ನಮ್ಮನ್ನು ಬೆದರಿಸಲು ಯಾರಿಗೂ ಪರವಾನಗಿ ನೀಡಿಲ್ಲ, ಪರೋಕ್ಷವಾಗಿ ಭಾರತ ವಿರುದ್ಧ ಗುಡುಗಿದ ಮಾಲ್ಡೀವ್ಸ್!

By Suvarna NewsFirst Published Jan 13, 2024, 6:53 PM IST
Highlights

ಭಾರತ ಹಾಗೂ ಮಾಲ್ಡೀವ್ಸ್ ಸಮರ ಒಂದು ಹಂತಕ್ಕೆ ಬ್ರೇಕ್ ಬಿದ್ದಿದೆ ಅನ್ನುವಷ್ಟರಲ್ಲೇ ಮತ್ತೆ ಆರಂಭಗೊಂಡಿದೆ. ಭಾರತ ಕೆಣಕಿದ ಮೂವರು ಮಾಲ್ಡೀವ್ಸ್ ಸಚಿವರು ಅಮಾನತ್ತಾಗಿದ್ದಾರೆ. ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಮುಂದುವರಿಸಿದ್ದಾರೆ. ವಿವಾದ ತಣ್ಣಗಾಗುತ್ತಿದ್ದಂತೆ ಚೀನಾದ ಮರಳಿದ ಮಾಲ್ಡೀವ್ಸ್ ಅಧ್ಯಕ್ಷ ಭಾರತದ ಹೆಸರು ಹೇಳದೆ ಹರಿಹಾಯ್ದಿದ್ದಾರೆ.

ಮಾಲ್ಡೀವ್ಸ್(ಜ.13) ಭಾರತ ಹಾಗೂ ಪ್ರಧಾನಿ ಮೋದಿಯನ್ನು ನಿಂದಿಸಿದ ಮಾಲ್ಡೀವ್ಸ್ ಸಚಿವರ ನಡೆಯಿಂದ ದ್ವೀಪ ರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಲ್ಡೀವ್ಸ್ ಪ್ರತಿಪಕ್ಷಗಳು ಭಾರತ ಹಾಗೂ ಮೋದಿ ಪರ ನಿಂತಿದ್ದಾರೆ. ಇತ್ತ ಮೂವರು ಮಾಲ್ಡೀವ್ಸ್ ಸಚಿವರು ವಜಾಗೊಂಡಿದ್ದಾರೆ. ಭಾರತೀಯರ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನದಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ನಿಧಾನವಾಗಿ ಈ ವಿವಾದಗಳಿಂದ ಮಾಲ್ಡೀವ್ಸ್ ಚೇತರಿಸಿಕೊಳ್ಳುತ್ತಿದ್ದಂತೆ, ಚೀನಾ ಪ್ರವಾಸದಲ್ಲಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಭಾಷಣ ಮತ್ತೆ ವಿವಾದದ ಕಿಡಿ ಹೊತ್ತಿಸಿದೆ. ನಾವು ಸಣ್ಣ ರಾಷ್ಟ್ರವಾಗಿರಬಹುದು. ಆದರೆ ನಮ್ಮನ್ನು ಬೆದರಿಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಮುಯಿಝು ಹೇಳಿದ್ದಾರೆ.

ಚೀನಾ ಪ್ರವಾಸದಿಂದ ವಾಪಸ್ ಆದ ಮುಯಿಝಿ ಇದೀಗ ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಭಾರತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಚಿವರ ವಜಾ, ಪ್ರತಿಪಕ್ಷಗಳ ತರಾಟೆ ನಡುವೆ  ಮಾಲ್ಡೀವ್ಸ್ ಅಧ್ಯಕ್ಷ ಎಚ್ಚರಿಕೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಮಾಲ್ಡೀವ್ಸ್ ಎಲ್ಲಾ ವಿಭಾಗದಲ್ಲೂ ಸಮರ್ಥವಾಗಿದೆ. ಸಣ್ಣ ರಾಷ್ಟ್ರ ಎಂದು ಕೆಣಕುವುದು ಸರಿಯಲ್ಲ. ನಮ್ಮನ್ನು ಬೆದರಿಸಲು, ಕೆಣಕಲು ನಾವು ಯಾವುದೇ ರಾಷ್ಟ್ರಕ್ಕೂ ಪರವಾನಗಿ ನೀಡಿಲ್ಲ ಎಂದು ಮುಯಿಝಿ ಹೇಳಿದ್ದಾರೆ.

ಮಾಲ್ಡೀವ್ಸ್ ಬುಕಿಂಗ್ ರದ್ದು; ಈಸ್ ಮೈ ಟ್ರಿಪ್‌ನಿಂದ ಚಲೋ ಆಯೋಧ್ಯೆ-ಲಕ್ಷದ್ವೀಪ ಆಫರ್ !

ಇತ್ತೀಚೆಗೆ ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮುಯಿಝಿ ಚೀನಾಪರ ಒಲವು ತೋರುತ್ತಿರುವುದು ಬಹಿರಂಗವಾಗಿ ಉಳಿದಿಲ್ಲ. ಅಧ್ಯಕ್ಷರಾಗಿ ಆಯ್ಕೆಯಾದ ಆರಂಭಿಕ ಹಂತದಲ್ಲೇ ಇಂಡಿಯಾ ಔಟ್ ಅನ್ನೋ ಹೋರಾಟ ಆರಂಭಿಸಿದ್ದರು. ಈ ಮೂಲಕ ಮಾಲ್ಡೀವ್ಸ್‌ನಲ್ಲಿದ್ದ ಭಾರತೀಯ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. 

ಚೀನಾ ಕೈಗೊಂಬೆ ರೀತಿ ವರ್ತಿಸುತ್ತಿರುವ ಮಾಲ್ಡೀವ್ಸ್‌ಗೆ ಸೆಡ್ಡು ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರು. ಇದು ಮಾಲ್ಡೀವ್ಸ್ ಸರ್ಕಾರದ ಆತಂಕಕ್ಕೆ ಕಾರಣವಾಗಿತ್ತು. ಕಾರಣ ಅತೀ ಹೆಚ್ಚು ಭಾರತೀಯರು ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುತ್ತಾರೆ. ಈ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೆ ಮಾಲ್ಡೀವ್ಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಭಾರತೀಯರ  ಹಾಗೂ ಪ್ರದಾನಿ ಮೋದಿ ನಿಂದಿಸುವ ಪ್ರಯತ್ನ ಮಾಡಿದ ಮಾಲ್ಡೀವ್ಸ್‌ಗೆ ತಕ್ಕ ಮಂಗಳಾರತಿ ಆಗಿದೆ. ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. 

 

ಮಾಲ್ಡೀವ್ಸ್ ಕಟ್ಟಿ ಬೆಳೆಸಲು ನೆರವಾದ ಬಾಲಿವುಡ್ ಇದೀಗ ತಿರುಗಿಬಿದ್ದಿದೆ, ಮಾಜಿ ಅಧ್ಯಕ್ಷ ಬೇಸರ!
 

click me!