
ನವದೆಹಲಿ(ಅ.10): ದೇಶಾದ್ಯಂತ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಚೆಕ್ ನೀಡಿರುವ ವ್ಯಕ್ತಿಯ ಒಂದು ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೇ ಹೋದರೆ ಆತನ ಇನ್ನೊಂದು ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವುದು ಸೇರಿದಂತೆ ಹಲವು ಪ್ರಸ್ತಾವಗಳ ಜಾರಿಗೆ ಪರಿಶೀಲನೆ ನಡೆಸುತ್ತಿದೆ.
ಹಾಲಿ ದೇಶದ ವಿವಿಧ ಕೋರ್ಟ್‌ಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಚೆಕ್ ಬೌನ್ಸ್ ಪ್ರಕರಣಗಳಿವೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ಇವುಗಳ ವಿಚಾರಣೆ ಸಾಧ್ಯವಾಗದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂದು ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ಕೋರ್ಚ್ ಸ್ಥಾಪನೆ ಬಗ್ಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಇಂಥ ಪ್ರಕರಣಗಳ ನಿರ್ವಹಣೆ ಕುರಿತು ಸಲಹೆ ಪಡೆಯಲು ಉನ್ನತ ಮಟ್ಟದ ಸಭೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಹಲವು ಮಹತ್ವದ ಸಲಹೆಗಳು ವ್ಯಕ್ತವಾಗಿವೆ.
Check Bounce: ನಟಿ ಜೀವಿತಾ ರಾಜಶೇಖರ್ ವಿರುದ್ಧ ಜಾಮೀನು ರಹಿತ ವಾರಂಟ್
ಸಮಿತಿ ನೀಡಿದ ಸಲಹೆಗಳು:
ಚೆಕ್ ನೀಡಿದ ವ್ಯಕ್ತಿಯ ಒಂದು ಬ್ಯಾಂಕ್‌ನಲ್ಲಿ ಹಣ ಇಲ್ಲದೇ, ಅದು ಬೌನ್ಸ್ ಆಗುವ ಪರಿಸ್ಥಿತಿ ಬಂದರೆ ಆಗ ಆತನದ್ದೇ ಇನ್ನೊಂದು ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವುದು. ಚೆಕ್ ಬೌನ್ಸ್ ಅನ್ನು ಸಾಲ ಮರುಪಾವತಿಗೆ ವಿಫಲ ಎಂದು ಪರಿಗಣಿಸುವುದು. ಈ ಮಾಹಿತಿಯನ್ನು ರೇಟಿಂಗ್ ಏಜೆನ್ಸಿಗೆ ರವಾನಿಸಿ ಅವರ ಕ್ರೆಡಿಟ್ ರೇಟಿಂಗ್ ಕಡಿಮೆಗೊಳಿಸಲು ಕ್ರಮ.
ಈ ಪ್ರಸ್ತಾವಗಳ ಬಗ್ಗೆ ಕಾನೂನು ಸಚಿವಾಲಯದ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ಒಂದು ವೇಳೆ ಈ ಪ್ರಸ್ತಾವಗಳು ಕಾಯ್ದೆ ರೂಪ ಪಡೆದು ಜಾರಿಗೆ ಬಂದರೆ, ಖಾತೆಯಲ್ಲಿ ಹಣ ಇಲ್ಲದೇ ಇದ್ದರೂ ಚೆಕ್ ನೀಡಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜೊತೆಗೆ ಚೆಕ್ ಸ್ವೀಕರಿಸಿದ್ದವರು, ಪ್ರಕರಣದ ಕುರಿತು ಕೋರ್ಚ್ ಮೆಟ್ಟಿಲೇರದೇ ತಮ್ಮ ಹಣವನ್ನು ಪಡೆದುಕೊಳ್ಳುವ ಅವಕಾಶ ಲಭ್ಯವಾಗಲಿದೆ. ಉದ್ಯಮ ಸ್ನೇಹಿ ವಾತಾವರಣ ರಚನೆಗೆ ಮತ್ತಷ್ಟುನೆರವಾಗಲಿದೆ. ಉದ್ದೇಶಪೂರ್ವಕವಾಗಿ ವಂಚನೆ ಮಾಡುವವರ ಅಟಾಟೋಪಕ್ಕೆ ಕೊನೆ ಬೀಳಲಿದೆ.
2 ಪ್ರಮುಖ ಶಿಫಾರಸು
1. ಚೆಕ್ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೇ ಅದು ಬೌನ್ಸ್ ಆಗುವ ಪರಿಸ್ಥಿತಿ ಬಂದರೆ ಆಗ ಆತನದ್ದೇ ಇನ್ನೊಂದು ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿ ಪಾವತಿಸುವುದು.
2. ಚೆಕ್ ಬೌನ್ಸ್ ಅನ್ನು ಸಾಲ ಮರುಪಾವತಿಗೆ ವಿಫಲ ಎಂದು ಪರಿಗಣಿಸುವುದು. ಈ ಮಾಹಿತಿಯನ್ನು ರೇಟಿಂಗ್ ಏಜೆನ್ಸಿಗೆ ರವಾನಿಸಿ ಅವರ ಕ್ರೆಡಿಟ್ ರೇಟಿಂಗ್ ಕಡಿಮೆಗೊಳಿಸಲು ಕ್ರಮ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ