ಅಗ್ರಿಲೀಫ್ ಮುಕುಟಕ್ಕೆ ಮತ್ತೊಂದು ಗರಿ: ರಾಷ್ಟ್ರ ಮಟ್ಟದ ಸ್ಪರ್ಧೆ, 10 ಲಕ್ಷ ನಗದು ಪ್ರಶಸ್ತಿ!

Published : May 18, 2025, 05:45 PM ISTUpdated : May 18, 2025, 07:26 PM IST
ಅಗ್ರಿಲೀಫ್ ಮುಕುಟಕ್ಕೆ ಮತ್ತೊಂದು ಗರಿ: ರಾಷ್ಟ್ರ ಮಟ್ಟದ ಸ್ಪರ್ಧೆ, 10 ಲಕ್ಷ ನಗದು ಪ್ರಶಸ್ತಿ!

ಸಾರಾಂಶ

ಪ್ಯಾಕಥಾನ್ ಸ್ಪರ್ಧೆ ಗೆದ್ದಿರುವುದಕ್ಕೆ  ಹರ್ಷ ವ್ಯಕ್ತಪಡಿಸಿರುವ ಅಗ್ರಿಲೀಫ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ರಾವ್,  ಬೆಳೆಯುತ್ತಿರುವ ನಮ್ಮ ಸ್ಟಾರ್ಟ್‌ಅಪ್‌ ಸಂಸ್ಥೆಯ ಆತ್ಮವಿಶ್ವಾಸವನ್ನು ಇದು ಮತ್ತಷ್ಟು ಬಲಪಡಿಸಿದೆ. 

ಝೊಮ್ಯಾಟೊ (Zomato) ಸಂಸ್ಥೆ  ಮೇ 7ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ, ರಾಷ್ಟ್ರ ಮಟ್ಟದ ಪ್ಲಾಸ್ಟಿಕ್ ಮುಕ್ತ ಫ್ಯೂಚರ್ ಪ್ಯಾಕಥಾನ್ ಸ್ಪರ್ಧೆಯ ಪ್ಯಾಕಿಂಗ್ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ರಥಮ ಸ್ಥಾನದೊಂದಿಗೆ 10 ಲಕ್ಷ ರೂ. ನಗದು ಪುರಸ್ಕಾರವನ್ನು ಪಡೆದುಕೊಂಡಿದೆ. ಆಹಾರ ವಿತರಣಾ ಉದ್ಯಮದಲ್ಲಿ ಸುಸ್ಥಿರ ಪಾರ್ಸೆಲ್  ವ್ಯವಸ್ಥೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಸ್ಟಾರ್ಟ್‌ಅಪ್ ಇಂಡಿಯಾ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (DPIIT) ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ಯಾಕಥಾನ್ ಸ್ಪರ್ಧೆ ಗೆದ್ದಿರುವುದಕ್ಕೆ  ಹರ್ಷ ವ್ಯಕ್ತಪಡಿಸಿರುವ ಅಗ್ರಿಲೀಫ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ರಾವ್,  ಬೆಳೆಯುತ್ತಿರುವ ನಮ್ಮ ಸ್ಟಾರ್ಟ್‌ಅಪ್‌ ಸಂಸ್ಥೆಯ ಆತ್ಮವಿಶ್ವಾಸವನ್ನು ಇದು ಮತ್ತಷ್ಟು ಬಲಪಡಿಸಿದೆ. ಉತ್ಪನ್ನದ ಅಭಿವೃದ್ಧಿಗೆ ಬೇಕಾಗಿರುವ ಉದ್ಯಮಗಳ ಅಗತ್ಯತೆಗಳ ಬಗ್ಗೆ ಈ ಸ್ಪರ್ಧಾ ವೇದಿಕೆ ಅಮೂಲ್ಯವಾದ ಮಾರ್ಗದರ್ಶನವನ್ನು ನಮಗೆ ನೀಡಿದೆ. ಪ್ಲಾಸ್ಟಿಕ್-ಮುಕ್ತ ಮತ್ತು ಆಹಾರ ವಿತರಣೆಗೆ ಸೂಕ್ತವಾದ ಪ್ಯಾಕೇಜಿಂಗ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿರುವ ಇತರೆ ಸ್ಟಾರ್ಟ್‌ಅಪ್‌ಗಳಿಂದಲೂ ಕಲಿಯಲು ಈ ವೇದಿಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ಯಾಕಥಾನ್ ನಲ್ಲಿ 21 ರಾಜ್ಯಗಳ 128 ಸಂಸ್ಥೆಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ 47 ಸ್ಟಾರ್ಟ್‌ಅಪ್‌ಗಳು ಮಹಿಳಾ ಉದ್ಯಮಿಗಳ ನೇತೃತ್ವದಲ್ಲಿದ್ದವು ಎನ್ನುವುದು ಉಲ್ಲೇಖಾರ್ಹ. ಆಹಾರ  ತಯಾರಿಕಾ ಮತ್ತು ವಿತರಣಾ   ಉದ್ಯಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿ, ಸಂಸ್ಥೆಗಳಿಗೆ ತಮ್ಮ ವೈಜ್ಞಾನಿಕ ನಾವೀನ್ಯತೆಗಳನ್ನು ಪ್ರದರ್ಶಿಸಲು 40 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಇದು ಉತ್ತಮ ವೇದಿಕೆಯಾಗಿ ಮಾರ್ಪಟ್ಟಿತ್ತು. ಟಾಪ್ 10 ಸ್ಟಾರ್ಟ್ ಅಪ್ ಗಳಲ್ಲಿ ಅಗ್ರಿಲೀಫ್ ಸಂಸ್ಥೆಯ ವಿಶಿಷ್ಟವಾದ ಪ್ಲಾಸ್ಟಿಕ್ ಮುಕ್ತ ಉತ್ಪನ್ನವನ್ನು ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ ಸೌಲಭ್ಯ ಪರಿಚಯಿಸಲು ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

ಪ್ಯಾಕಥಾನ್‌ ಸ್ಪರ್ಧೆಯಲ್ಲಿ ಅಗ್ರಿಲೀಫ್‌ ಸಂಸ್ಥೆಗೆ ಸಿಕ್ಕಿರುವ ಮಾನ್ಯತೆ ಹಾಗೂ ಪ್ರಶಸ್ತಿಯು ಆಹಾರ ವಿತರಣಾ ಉದ್ಯಮದಲ್ಲಿ ಸುಸ್ಥಿರ ಪ್ಯಾಕೇಜಿಂಗ್ ವ್ಯವಸ್ಥೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ, ಈ ಕ್ಷೇತ್ರದಲ್ಲಿ ಗಮನಾರ್ಹ ಪರಿಣಾಮ ಬೀರುವ ನವೀನ ವೈಜ್ಞಾನಿಕ ಸ್ಟಾರ್ಟ್‌ಅಪ್‌ಗಳ ಸಾಮರ್ಥ್ಯವನ್ನು ಕೂಡ ಸಾರಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!