ಕಾಶಿ ಕಾರಿಡಾರ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ನವೀಕೃತ ಉಜ್ಜಯಿನಿ ದೇಗುಲವನ್ನು ಇಂದು ಲೋಕಾರ್ಪಣೆಗೊಳಿಸಲಾಗುತ್ತಿದೆ. 856 ಕೋಟಿ ರೂ. ವೆಚ್ಚದಲ್ಲಿ ರೂಪಾಂತರಗೊಂಡಿದ್ದು, ಇದನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಉಜ್ಜಯಿನಿ: 856 ಕೋಟಿ ರೂ. ವೆಚ್ಚದ ಮಧ್ಯಪ್ರದೇಶದ (Madhya Pradesh) ‘ಮಹಾಕಾಲೇಶ್ವರ ದೇವಾಲಯ’ (Mahalaleshwar Temple) ಕಾರಿಡಾರ್ (Corridor) ಅಭಿವೃದ್ಧಿ ಯೋಜನೆಯ ಮೊದಲ ಹಂತದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ನೆರವೇರಿಸಲಿದ್ದಾರೆ. ಇದರಿಂದಾಗಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ (Jyotirling) ಒಂದಾದ ಉಜ್ಜಯಿನಿಯಲ್ಲಿ ಪ್ರವಾಸೋದ್ಯಮ (Tourism) ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಮಹಾಕಾಲ ಲೋಕ ಕಾರಿಡಾರ್‌ನ ಮುಖ್ಯಗೇಟ್ ವೇ ‘ನಂದಿ ದ್ವಾರ’ದ (Nandi Dwaar) ಕೆಳಗೆ ಬೃಹತ್ ಶಿವಲಿಂಗವನ್ನು (Shivling) ಪವಿತ್ರ ದಾರ (ಮೋಲಿ)ಯಿಂದ ಸುತ್ತಿ ಮುಚ್ಚಿಡಲಾಗಿದೆ. ಈ ಕಾರಿಡಾರ್ ಉದ್ಘಾಟನೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಈ ಶಿವಲಿಂಗವನ್ನು ಅನಾವರಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಮೋದಿ ಮಂಗಳವಾರ ಸಾಯಂಕಾಲ 5:30 ಗಂಟೆಗೆ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ ಎಂದು ಮಧ್ಯಪ್ರದೇಶ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ದಾರೆ. ಬಳಿಕ ಅವರು ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿ ಪೂಜೆ ನೆರವೇರಿಸಲಿದ್ದಾರೆ. ಕಾರಿಡಾರ್‌ಗೆ ಚಾಲನೆ ನೀಡಿದ ನಂತರ ಕಾರ್ತಿಕ ಮೇಳವನ್ನು ಆಯೋಜಿಸಲಾಗಿದ್ದು, ಖ್ಯಾತ ಗಾಯಕ ಕೈಲಾಶ್ ಖೇರ್ ‘ಜೈ ಶ್ರೀ ಮಹಾಕಾಲ್’ ಎಂಬ ಶಿವಸ್ತುತಿಯನ್ನು ಹಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
undefined
ಇದನ್ನು ಓದಿ: ಅಕ್ಟೋಬರ್ 11 ರಂದು Ujjain ಮಹಾಕಾಲ ಲೋಕ ಉದ್ಘಾಟನೆ: ಪ್ರಧಾನಿ Modiಯಿಂದ ಲೋಕಾರ್ಪಣೆ
‘ಮಹಾಕಾಲ ಲೋಕ’ ವಿಶೇಷತೆ
* 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮಹಾಕಾಲವೂ ಒಂದು
* ಇದರ ಜಾಗ ಇಕ್ಕಟ್ಟಿನಿಂದ ಕೂಡಿತ್ತು. ಭಕ್ತರು ಓಡಾಡುವುದು ಬಹಳ ಕಷ್ಟವಾಗುತ್ತಿತ್ತು
* ಇದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ 2017 ರಲ್ಲಿ ಕಾಮಗಾರಿ ಆರಂಭಿಸಲಾಯಿತು
* 856 ಕೋಟಿ ರೂ. ವೆಚ್ಚದ 1ನೇ ಹಂತದ ಕಾಮಗಾರಿ ಪೂರ್ಣ
* ಅಭಿವೃದ್ಧಿ ಯೋಜನೆಯಿಂದಾಗಿ ದೇಗುಲದ ವಿಸ್ತೀರ್ಣ 2.87 ರಿಂದ 47 ಹೆಕ್ಟೇರ್‌ಗೆ ಹೆಚ್ಚಾಗಿದೆ
* ದೇಶದಲ್ಲೇ ಅತಿ ಉದ್ದದಾದ 900 ಮೀಟರ್ ಕಾರಿಡಾರ್ ಅನ್ನು ನಿರ್ಮಾಣ ಮಾಡಲಾಗಿದೆ
* ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳೂ ಸಂಚರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ
* ಶಿವ ಪುರಾಣ ಆಧರಿಸಿ ಕಾರಿಡಾರ್‌ನ ಪ್ರಾರಂಭದಲ್ಲಿ 2 ಬೃಹತ್ ಹೆಬ್ಬಾಗಿಲು ಸೃಷ್ಟಿ
* ರಾಜಸ್ಥಾನದ ಮರಳುಕಲ್ಲುಗಳನ್ನು ಬಳಸಿ 3 ರಾಜ್ಯಗಳ ಕಲಾವಿದರಿಂದ ಕೆತ್ತನೆ ಕೆಲಸ
* ಪ್ರವಾಸಿಗರಿಗಾಗಿ ಪಾರ್ಕಿಂಗ್ ವ್ಯವಸ್ಥೆ ಸೇರಿ ವಿವಿಧ ಸೌಕರ್ಯ