
ಬೆಂಗಳೂರು(ಫೆ.26): ಮೋದಿ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ನಾಯಕರು ದೇಶದ ವಿದೇಶಾಂಗ ನೀತಿಯನ್ನೇ ಸರಿಯಿಲ್ಲ ಎಂದಿದ್ದಾರೆ. ರಷ್ಯಾ ಉಕ್ರೇನ್ ಬಿಕ್ಕಟ್ಟು ವಿಚಾರವಾಗಿ ಭಾರತದ ನಿರ್ಧಾರ ತಪ್ಪು ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ವಿದೇಶಾಂಗ ನೀತಿ ಸಂಪೂರ್ಣ ಹದಗೆಟ್ಟಿದೆ. ವಿಶ್ವಸಂಸ್ಥೆಯಲ್ಲಿ ನಿನ್ನೆ ಭಾರತ ನಡೆದುಕೊಂಡ ನಿಲುವು ತಪ್ಪು. ಭಾರತ ತನ್ನ ನಿಲುವು ಸ್ಪಷ್ಟವಾಗಿ ಹೇಳಬೇಕಿತ್ತು. ಅದು ಬಿಟ್ಟು ಗೈರಾಗಿದ್ದು ಸರಿಯಲ್ಲ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ನಮ್ಮದು ಶಾಂತಿಯುತ ದೇಶ. ಅ ವಿಚಾರವನ್ನು ಭಾರತ ಪ್ರಸ್ತಾಪ ಮಾಡಬೇಕಿತ್ತು. ತನ್ನ ನಿಲುವನ್ನು ವಿಶ್ವಸಂಸ್ಥೆಯಲ್ಲಿ ಬಹಿರಂಗವಾಗಿ ಹೇಳಬೇಕಿತ್ತು. ಆದರೆ ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದ ಕಾಂಗ್ರೆಸ್, ಮೋದಿ ವಿರೋಧಿಸುವ ಭರದಲ್ಲಿ ವಿದೇಶಾಂಗ ನೀತಿಯೇ ಸರಿಯಿಲ್ಲ ಎಂದಿದ್ದು, ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಅಲ್ಲದೇ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಕಾಲದ ಆಲಿಪ್ತ ನೀತಿ ಬಗ್ಗೆ ಪ್ರಸ್ತಾಪಿಸಿದೆ.
Ukraine Russia Crisis: ಬಂಕರ್‌ಗಳಲ್ಲಿ ಜನರಿಗೆ ಊಟವೂ, ನೀರೂ ಇಲ್ಲ, ರಕ್ಷಣೆಗಾಗಿ ಕನ್ನಡಿಗರ ಮೊರೆ
ಕಾಂಗ್ರೆಸ್ ಮತ್ತೊಬ್ಬ ಮುಖಂಡ ಪರಿಷತ್ ವಿಪಕ್ಷ ನಾಯಕ ಹರಿ ಪ್ರಸಾದ್ ಮಾತನಾಡಿ, ಭಾರತ ಸರ್ಕಾರ ಭಾರತೀಯರ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಆದಂತೆ ಭಾರತೀಯರ ರಕ್ಷಣೆಯಲ್ಲಿ ಭಾರತ ವಿಫಲವಾಗಿದೆ. ಸರ್ಕಾರ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡ್ತಿದೆ ಎಂದು ಆರೋಪಿಸಿದ್ದಾರೆ.
Russia Ukraine Crisis: ರಷ್ಯಾ ತಡೆಗೆ ಉಕ್ರೇನ್ ತಂತ್ರ, ನಾಗರಿಕರ ಕೈಗೆ ಶಸ್ತ್ರಾಸ್ತ್ರ!
ಉಕ್ರೇನ್‌ನಿಂದ ಈಗಾಗಲೇ 4000 ಭಾರತೀಯರು ವಾಪಸ್ ಆಗಿದ್ದಾರೆ. ಇನ್ನೂ ಕೂಡ ಉಕ್ರೇನ್‌ನಲ್ಲಿ 16000 ಭಾರತೀಯರು ನೆಲೆಸಿದ್ದಾರೆ ಅಂತ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ವಿ. ಮುರಳೀಧರನ್ ಮಾಹಿತಿ ನೀಡಿದ್ದಾರೆ. ಯುದ್ಧದ ವಾತಾವರಣ ಕಂಡು ಬರುತ್ತಿದ್ದಂತೆ ಗೈಡ್‌ಲೈನ್ಸ್ ಪ್ರಕಟಗೊಳಿಸಲಾಯಿತು. ಉಕ್ರೇನ್‌ನಲ್ಲಿ 16000 ಭಾರತೀಯರನ್ನ ಕರೆತರಲು ಯತ್ನಿಸಲಾಗುತ್ತಿದೆ. ಉಕ್ರೇನ್ ಪಕ್ಕದ ರಾಷ್ಟ್ರಗಳ ಜೊತೆ ಭಾರತ ಸರ್ಕಾರ ಮಾತುಕತೆ ನಡೆಸಿದೆ. ವಾಯುಗಡಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಭೂಸಾರಿಗೆ ಬಳಕೆ ಮಾಡಲಾಗುತ್ತದೆ ಹಂಗೇರಿ, ಸ್ಲೋವಾಕಿಯಾ ಗಡಿಗಳ ಮೂಲಕ ಭಾರತೀಯರನ್ನ ಕರೆತರುವಂತ ಪ್ರಯತ್ನ ನಡೆಯುತ್ತಿದೆ ಅಂತ ಮಾಹಿತಿ ನೀಡಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ, ಯಾವಾಗ ಬಾಂಬ್ ಬೀಳುತ್ತೋ, ಏನಾಗಲಿದೆಯೋ ಎಂಬ ಭಯದಲ್ಲೇ ಜನರು ಕಳೆಯುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಭೀಕರತೆ ಹೆಚ್ಚುತ್ತಿದೆ. ಬಂಕರ್‌ಗಳಲ್ಲಿ ಜನರು ರಕ್ಷಣೆ ಪಡೆಯುತ್ತಿದ್ದಾರೆ. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಇಲ್ಲವಾಗಿದೆ. ಉಕ್ರೇನ್ ಪೂರ್ವ ಭಾಗದಲ್ಲಿ ಜನರ ರಕ್ಷಣೆ ಕಷ್ಟ ಕಷ್ಟ ಎನ್ನುವಂತಾಗಿದೆ. ಇಲ್ಲಿ ಸಾವಿರಾರು ಕನ್ನಡಿಗರು ಇದ್ದು, ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
ಕಳೆದ ಎರಡು ದಿನಗಳಿಂದ ರಷ್ಯಾ ನಡೆಸಿದ ವೈಮಾನಿಕ, ಕ್ಷಿಪಣಿ ದಾಳಿಗಳಲ್ಲಿ ರಷ್ಯಾದ 10ಕ್ಕೂ ಹೆಚ್ಚು ಪ್ರಮುಖ ನಗರಗಳು ಭಾರೀ ಹಾನಿಗೆ ತುತ್ತಾಗಿವೆ. ಈ ನಗರಗಳನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ, ಅವುಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದೆ.
ರಷ್ಯಾ ಮತ್ತು ಉಕ್ರೇನ್ (Russian Ukraine Crisis) ಯುದ್ಧದಿಂದ (War) ಇಡೀ ಜಗತ್ತೇ ಆತಂಕಕ್ಕೆ ಒಳಗಾಗಿದೆ. ರಷ್ಯಾ ಸೇನೆಯನ್ನು ತಡೆಯಲು ಉಕ್ರೇನ್ ಹೊಸ ಕ್ರಮ ತೆಗೆದುಕೊಂಡಿದೆ. ತನ್ನ ದೇಶದ ನಾಗರಿಕರನ್ನೇ ಯುದ್ಧಕ್ಕೆ ಅಣಿ ಮಾಡಿದೆ.ನಾಗರಿಕರಿಗೆ ರಸ್ತೆಯಲ್ಲೇ ಶಸ್ತ್ರಾಸ್ತ್ರ (Weapons ) ಹಂಚಿಕೆ ಮಾಡಿದೆ. ರೆಡಿಯೋ ಯೂ ಟ್ಯೂಬ್ ಮೂಲಕ ತರಬೇತಿ ನೀಡಲಾಗುತ್ತಿದೆ. ಪೆಟ್ರೋಲ್ (Petrol Bomb) ಬಾಂಬ್ ಮಾದರಿಯ ತಯಾರಿಕೆ ಬಹಿರಂಗವಾಗಿಯೇ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ