ಒಂದೆಡೆ ರಷ್ಯಾ ಉಕ್ರೇನ್ ಮೇಲೆ ಭೀಕರವಾಗಿ ದಾಳಿ ಮಾಡಿ ಉಕ್ರೇನ್‌ನಲ್ಲಿ ಭಾರಿ ಸಾವು ನೋವಿಗೆ ಕಾರಣವಾಗಿದೆ. ಈ ಮಧ್ಯೆ ಅನಾಮಧೇಯ ಹ್ಯಾಕರ್‌ಗಳು ರಷ್ಯಾದ ವಿರುದ್ಧ ಸೈಬರ್ ಯುದ್ಧವನ್ನು ಘೋಷಿಸಿದ್ದಾರೆ. ಸರ್ಕಾರಿ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಹ್ಯಾಕರ್‌ಗಳು ರಷ್ಯಾದ ಸರ್ಕಾರಿ ವೆಬ್‌ಸೈಟ್‌ಗಳಾದ ದ ಕ್ರೆಮ್ಲಿನ್, ದ ಡುಮಾ ಹಾಗೂ ರಷ್ಯಾದ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಮುಂದುವರೆಸುತ್ತಿರುವಂತೆಯೇ, ಪ್ರಸಿದ್ಧ ಹ್ಯಾಕರ್ ಗ್ರೂಪ್ 'ಅನಾನಿಮಸ್' (ಅನಾಮಧೇಯ) ರಷ್ಯಾದ ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದು ಈ ಮೂಲಕ ಯುದ್ಧ ಪೀಡಿತ ಉಕ್ರೇನ್ ದೇಶಕ್ಕೆ ಸಹಾಯ ಮಾಡುವಲ್ಲಿ ತನ್ನ ಕೈಲಾದಷ್ಟು ಕೆಲಸ ಮಾಡುತ್ತಿದೆ. ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು ಪ್ರಾರಂಭವಾದಾಗ ಅನಾಮಧೇಯ ಹ್ಯಾಕರ್ ಗ್ರೂಪ್ ಸಂಘಟಿತವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತದ ವಿರುದ್ಧ 'ಸೈಬರ್ ಯುದ್ಧ'ವನ್ನು ಅಧಿಕೃತವಾಗಿ ಘೋಷಿಸಿದೆ. ಈ ಹ್ಯಾಕರ್ ಗ್ರೂಪ್ ಅಧಿಕೃತವಾಗಿ ರಷ್ಯಾದ ಸರ್ಕಾರದ ವಿರುದ್ಧ ಸೈಬರ್ ಯುದ್ಧ ನಡೆಸುತ್ತಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
undefined
Ukraine Russia Crisis: ಝೆಲೆನ್‌ಸ್ಕೀ ರಕ್ಷಣೆಗೆ ಅಮೆರಿಕಾ ಯತ್ನ, ದೇಶ ಬಿಡಲು ಅಧ್ಯಕ್ಷ ನಕಾರ
ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಹಲವಾರು ರಷ್ಯಾದ ಸರ್ಕಾರಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸುವುದು ಹ್ಯಾಕರ್‌ಗಳ ಸಾಮೂಹಿಕ ಗುರಿಯಾಗಿದೆ.
ಈ ಹ್ಯಾಕರ್ ಗುಂಪು ಈಗಾಗಲೇ ರಷ್ಯಾದ ಹಲವಾರು ಸರ್ಕಾರಿ ವೆಬ್‌ಸೈಟ್‌ಗಳನ್ನು ತೆಗೆದುಹಾಕಿದೆ ಎಂದು ಹೇಳಿಕೊಂಡಿದೆ. ರಷ್ಯಾದ ಸರ್ಕಾರದ ನಿಯಂತ್ರಣದಲ್ಲಿರುವ ಅಂತರಾಷ್ಟ್ರೀಯ ದೂರದರ್ಶನ ಜಾಲವಾದ RT.com ಕೂಡ ಈ ಸೈಬರ್ ದಾಳಿಗೆ ಗುರಿಯಾಗಿದೆ ಎಂದು ತಿಳಿದು ಬಂದಿದೆ.
ಈ ಅನಾನಿಮಸ್ ಹ್ಯಾಕರ್‌ಗಳು ರಷ್ಯಾದ ಪ್ರಚಾರ ಚಾನಲ್ ಆಗಿರುವ ಆರ್ಟಿ ನ್ಯೂಸ್‌ನ (RT.com) ವೆಬ್‌ಸೈಟ್ ಅನ್ನು ತೆಗೆದುಹಾಕಿದೆ ಎಂದು ಅದು ಟ್ವೀಟ್‌ನಲ್ಲಿ ತಿಳಿಸಿದೆ, RT.com ಹ್ಯಾಕ್ ಆಗಿರುವುದನ್ನು ಅದು ದೃಢೀಕರಿಸಿದೆ. ಮೂಲಗಳ ಪ್ರಕಾರ, RT.com ಮತ್ತು ಹಲವಾರು ಇತರ ವೆಬ್‌ಸೈಟ್‌ಗಳನ್ನು ವ್ಯಾಪಕ ನಿರಾಕರಣೆ-ಸೇವೆ (DDoS) ದಾಳಿಯಲ್ಲಿ ಗುರಿಪಡಿಸಲಾಗಿದೆ. ಆದಾಗ್ಯೂ, ವೆಬ್‌ಸೈಟ್ ಅಥವಾ ಆರ್‌ಟಿ ಸುದ್ದಿ ಹ್ಯಾಕ್ ಆದ ಸ್ವಲ್ಪ ಸಮಯದಲ್ಲೇ ಮತ್ತೆ ಆನ್‌ಲೈನ್‌ಗೆ ಮರಳಿದೆ. ರಷ್ಯಾ ಸರ್ಕಾರದ ವೆಬ್‌ಸೈಟ್‌ಗಳಾದ, ಕ್ರೆಮ್ಲಿನ್, ಡುಮಾ ಮತ್ತು ರಕ್ಷಣಾ ಸಚಿವಾಲಯವು ಹ್ಯಾಕರ್‌ಗಳ ಸಾಮೂಹಿಕ ಸೈಬರ್ ದಾಳಿಗೆ ತುತ್ತಾಗಿವೆ.
Russia Ukraine Crisis- ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪತ್ನಿ ಮತ್ತು ಮಕ್ಕಳ ಪೋಟೋ!
ಈ ಹ್ಯಾಕರ್ ಗ್ಯಾಂಗ್ ಗುರಿಪಡಿಸಿದ ವೆಬ್‌ಸೈಟ್‌ಗಳು ನಿಧಾನವಾಗುತ್ತವೆ ಮತ್ತು ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ದೀರ್ಘಕಾಲದವರೆಗೆ ಆಫ್‌ಲೈನ್‌ನಲ್ಲಿವೆ ಎಂದು ಹಲವಾರು ಬಳಕೆದಾರರು ವರದಿ ಮಾಡಿದ್ದಾರೆ. ಈ ಅನಾನಿಮಸ್ ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಟ್ವೀಟ್‌ಗಳ ಸರಣಿಯಲ್ಲಿ, ಉಕ್ರೇನ್ ವಿರುದ್ಧ ಪುಟಿನ್ ಅವರ ಇತ್ತೀಚಿನ ಕ್ರಮಗಳನ್ನು ವಿರೋಧಿಸುವುದಾಗಿ ಗುಂಪು ಸ್ಪಷ್ಟಪಡಿಸಿದೆ.
ಇತ್ತ ಉಕ್ರೇನ್ ರಾಜಧಾನಿಯತ್ತ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಕೀವ್‌ನಲ್ಲಿರುವ ಅಧ್ಯಕ್ಷನನ್ನು ಸೆರೆ ಹಿಡಿಯುವ ಸಾಧ್ಯತೆ ಇದೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕೀ ರಕ್ಷಣೆಗೆ ಅಮೆರಿಕಾ ಮುಂದಾಗಿದೆ. ಅವರ ಸ್ಥಳಾಂತರಕ್ಕೆ ಮುಂದಾಗಿದ್ದು, ದೇಶ ಬಿಡಲು ಝೆಲೆನ್‌ಸ್ಕೀ ಹಿಂದೇಟು ಹಾಕಿದ್ದಾರೆ. 'ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಇಲ್ಲಿದ್ದೇವೆ. ನಾವು ರಷ್ಯಾವನ್ನು ಎದುರಿಸುತ್ತಿದ್ದೇವೆ, ರಷ್ಯಾದ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಎಂದು ಝೆಲೆನ್‌ಸ್ಕೀ, ಜನತೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.