ತುಂಡು ತುಂಡಾಗಿ ಕತ್ತರಿಸಿ ಹಾಕ್ತೀನಿ, ಹೋಗಿ ನನ್ನ ಬಗ್ಗೆ ಪ್ರಧಾನಿ ಬಳಿ ಕೇಳು: TTEಗೆ ಬೆದರಿಕೆ ಹಾಕಿದ ಮಹಿಳೆ

Published : May 18, 2025, 12:09 PM IST
ತುಂಡು ತುಂಡಾಗಿ ಕತ್ತರಿಸಿ ಹಾಕ್ತೀನಿ, ಹೋಗಿ ನನ್ನ ಬಗ್ಗೆ ಪ್ರಧಾನಿ ಬಳಿ ಕೇಳು: TTEಗೆ ಬೆದರಿಕೆ ಹಾಕಿದ ಮಹಿಳೆ

ಸಾರಾಂಶ

ರೈಲಿನಲ್ಲಿ ಟಿಕೆಟ್ ತೋರಿಸದೆ ಪ್ರಯಾಣಿಕ ಮತ್ತು ಟಿಟಿಇಗೆ ಬೆದರಿಕೆ ಹಾಕಿದ ಬುರ್ಖಾಧಾರಿ ಮಹಿಳೆ. ವೈರಲ್ ವಿಡಿಯೋದಲ್ಲಿ ಮಹಿಳೆ 'ಪ್ರಧಾನಿ ಬಳಿ ಕೇಳಿ' ಎಂದು ಗುಡುಗಿದ್ದಾರೆ.

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಬುರ್ಖಾದಾರಿ ಮಹಿಳೆಯೊಬ್ಬಳು ರೈಲಿನಲ್ಲಿ ಪ್ರಯಾಣಿಕ ಮತ್ತು ಟಿಟಿಇಗೆ ಬೆದರಿಕೆ ಹಾಕಿದ್ದಾಳೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಹಿಳೆ ಟಿಕೆಟ್ ತೋರಿಸಲು ನಿರಾಕರಿಸಿದ್ದಾಳೆ. ಈ ಸಂಬಂಧ ಟಿಟಿಇ ಮತ್ತು ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ಆರ್‌ಪಿಎಫ್ ಪೊಲೀಸರ ಮುಂದೆ ಮಹಿಳೆ ಸಹ ಪ್ರಯಾಣಿಕನಿಗೆ ಬೆದರಿಕೆ ಹಾಕೋದರ ಜೊತೆಯಲ್ಲಿ ಆತನ ಹಲ್ಲೆ ನಡೆಸಲು ಮುಂದಾಗಿದ್ದಳು. ನನ್ನ ಬಗ್ಗೆ ಹೋಗಿ ಪ್ರಧಾನ ಮಂತ್ರಿ ಬಳಿ ಕೇಳಿ ಎಂದು ಅಲ್ಲಿದ್ದ ಎಲ್ಲರ ಮುಂದೆ ಮಹಿಳೆ ಗುಡುಗಿದ್ದಾಳೆ. ಸದ್ಯ ಈ ಮಹಿಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗದಿಂದ ವೈರಲ್ ಆಗಿದೆ. 

ಈ ವಿಡಿಯೋವನ್ನು ಟೈಮ್ಸ್ ನೌ ತನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದೆ. ಆದರೆ ಈ ಘಟನೆ ಯಾವ ರೈಲಿನಲ್ಲಿ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು, ಮೊದಲು ಆಕೆಯನ್ನು ಭಾರತದಿಂದ ಹೊರಗೆ ಹಾಕಿ. ಎಲ್ಲರ ಮುಂದೆ ಜೀವ ಬೆದರಿಕೆ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ವೈರಲ್ ವಿಡಿಯೋದಲ್ಲಿ ಏನಿದೆ? 
ರೈಲಿನಲ್ಲಿ ಕುಳಿತಿದ್ದ ಮಹಿಳೆ, ಎದ್ದು ನಿಂತುಕೊಂಡಿದ್ದ ಪ್ರಯಾಣಿಕನ ಮೇಲೆ ಹಲ್ಲೆಗೆ ಮುಂದಾಗುತ್ತಾಳೆ. ಅಲ್ಲಿದ್ದವರು ಮೇಡಂ, ಮೇಡಂ ಅಂತ ಹೇಳುತ್ತಿದ್ದರೂ ಹಲ್ಲೆಗೆ ಮುಂದಾಗುತ್ತಾಳೆ. ಆ ಬಳಿಕ ಏನು ಅನ್ಕೊಂಡಿದ್ದೀಯಾ? ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ ಎಂದು ಅವಾಜ್ ಹಾಕಿ, ಬಂದು ಕುಳಿತುಕೊಳ್ಳುತ್ತಾಳೆ. ನಂತರ ತನ್ನ ಮುಂದೆ ಕುಳಿತಿದ್ದ ಟಿಟಿಇಗೆ ನನ್ನ ಬಳಿ ಟಿಕೆಟ್ ಇದೆ. ಆದ್ರೆ ನಾನು ತೋರಿಸಲ್ಲ. ನೀವೆಲ್ಲರೂ ಸೇರಿ ನನ್ನನ್ನು ತಮಾಷೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಾಳೆ. ನನ್ನನ್ನು ಸಾಮಾನ್ಯ ಎಂದು ತಿಳಿದುಕೊಂಡಿದ್ದೀರಾ? ಹೋಗಿ ನನ್ನ ಬಗ್ಗೆ ಪ್ರಧಾನ ಮಂತ್ರಿಗಳ ಬಳಿ ಕೇಳಿ ಎಂದು ಮಹಿಳೆ ಹೇಳುತ್ತಾಳೆ. 

ಇದನ್ನೂ ಓದಿ: ಗಡಿಯತ್ತ ಹೊರಟಿದ್ದ ಸೈನಿಕನ ಬಳಿ ಲಂಚ ಕೇಳಿದ TTE: ಮುಂದೇನಾಯ್ತು ಅಂತ ವಿಡಿಯೋ ನೋಡಿ

ಮಹಿಳೆ ಇಷ್ಟು ಕೂಗಾಡುತ್ತಿದ್ದಂತೆ ಆಕೆಯ ಮುಂದಿನ ಆಸನದಲ್ಲಿ ಕುಳಿತಿದ್ದ ಟಿಟಿಇ ಎದ್ದು ಬರುತ್ತಾರೆ. ಈ ಗಲಾಟೆ ನಡೆಯುತ್ತಿರುವ ಸಂದರ್ಭದಲ್ಲಿ ಆರ್‌ಪಿಎಫ್ ಸಿಬ್ಬಂದಿ ಇರೋದನ್ನು ಗಮನಿಸಬಹುದು. ಪೊಲೀಸರ ಮುಂದೆ ಬುರ್ಖಾದಾರಿ ಮಹಿಳೆ ಇಷ್ಟೆಲ್ಲಾ ಅವಾಜ್ ಹಾಕಿದ್ದಾಳೆ. 

ನೆಟ್ಟಿಗರಿಂದ ಆಕ್ರೋಶ
ರೈಲಿನಲ್ಲಿ ಪ್ರಯಾಣಿಸುವಾಗ ಟಿಟಿಇ ಬಂದಾಗ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ಆದ್ರೆ ಈ ಮಹಿಳೆ ನಿಯಮವನ್ನು ಉಲ್ಲಂಘಿಸಿದ್ದಾಳೆ. ಇದರ ಜೊತೆಗೆ ಎಲ್ಲರೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ. ಹಾಗಾಗಿ ಆಕೆಯನ್ನು ಕೂಡಲೇ ಬಂಧಿಸಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಯಾವ ಮಾರ್ಗದ ರೈಲಿನಲ್ಲಿ ನಡೆದ ಘಟನೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಬಳಿಕ ಮುಂದೇನಾಯ್ತು ಎಂಬುದರ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆರಡು ರೈಲು ಹೊಸ ಯೋಜನೆ; ಉಕ್ಕಿನ ನಗರಿಗೆ ವೈಭವದ ಗರಿ, ಬಡ ಜಿಲ್ಲೆಗೆ ಆರ್ಥಿಕ ಸಿರಿ!

ಇತ್ತೀಚೆಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಸೈನಿಕನ ಬಳಿ ಟಿಕೆಟ್ ಪರಿಶೀಲಕ ಲಂಚ ಕೇಳಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಲಂಚ ಕೇಳಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸೈನಿಕ ತುರ್ತಾಗಿ ಗಡಿಗೆ ತೆರಳಬೇಕಿದ್ದರಿಂದ ಸಾಮಾನ್ಯ ಟಿಕೆಟ್ ಪಡೆದಿದ್ದರು. ಅಗ್ನಿವೀರ ಯೋಧನ ಬಳಿ ಟಿಟಿಇ ಲಂಚ ಪಡೆದುಕೊಂಡಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ