮೀರಕ್ಕೆ ತೆರಳಿ ಕಾರ್ಮಿಕರಾಗಿ ದುಡಿಯುತ್ತಿದ್ದ ಬಿಹಾರದ  ಮೂಲದ ಇಬ್ಬರು  ಕುಲ್ಗಾಮ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದು ಇಬ್ಬರನ್ನು ಹತ್ಯೆಗೈದಿದ್ದಾರೆ. ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಬಿಹಾರದ ಕಾರ್ಮಿಕರನ್ನು ರಾಜಾ ರಾಜೇಶ್ ದೇವ್ ಹಾಗೂ ಜೋಗಿಂದರ್ ರೇಶಿ ದೇವ್ ಎಂದು ಗುರುತಿಸಲಾಗಿದೆ.

 

ಉಗ್ರರ ದಾಳಿಯನ್ನು ಕಾಶ್ಮೀರ ಮೇಯರ್ ಸೇರಿದಂತ ಹಲವರು ಖಂಡಿಸಿದ್ದಾರೆ. ಇತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಾ ರಾಜೇಶ್ ದೇವ್ ಹಾಗೂ ಜೋಗಿಂದರ್ ರೇಶಿ ದೇವ್ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 

ಉಗ್ರರ ಭೀತಿ: ಕಾಶ್ಮೀರದಿಂದ ಹಿಂದೂಗಳ ಸಾಮೂಹಿಕ ಗುಳೆ!

ಕಳೆದ ಎರಡು ದಿನದಲ್ಲಿ ನಡೆಯುತ್ತಿರುವ 3ನೇ ದಾಳಿ ಇದಾಗಿದೆ. ಶನಿವಾರ ಶ್ರೀನಗರ ಹಾಗೂ ಪುಲ್ವಾಮದಲ್ಲಿ ನಾಗರೀಕರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಕಳೆದ 15 ದಿನಗಳಲ್ಲಿ ನಾಗರೀಕರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 11 ನಾಗರೀಕರು ಸಾವನ್ನಪ್ಪಿದ್ದಾರೆ.

ಅಕ್ಟೋಬರ್ 7 ರಂದು ಉಗ್ರರು ಶಾಲೆಯ ಪ್ರಿನ್ಸಿಪಾಲ್ ಹಾಗೂ ಶಿಕ್ಷಕನನ್ನು ಹತ್ಯೆ ಮಾಡಿದ್ದರು. ಎರಡು ದಿನಗಳ ಹಿಂದೆ ಉಗ್ರರ ದಾಳಿಯಲ್ಲಿ ಫಾರ್ಮಸಿ ಮಾಲೀಕ ಎಂಎಲ್ ಬಿಂದ್ರೋ ಸಾವನ್ನಪ್ಪಿದ್ದರು. ಬೀದಿ ಬದಿ ವ್ಯಾಪರಿ, ಟ್ಯಾಕ್ಸಿ ಚಾಲಕ ಸೇರಿದಂತೆ ಹಲವರನ್ನು ಉಗ್ರರು ಹತ್ಯೆ ಮಾಡಿದ್ದಾರೆ.

ಕುಲ್ಗಾಮ್ ಪ್ರದೇಶವನ್ನು ಸೇನೆ ಸುತ್ತುವರಿದಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಗಡಿಯಲ್ಲಿ ಒಳನುಸುಳುವಿಕೆ ನಡೆಯುತ್ತಿದ್ದರೆ, ಶ್ರೀನಗರ, ಪುಲ್ವಾಮಾ ಸೇರಿದಂತೆ ಹಲವು ಭಾಗಗಳಲ್ಲಿ ನಾಗರೀಕರನ್ನು ಗುರಿಯಾಸಿ ದಾಳಿ ನಡೆಯುತ್ತಲೇ ಇದೆ.

ಉಗ್ರರು ನಡೆಸಿದ ಈ ದಾಳಿ ನರಮೇಧಕ್ಕೆ ಸಮವಾಗಿದೆ. ಸತತ ದಾಳಿ ನಡೆಯುತ್ತಿದೆ. ಇದಕ್ಕೆ ಉಗ್ರರು ತಕ್ಕ ಬೆಲೆ ತೆರಬೇಕಾಗುತ್ತದೆ. ಕಾಶ್ಮೀರದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಶ್ಮೀರ ಬಿಜೆಪ್ ನಾಯಕ ಅಲ್ತಾಫ್ ಠಾಕೂರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?