ಟಿವಿ ಲೈವ್‌ ಶೋನಲ್ಲಿ ಮಾತನಾಡುವಾಗಲೇ ಕುಸಿದು ಬಿದ್ದು ಸಾವು ಕಂಡ ಕೃಷಿ ತಜ್ಞ!

By Santosh NaikFirst Published Jan 13, 2024, 8:21 PM IST
Highlights

59 ವರ್ಷದ ಅನಿ ಎಸ್ ದಾಸ್ ಅವರು ಕೇರಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಯೋಜನಾ ವಿಭಾಗದ ನಿರ್ದೇಶಕರಾಗಿದ್ದರು.
 

ಕೊಚ್ಚಿ (ಜ.13): ಕೇರಳದ ದೂರದರ್ಶನ ಚಾನೆಲ್‌ನಲ್ಲಿ ಲೈವ್ ಶೋ ವೇಳೆ ಕೃಷಿ ತಜ್ಞ ಹಠಾತ್‌ ಆಗಿ ಸಾವಿಗೀಡಾಗಿದ್ದಾರೆ. ಮೃತರನ್ನು 59 ವರ್ಷದ ಡಾ.ಅನಿ ಎಸ್ ದಾಸ್  ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ಅಂದರೆ ಜನವರಿ 12 ರಂದು ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶುಕ್ರವಾರ ಸಂಜೆ 6.30ರ ಸುಮಾರಿಗೆ ದೂರದರ್ಶನದ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಾ.ಅನಿ ದಾಸ್‌ ಬಂದಿದ್ದರು ಎಂದು ಹೇಳಲಾಗಿದೆ.  ಕಾರ್ಯಕ್ರಮದ ನಿರೂಪಕರು ಅವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸುತ್ತಿರುವಾಗ ಅನಿ ದಾಸ್‌ ಇದ್ದಕ್ಕಿದ್ದಂತೆ ಮೌನವಾದರು ಮತ್ತು ಕುರ್ಚಿಗೆ ಒರಗಿದರು. ಇದಾದ ನಂತರ ನಿರೂಪಕರು ತಕ್ಷಣವೇ ಪ್ರಸಾರವನ್ನು ನಿಲ್ಲಿಸುವಂತೆ ಕೇಳಿಕೊಂಡರು. ಚಾನೆಲ್ ಸಿಬ್ಬಂದಿಯ ಸಹಾಯದಿಂದ ತಜ್ಞರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವ ವೇಳೆಗಾಗಲೇ ಅವರು ಸಾವು ಕಂಡಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.  ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಯಾವುದಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

 

ಗಂಡ 9 ಲಕ್ಷ ದುಡಿತಾನೆ: ನಿರ್ವಹಣೆಗೆ ತಿಂಗಳಿಗೆ 2.5 ಲಕ್ಷ ಕೊಡ್ಬೇಕು : ಮಗನನ್ನೇ ಕೊಂದ ಲೇಡಿ ಸಿಇಒ

ಕೇರಳ ಕೃಷಿ ವಿವಿ ಪ್ರಾಧ್ಯಾಪಕರಾಗಿದ್ದರು: ಡಾ. ಅನಿ ಎಸ್ ದಾಸ್ ಕೊಲ್ಲಂ ಜಿಲ್ಲೆಯ ನಿವಾಸಿಯಾಗಿದ್ದರು. ಅವರು ಕೇರಳ ಜಾನುವಾರು ಅಭಿವೃದ್ಧಿ ಮಂಡಳಿಯ (ಕೆಎಲ್‌ಡಿಬಿ) ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಜೈವಿಕ ಸಂಪನ್ಮೂಲಗಳು ಮತ್ತು ಕೃಷಿ ಸೇವೆಗಳ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಇದಲ್ಲದೆ, ಅವರು ಕೇರಳ ಕೃಷಿ ವಿಶ್ವವಿದ್ಯಾಲಯದ ಮನ್ನುತಿ ಸಂವಹನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ದೂರದರ್ಶನದಲ್ಲಿ ಆಗಾಗ ಕೃಷಿ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪರಿಣಿತರಾಗಿ ಭಾಗವಹಿಸುತ್ತಿದ್ದರು.

Photos: ನೀವೆಷ್ಟೇ ಲಕ್ಷ ಖರ್ಚು ಮಾಡಿದ್ರೂ, ಲಕ್ಷದ್ವೀಪದ ಸೌಂದರ್ಯ ನಿಮಗೆಲ್ಲೂ ಸಿಗದು..

click me!